ಅಂತಾರಾಷ್ಟ್ರೀಯ

ರಾಹುಲ್ ಗಾಂಧಿ ಕಿವಿ ಬಿಚ್ಚಿ ಕೇಳಿ ಎಂದ ಅಮಿತ್ ಶಾ

ಹುಬ್ಬಳ್ಳಿ prajakiran.com : ಧರ್ಮದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಈ ದೇಶವನ್ನು ವಿಭಜಿಸಿದೆ. ಹಂಚಲಾಗಿದೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದರು.

ಅವರು ಶನಿವಾರ ಸಂಜೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಜನ ಜಾಗೃತಿ ಸಮಾವೇಶ ಉದ್ದೇಶಿಸಿ ಮಾತನಾಡಿ, ರಾಹುಲ್ ಗಾಂಧಿ ಕಿವಿ ಬಿಚ್ಚಿ ಕೇಳಿ, ರಾಹುಲ್ ಗಾಂಧಿ ನಿಮ್ಮ ಅಜ್ಜ ನೆಹರೂ ಎರಡು ದೇಶ ಅಲ್ಪಸಂಖ್ಯಾತರಿಗೆ ನಾಗರಿಕತೆ ಓದು ಬರಹ ಎಲ್ಲವೂ ಕೊಡ್ತಿವಿ ಎಂದು ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.

ಭಾರತ ನಮ್ಮ ದೇಶ. ಇಲ್ಲಿ ಮುಸ್ಲಿಂ, ಕ್ರಿಸ್ತರಿಗೆ, ಪಾರ್ಸಿ, ಜೈನ ಬೌದ್ದರಿಗೆ ಎಲ್ಲಾ ಸೌಲಭ್ಯ ಕೊಡಲಾಗಿದೆ. ಆದರೆ ಪಾಕಿಸ್ತಾನ, ಬಾಂಗ್ಲಾ ಏನ್ ಮಾಡಿದೆ.

ಅಲ್ಲಿ ಆಗ ಶೇ. 30ರಷ್ಟು ಇದ್ದ ಜನ ಈಗ ಶೇ. 3ಕ್ಕೆ ಬಂದಿದೆ. ಬಾಂಗ್ಲಾದಲ್ಲಿ ಶೇ. 30ರಷ್ಟು ಇದ್ದ ಜನ ಈಗ ಶೇ. 7ಕ್ಕೆ ಬಂದಿದೆ ಎಂದು ಗುಡುಗಿದರು.

ರಾಹುಲ್ ಗಾಂಧಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರಿಯಾಗಿ ಓದಿ, ಅದನ್ನು ಯಾರನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.

ಮುಸ್ಲಿಂ ಬಾಂಧವರಿಗೆ ಯಾವುದೇ ತೊಂದರೆ ಆಗಲ್ಲ. ಪೌರತ್ವ ತೆಗೆದುಕೊಳ್ಳುವುದಲ್ಲ. ಕೊಡುವುದಲ್ಲ. ಕಾಂಗ್ರೆಸ್ ದೇಶದ ಜನರ ದಾರಿ ತಪ್ಪಿಸಿ, ರಸ್ತೆಗೆ ಇಳಿಸುತ್ತಿದೆ ಎಂದು ಆಪಾದಿಸಿದರು.

ರಾಹುಲ್ ಬಾಬಾ, ಮಮತಾ ಬ್ಯಾರ್ನಜಿ, ಅರವಿಂದ ಕ್ರೇಜಿವಾಲ್ ಇದರ ಹೊಣೆ ಹೊರಬೇಕು. ದೇಶದಲ್ಲಿ ನಡೆದ ಗಲಭೆ ಹೊಣೆ ಹೊರಬೇಕು ಎಂದು ಛೇಡಿಸಿದರು.

ವಿರೋಧ ಮಾಡುವವರಿಗೆ ನಾನು ಪ್ರಶ್ನೆ ಮಾಡುತ್ತೇನೆ. ಅಲ್ಲಿಯ ಎಲ್ಲ ಜನ ಹೋದರು ಉತ್ತರ ಕೊಡುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ ಅಮಿತ್ ಶಾ ಅವರನ್ನು ಕೊಲ್ಲಲಾಗಿದೆ ಇಲ್ಲವೇ ಓಡಿಸಲಾಗಿದೆ. ಇಲ್ಲವೇ ಮತಾಂತರಗೊಳಿಸಲಾಗಿದೆ ಎಂದು ದೂರಿದರು.

ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನದಲ್ಲಿ ತಂದೆ ತಾಯಿ ಎದುರು ಮಕ್ಕಳ, ಸಹೋದರರ ಎದುರು ಸಹೋದರಿಯರ ಹಾಗೂ ಪತಿಯೆದುರು ಪತ್ನಿ ಅತ್ಯಾಚಾರ ಮಾಡಲಾಗಿದೆ ಎಂದು ಆಪಾದಿಸಿದರು. ಅಲ್ಲಿಂದ ಬಂದವರಿಗೆ ಶರಣಾಗತಿ ತೆಗೆದುಕೊಂಡು ಬಂದವರಿಗೆ ನಾವು ಪೌರತ್ವ ಕೊಡ್ತಿವಿ ಎಂದು ಸಮರ್ಥಿಸಿಕೊಂಡರು.

ಹುಬ್ಬಳ್ಳಿ-ಧಾರವಾಡ ಜನತೆಗೆ ಕೇಳ್ತಿನಿ ಪರಿವಾರದ ಸದಸ್ಯರಿಗೆ ರಕ್ಷಣೆಗೆ ಕೋಡಲು ರಾಹುಲ್ ಗಾಂಧಿ ಕಿವಿಗೆ ಕೇಳುವಷ್ಟು ಗಟ್ಟಿಯಾಗಿ ಹೇಳಿ ಮಾನವ ಅಧಿಕಾರ ರಕ್ಷೆ ಕೊಡಲು ಪ್ರಧಾನಿ ಮೋದಿ ಬಂದಿದ್ದಾರೆ.

ನಿಮ್ಮ ತಾತ ಮಾಡಿದ ತಪ್ಪುಗಳನ್ನು ಮೋದಿಯವರು ಸರಿಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕಾಶ್ಮೀರದಲ್ಲಿನ 370 ಕಲಂ ರದ್ದು ಪಡಿಸಿದ್ದು, ರಾಮಮಂದಿರ ನಿರ್ಮಾಣಕ್ಕೂ ವಿರೋಧ ಮಾಡ್ತಿದೆ ಎಂದು ಕಿಡಿಕಾರಿದರು.

ಮೌನಿ ಬಾಬಾ ಮನಮೋಹನ್ ಸಿಂಗ್ ಬಾಯಿ ಬಿಡಲಿಲ್ಲ. ಜೆಡಿಎಸ್, ಆಮ್ ಆದ್ಮಿ ಅವರಿಗೆ ಏನ್ ತೊಂದರೆ ಆಗ್ತಿದೆ, ವೋಟ್ ಬ್ಯಾಂಕ್ ರಾಜನೀತಿ ಮಾಡುತ್ತಿದ್ದಾರೆ. ಬಿಜೆಪಿ ರಾಜಕೀಯ ಮಾಡ್ತಾಯಿಲ್ಲ.

ದೇಶದ ಮೊದಲ ಪ್ರಧಾನಿ ನೆಹರೂ , ಮೊದಲ ಗೃಹ ಸಚಿವ ಸರ್ದಾರ ಪಟೇಲ್ ವಲ್ಲಭಬಾಯಿ, ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ ಅವರು ಕೊಟ್ಟ ವಚನ ನಿಭಾಯಿಸುತ್ತಿದ್ದೇವೆ.

70 ವರ್ಷ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಜನರಿಗೆ ಸೌಲಭ್ಯ ಕೊಡಲಿಲ್ಲ. ಅದನ್ನು ನಾವು ನಿಭಾಯಿಸುತ್ತಿದ್ದೇವೆ. ರಾಷ್ಟ್ರಪಿತ ಗಾಂಧಿಯವರು ಕೂಡ ಇದನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಅಮಿತ್ ಶಾ ವಿವರಿಸಿದರು.

ಪಾಕಿಸ್ತಾನ ಪರ ವಾದ ಮಂಡಿಸುವ ಇಮ್ರಾನ್ ಖಾನ್ ಗೂ ರಾಹುಲ್ ಗಾಂಧಿ ನಡುವೆ ಎನ್ ಸಂಬಂಧವಿದೆ. ಇಬ್ಬರ ನೀತಿ, ಸಿದ್ದಾಂತ ಒಂದೇ ಇವೆ.

ವಿಶ್ವಸಂಸ್ಥೆಯ ಎದುರು ಕಾಂಗ್ರೆಸ್ ನಮ್ಮ ದೇಶದ ಮರ್ಯಾದೆ ಕಳೆದಿದೆ. ಜೆ ಎನ್ ಯು ವಿಶ್ವವಿದ್ಯಾಲಯದಲ್ಲಿ ಗಲಭೆಗೆ ಕಾಂಗ್ರೆಸ್ ಕುಮ್ಮಕ್ಕು ನೀಡ್ತಾಯಿದೆ ಎಂದು ದೂರಿದರು.

Please follow and like us:

Leave a Reply

Your email address will not be published. Required fields are marked *