ಬೆಂಗಳೂರು prajakiran.com : ರಾಜ್ಯದಲ್ಲಿ ಮಹಾಮಾರಿ ಸೋಂಕಿತರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಸೋಮವಾರ ಬೆಳಗ್ಗೆ ಕೇವಲ 10 ಪ್ರಕರಣ ಬೆಳಕಿಗೆ ಬಂದಿದ್ದರೆ, ಸಂಜೆ ವೇಳೆ ಮತ್ತೇ 14 ಪ್ರಕರಣ ದೃಢಪಟ್ಟಿವೆ.
ಆ ಮೂಲಕ ಕರ್ನಾಟಕದ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ. ಇಷ್ಟು ದಿನಗಳ ಕಾಲ ಗ್ರೀನ್ ಜೋನ್ ನಲ್ಲಿದ್ದ ಹಾಸನಕ್ಕೂ ಕರೋನಾ ಸೋಂಕು ವಕ್ಕರಿಸಿದೆ.
ಹಾಸನ ಜಿಲ್ಲೆ ಇಷ್ಟು ದಿನಗಳ ಕಾಲ ಹಸಿರು ವಲಯದಲ್ಲಿತ್ತು. 30 ವರ್ಷದ ಮಹಿಳೆಗೆ ಕರೋನಾ ಹರಡಿದೆ. ಇವರಿಗೆ ಮುಂಬೈ ನಂಟು ಇದೆ.
ಆ ಮಹಿಳೆ ಸದ್ಯ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಹಾಸನ ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವಅಗತ್ಯವಿಲ್ಲ.
ಆ ಮಹಿಳೆ ಮಂಡ್ಯದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಇವರು ಮಂಡ್ಯದಲ್ಲಿಯೇ ವಾಸವಿದ್ದರು. ಹೀಗಾಗಿ ಅವರೊಂದಿಗೆ ಇದ್ದ ಮಂಡ್ಯದ ಇಬ್ಬರಿಗೆ ಮುಂಬೈ ನಂಟು ಹೊಂದಿರುವುದು ಗೊತ್ತಾಗಿದೆ.
ಬೆಂಗಳೂರಿನ ಪಾದರಾಯನಪುರದ ಮಹಿಳೆಗೆ ಕರೋನಾ ಸೋಂಕು ಹರಡಿದೆ. ಅವರು ಅನಂತಪುರ ಹೋಗಿ ಬಂದಿದ್ದವರ ಜೊತೆಗೆ ಸಂಪರ್ಕ ಹೊಂದಿದ್ದರು ಎಂಬ ಆತಂಕಕಾರಿ ಸಂಗತಿ ಹರಡಿದೆ.
ಅದೇ ರೀತಿ ದಾವಣಗೆರೆ 3, ಬೆಂಗಳೂರಿನ 2, ಬೀದರ 2, ಬಾಗಲಕೋಟೆ 2, ಮಂಡ್ಯ 2, ಹಾಸನ, ಹಾವೇರಿ, ಕಲಬರುಗಿ , ವಿಜಯಪುರದಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿವೆ.