ಬೆಂಗಳೂರು prajakiran.com : ವಿದೇಶದಿಂದ ಬಂದವರಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ 83 ಹೋಟೆಲ್ ಬುಕ್ಕಿಂಗ್ ಮಾಡಲಾಗಿದೆ.
ಅದರಲ್ಲಿ ಫೈವ್ ಸ್ಟಾರ್, ತ್ರೀ ಸ್ಟಾರ್ ಹಾಗೂ ಬಜೆಟ್ ಹೋಟೆಲ್ ಗಳಿವೆ. ತಮ್ಮಅಗತ್ಯಕ್ಕೆ ತಕ್ಕಂತೆ ಅವರು ಹೋಟೆಲಗಳನ್ನು ಆಯ್ದುಕೊಳ್ಳಬಹುದಾಗಿದೆ.
ಈ ಹೋಟೆಲಗಳಿಂದ ವಿದೇಶದಿಂದ ಬಂದ ಜನರಿಗೆ ಹೊರೆಯಾಗದಂತೆ ಬಿಬಿಎಂಪಿಯೇ ಇವುಗಳಿಗೆ ಕನಿಷ್ಟ ದರ ನಿಗದಿ ಪಡಿಸಿ ಸೌಲಭ್ಯ ಒದಗಿಸಲು ಮುಂದಾಗಿದೆ.
ಲಂಡನ್ ಹಾಗೂ ದುಬೈ ನಿಂದ ಹೊರನಾಡ ಕನ್ನಡಿಗರ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಅಗತ್ಯ ಸಿದ್ದತೆ ಮಾಡಿಕೊಂಡಿದೆ.
ಈ ನಡುವೆ ಆರ್. ಆರ್. ನಗರದ ಜನತೆ ತಮ್ಮ ಬಡಾವಣೆಯಲ್ಲಿರುವ ಹೋಟೆಲ್ ಗಳಲ್ಲಿ ಅವರನ್ನು ಇರಿಸದಂತೆ ವಿರೋಧ ವ್ಯಕ್ತಪಡಿಸಿದ್ದರು.
ದೇಶದ ಬೇರೆ ಬೇರೆ ರಾಜ್ಯಗಳು ಹಲವು ದೇಶಗಳಿಂದ ಆಗಮಿಸಿದವರಿಗೆ ಸ್ವಾಗತ ಕೋರುತ್ತಿವೆ.
ಇಂದು ಆಗಮಿಸುವ ಭಾರತೀಯರನ್ನು ಮೊದಲ 14 ದಿನ ಐಷಾರಾಮಿ ಹೋಟೆಲ್ ಗಳಲ್ಲಿ ಕ್ವಾರೈನ್ಟೈನ್ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತಹೆಚ್. ಟಿ ಅನಿಲಕುಮಾರ ತಿಳಿಸಿದ್ದಾರೆ.