ಹುಬ್ಬಳ್ಳಿ-ಧಾರವಾಡ prajakiran.com : ಕರೋನಾ ಲಾಕ್ ಡೌನ್ ನಡುವೆಯೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಖಜಾನೆಗೆ ಕೋಟಿ ಕೋಟಿ ಹಣ ಹರಿದು ಬರ್ತಿದೆ.
ಆಸ್ತಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಮಾಸ್ಟರ್ ಪ್ಲ್ಯಾನ್ ಮಾಡಿದೆ.ಆರ್ಥಿಕ ಸಂಕಷ್ಟದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಲಾಕ್ ಡೌನ್ ಬರಸಿಡಿಲಾಗಿ ಬಡಿದಿತ್ತು.
ಹೀಗಾಗಿ ಆರ್ಥಿಕವಾಗಿ ಚೇತರಿಕೆಗೆ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಹಾಗೂ ಅವರ ಅಧಿಕಾರಿಗಳ ತಂಡ ಆನ್ ಲೈನ್ ಮೂಲಕವೇ ಆಸ್ತಿ ತೆರಿಗೆ ಕಟ್ಟುವಂತೆ ಪ್ಲಾನ್ ಮಾಡಿದ್ದರು.
ಜೊತೆಗೆ ಆನ್ ಲೈನ್ ಮೂಲಕ ಟ್ಯಾಕ್ಸ್ ಪಾವತಿ ಮಾಡಿದವರಿಗೆ ಡಿಸ್ಕೌಂಟ್ ಕೂಡ ಘೋಷಿಸಿದ್ದರು.
ಇದರಿಂದಾಗಿ ಪಾಲಿಕೆಯ ಖಜಾನೆಗೆ ಒಂದು ತಿಂಗಳಲ್ಲೇ ಹರಿದುಬಂತು 2 ಕೋಟಿ ಹಣ. ಸಾಮಾಜಿಕ ಜಾಲತಾಣಗಳ ಮೂಲಕ ಆಸ್ತಿ ತೆರಿಗೆ ಕಟ್ಟುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದರು.
ಮೇ ಅಂತ್ಯದವರೆಗೆ ಶೇಕಡಾ 5 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಿದ್ದರಿಂದ ಅವಳಿ ನಗರದ ಜನರು ಕೂಡ ಉತ್ಸುಕರಾಗಿ ಮನೆಯಿಂದಲೇ ಆನ್ ಲೈನ್ ಪಾವತಿ ಮಾಡಿದ್ದರು.
ಲಾಕ್ ಡೌನ್ ನಡುವೆ ಆಸ್ತಿ ತೆರಿಗೆ ಸಂಗ್ರಹಕ್ಕೆ ಆನ್ ಲೈನ್ ಬಳಸಿಕೊಂಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.