ರಾಜ್ಯ

ಚಿಕಿತ್ಸೆ ನಿರಾಕರಿಸಿದಕ್ಕೆ ರೋಗಿಯೊಂದಿಗೆ ವಿಜಯಪುರ ಡಿಸಿ ಕಚೇರಿಗೆ ಬಂದ ಕುಟುಂಬಸ್ಥರು…!





ವಿಜಯಪುರ prajakiran.com : ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರೋಗಿಯ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ನಿರಾಕರಿಸಿದ ಹಿನ್ನೆಲೆ ಕುಟುಂಬಸ್ಥರು ಕಾರ್‍ನಲ್ಲಿ ರೋಗಿಯೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಘಟನೆ ಶುಕ್ರವಾರ ನಡೆದಿದೆ.

ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದ ಜಮೀಲ್ ಅಹಮ್ಮದ್ ಎಂಬವರು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು.

ಗುರುವಾರ ತಡ ರಾತ್ರಿ ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆತಂದಿದ್ದಾರೆ.



ರೋಗಿ ತೀವ್ರ ಉಸಿರಾಟದಿಂದ ಬಳಲಿದರೂ ಕೂಡ ನಗರದ ಖಾಸಗಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡದೇ ಬೇರೆ ಬೇರೆ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಕೊನೆಗೆ ಜಿಲ್ಲಾಸ್ಪತ್ರೆಗೆ ತೆರಳಿದಾಗ, ಜಿಲ್ಲಾಸ್ಪತ್ರೆಯಲ್ಲಿ ರೋಗಿಯನ್ನು ಚೆಕ್ ಮಾಡಿ ದಾಖಲಿಸಿಕೊಳ್ಳದೇ ಕಳುಹಿಸಲಾಗಿದೆ.

ಹೀಗಾಗಿ ರಾತ್ರಿಯಿಡಿ ಅಲೆದಾಡಿದ ರೋಗಿಯ ಕುಟುಂಬದವರು, ರೋಗಿ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ.



ಈ ಸಂದರ್ಭ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಕುಟುಂಬಸ್ಥರೊಂದಿಗೆ ಸ್ಪಂದಿಸಿ, ರೋಗಿಯ ಸ್ಥಿತಿಯನ್ನು ಕಂಡು, ಜಿಲ್ಲಾ ವೈದ್ಯಾಧಿಕಾರಿಗೆ ಫೋನ್ ಮಾಡಿ, ರೋಗಿಯನ್ನು ದಾಖಲಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಕೊರೋನಾ ಸೋಂಕಿನಿ ಹಿನ್ನೆಲೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ.

ಗುಮ್ಮಟ ನಗರಿ ವಿಜಯಪುರದಲ್ಲಿಯೂ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಸಂಕಷ್ಟ ಕಾಲದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.



Please follow and like us:
PK Team
1999ರಲ್ಲಿ ಕಾನೂನು ಪದವಿ ಓದುತ್ತಿರುವಾಗಲೇ ಉತ್ತರ ಕರ್ನಾಟಕ ಕನ್ನಡ ದಿನ ಪತ್ರಿಕೆಯ ಕಲಬುರಗಿ ಜಿಲ್ಲೆಯ ವರದಿಗಾರನಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಾಗರಾಜ ಕಿರಣಗಿ ಅವರು ಆ ಪತ್ರಿಕೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ, ಆನಂತರ 2002ರಲ್ಲಿ ಕಲಬುರಗಿ ಜಿಲ್ಲೆಯಿಂದ ಬೀದರ್ ಜಿಲ್ಲೆಯ ಉದಯ ಟಿವಿ ವರದಿಗಾರನಾಗಿ ಪ್ರಯಾಣ ಬೆಳೆಸಿದರು. 2002ರ ಜೂನ್ ನಿಂದ 2005ರ ಡಿಸೆಂಬರ್ ವರೆಗೆ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿ, 2006ರ ಜನವರಿಯಿಂದ ಧಾರವಾಡ ಜಿಲ್ಲೆಯ ಈ ಟಿವಿ ಕನ್ನಡ ವರದಿಗಾರರಾಗಿ ಸೇವೆ ಪ್ರಾರಂಭಿಸಿದರು. 2006ರಿಂದ 2008ರ ವರೆಗೆ ಧಾರವಾಡದಲ್ಲಿ ಕೆಲಸ ಮಾಡಿದ ಬಳಿಕ 2008ರಿಂದ 2009ರ ನವೆಂಬರ್ ವರೆಗೆ ಗದಗ,ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯ ಜೀ ಕನ್ನಡ ವಾಹಿನಿ ವರದಿಗಾರನಾಗಿ ಕೆಲಸ ನಿರ್ವಹಿಸಿದರು. 2009ರ ಡಿಸೆಂಬರ್ ನಿಂದ 2011ರ ಎಪ್ರಿಲ್ ವರೆಗೆ ಹಾಸನ ಜಿಲ್ಲೆಯ ಸುವರ್ಣ ನ್ಯೂಸ್ ವರದಿಗಾರರಾಗಿ ಕಾರ್ಯ ನಿರ್ವಹಣೆ ಮಾಡಿದರು. ಆ ಬಳಿಕ 2011ರ ಮೇ ನಿಂದ ಬಳ್ಳಾರಿ ಜಿಲ್ಲೆಯ ಉದಯವಾಣಿ ಕನ್ನಡ ದಿನಪತ್ರಿಕೆ ವರದಿಗಾರರಾಗಿ ಕಾರ್ಯ ನಿರ್ವಹಿಸಿ, 2012ರ ಜನೆವರಿಯಿಂದ 2016ರ ಮೇ ವರೆಗೆ ವಿಜಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ, ಆ ಬಳಿಕ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು. 2016ರಿಂದ 2017 ರವರೆಗೆ ಧಾರವಾಡ ಜಿಲ್ಲೆಯ ಸಿ 9 ನ್ಯೂಸ್ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅದಾದ ಬಳಿಕ ಮತ್ತೆ 2017ರಿಂದ 2018ರ ಮಾರ್ಚ್ ವರೆಗೆ ಧಾರವಾಡ ಜಿಲ್ಲೆಯ ಸುವರ್ಣ ನ್ಯೂಸ್ ವರದಿಗಾರರಾಗಿ ಸೇವೆ ಸಲ್ಲಿಸಿದ ನಾಗರಾಜ ಕಿರಣಗಿ ಅವರು ತಮ್ಮ ನೆಚ್ಚಿನ ಗುರುಗಳು, ಮಾರ್ಗದರ್ಶಕರು ಆಗಿರುವ ಹಿರಿಯ ಆಧ್ಯಾತ್ಮಿಕ ಚಿಂತಕರು ಹಾಗೂ ಪ್ರಖ್ಯಾತ ನಾಟಿ ವೈದ್ಯರಾದ ಶ್ರೀ ಶಶಿಕಾಂತ ವಿ. ದೇವಾಡಿಗ ಅವರ ಸಲಹೆ ಮೇರೆಗೆ ಸುದೀರ್ಘ 20 ವರ್ಷಗಳ ಅನುಭವದ ಆಧಾರದ ಮೇಲೆ ತಮ್ಮದೇ ಆದ ಪ್ರಜಾಕಿರಣ ಮೀಡಿಯಾ ಹೌಸ್ ಸ್ಥಾಪಿಸಿ, ಅದರ ಮೂಲಕ www.prajakiran. com online news portal ಹಾಗೂ prajakiran YouTube channel ಮುನ್ನಡೆಸುತ್ತಿದ್ದಾರೆ. ' ಕೇವಲ ಮೂರು ವರ್ಷಗಳ ನಂತರ ನಿಮ್ಮ ನೆಚ್ಚಿನ(ಪ್ರಜಾಕಿರಣ.ಕಾಮ್) Prajakiran.com ನಲವತ್ತು ಲಕ್ಷ ಓದುಗರನ್ನು ಹೊಂದಿದ ಸಾರ್ಥಕ ಭಾವ, ಯೂಟ್ಯೂಬ್ ಚಾನಲ್ ಒಂದು ಕೋಟಿ ಇಪ್ಪತ್ತು ಲಕ್ಷ ವೀಕ್ಷಕರನ್ನು ಹೊಂದಿರುವ ಸಂಭ್ರಮ, follow/like: Prajakiran News ಫೇಸ್ ಬುಕ್ ಪೇಜ್ ಐದು ಸಾವಿರ ಗಡಿ ತಲುಪಿರುವ ಸಮಾಧಾನ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ಅದು ಸದಾ ಕಾಲ ಹೀಗೆ ಇರಲಿ ನಾಗರಾಜ ಕಿರಣಗಿ
http://prajakian.com

Leave a Reply

Your email address will not be published. Required fields are marked *