ಧಾರವಾಡ prajakiran.com : ಕಳೇದ ಒಂದು ವಾರದಲ್ಲಿ ಏಕಾಎಕಿ 14 ಜನರ ಸಾವು ಕಂಡಿದ್ದ ಧಾರವಾಡ ಜಿಲ್ಲೆ ಶುಕ್ರವಾರ ಸ್ವಲ್ಪ ನಿರಾಳವಾಗಿದೆ.
ಕೋವಿಡ್ ಪಾಸಿಟಿವ್ ಹೊಂದಿದ್ದ ಧಾರವಾಡ ಜಿಲ್ಲೆಯ ಒಬ್ಬರು ಹಾಗೂ ಬಳ್ಳಾರಿ ಜಿಲ್ಲೆಯ ತಲಾ ಒಬ್ಬರು ಎರಡು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.
ಸೋಂಕಿತ ಪಿ 25518 ( 40 , ಪುರುಷ ) ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ತುಂಗಭದ್ರಾ ಡ್ಯಾಂ ನಿವಾಸಿ. ಅವರು ಜುಲೈ 6 ರಂದು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ನಲ್ಲಿ ದಾಖಲಾಗಿದ್ದರು. ಜುಲೈ 9ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅದೇ ರೀತಿ ಸೋಂಕಿತ ಪಿ 30715( 60 , ಪುರುಷ) ಹಳೆಹುಬ್ಬಳ್ಳಿಯ ಸದರಸೋಫಾ ನಿವಾಸಿ. ಜುಲೈ 7 ರಂದು ಹುಬ್ಬಳ್ಳಿಯ ಕಿಮ್ಸ್ ಗೆ ಚಿಕಿತ್ಸೆಗೆ ದಾಖಲಾಗಿದ್ದರು.ಅವರು ಚಿಕಿತ್ಸೆ ಫಲಿಸದೆ ಜುಲೈ 10 ರಂದು ಶುಕ್ರವಾರ ಮೃತಪಟ್ಟಿದ್ದಾರೆ.
ಮೃತರ ಇಬ್ಬರು ಪಾರ್ಥಿವ ಶರೀರಗಳನ್ನು ಕೋವಿಡ್ 19 ನಿಯಮಾನುಸಾರ ಪ್ಯಾಕಿಂಗ್ ಮಾಡಿ, ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.