ರಾಜ್ಯ

ಟಿಪ್ಪು ಜಯಂತಿ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ : ಹಲವೆಡೆ ನೂರಾರು ಕಾರ್ಯಕರ್ತರ ಬಂಧನ

ಮಡಿಕೇರಿ/ಯಲ್ಲಾಪುರ/ಹುಬ್ಬಳ್ಳಿ : 144 ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಟಿಪ್ಪು ಜಯಂತಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ ಬಿಜೆಪಿಯ ನೂರಾರು ಕಾರ್ಯಕರ್ತರ ಬಂಧನ ಮಾಡಲಾಯಿತು.

ಹುಬ್ಬಳ‍್ಳಿಯಲ್ಲಿ ಸಂಸದ ಪ್ರಲ್ಹಾದ ಜೋಶಿ ಪೊಲೀಸರ ವಿರುದ್ದ ಕಿಡಿಕಾರಿದ್ದು, ನಮ್ಮ ಹಕ್ಕುಗಳನ್ನು ಮೊಟಕುಗೊಳಿಸಲು ನೀವು ಯಾರು. ಯಾವ ಉದ್ದೇಶದಿಂದ ಪ್ರತಿಬಂಧಾಕಾಜ್ಞೆ ಜಾರಿ ಮಾಡಿದ್ದೀರಿ ಎಂದು ತರಾಟೆ ತೆಗೆದುಕೊಂಡರು.

ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ. ರವಿ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಂಧೀಸಲು ಮುಂದಾದ ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿದ ಸಿ.ಟಿ. ರವಿ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಇನ್ನೂ ಮಡಿಕೇರಿಯಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿಯೇ ತರಾಟೆ ತೆಗೆದುಕೊಂಡ ಶಾಸಕ ಅಪ್ಪಚ್ಚು ರಂಜನ್, ಮಾಜಿ ಸ್ಪೀಕರ್ ಕೆ.ಜೆ. ಬೋಪಯ್ಯ ಸರಕಾರ ಹಾಗೂ ಟಿಪ್ಪು ವಿರುದ್ದ ಘೋಷಣೆ ಕೂಗಿ ತಮ್ಮ ವಿರೋಧ ವ್ಯಕ್ತಪಡಿಸಿದರು.

ಇದರಿಂದಾಗಿ ಕೆಲ ಕಾಲ ಗಲಿಬಿಲಿಗೊಂಡ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ತಬ್ಬೀಬಾದರು. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಂಧಿಸಿ ಆನಂತರ ಬಿಡುಗಡೆಗೊಳಿಸಿದರು. ಆನಂತರ ಮಡಿಕೇರಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ 56 ಜನರ ವಶಕ್ಕೆ ಪಡೆಯಲಾಯಿತು.

ಅದೇ ರೀತಿ ಉತ್ತರ ಕನ್ನಡದ ಯಲ್ಲಾಪುರದಲ್ಲಿ ಟಿಪ್ಪು ಜಯಂತಿಗೆ ವಿರೋಧಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ ಹಿನ್ನಲೆಯಲ್ಲಿ 7 ಬಿಜೆಪಿ ಪ್ರತಿಭಟನಾ ಕಾರರ ಬಂಧನ ಮಾಡಲಾಯಿತು.

Please follow and like us:

Leave a Reply

Your email address will not be published. Required fields are marked *