ಧಾರವಾಡ : ಕಚೇರಿಗಳಲ್ಲಿ ಕೆಲಸದಿಂದ ತಪ್ಪಿಸಿಕೊಳ್ಳುವ ಪ್ರವೃತ್ತಿಯ ಮೈಗಳ್ಳರಿಗೆ, ತಮ್ಮ 35 ವರುಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಯಾವುದೇ ತರಹದ ಒಂದೂ ದಿನ ರಜೆ ಪಡೆಯದೆ `ರಜೆ ರಹಿತ ಸೇವೆ’ ಸಲ್ಲಿಸಿದ ಅಶೋಕ ಬಾಬರ ಅವರಿಗೆ`ಪುರಸ್ಕಾರ’ ಸಂಸ್ಥೆ ಪರವಾಗಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
`ಪುರಸ್ಕಾರ’ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೃಷ್ಣ ಜೋಶಿ ಮಾತನಾಡಿ, ವಿಜಯ ಬ್ಯಾಂಕಿನಲ್ಲಿ ಸೇವೆಗೆ ಸೇರಿದಾಗಿನಿಂದ ನಿವೃತ್ತಿ ದಿನದವರೆಗೂ ಅಖಂಡ 35 ವರುಷ 1 ತಿಂಗಳು 16 ದಿನಗಳ ಕಾಲ ರಜೆ ರಹಿತ ಸೇವೆಯನ್ನು ಸಲ್ಲಿಸಿ ದಾಖಲೆ ಮಾಡಿದ ಅಶೋಕ ಬಾಬರ ಸುಖ, ದುಃಖಗಳ ಸಂದರ್ಭದಲ್ಲೂ, ತಂದೆ ತೀರಿಕೊಂಡ ಸಂದರ್ಭದಲ್ಲಿಯೂ ರಜೆ ಹಾಕದೇ, ಬ್ಯಾಂಕಿನ ಕೆಲಸದ ಅವಧಿಯು ಮುಗಿದ ನಂತರವೇ ತಂದೆಯ ಅಂತ್ಯಕ್ರಿಯೆಗೆ ಹಾಜರ ಆಗಿದ್ದು, ತನ್ನ ಮದುವೆಯನ್ನು ಬ್ಯಾಂಕ್ ರಜೆ ದಿನವಾದ ರವಿವಾರ ದಿನ ಮಾಡಿಕೊಂಡಿರುವುದು, ಬಸವಣ್ಣನವರು ಹೇಳಿದ `ಕಾಯಕವೇ ಕೈಲಾಸ’ ಎಂಬ ಅಮರವಾಣಿಯನ್ನು ತಮ್ಮ ರಜೆರಹಿತ ಬ್ಯಾಂಕ್ ಸೇವೆಯಲ್ಲಿ ಸಾಧಿಸಿದ್ದು, ಇತರರಿಗೆ ಮಾದರಿಯಾಗಿದೆ ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಸೇತುರಾಮ ಹುನಗುಂದ, ಶ್ರೀನಿವಾಸ ವಾಡಪ್ಪಿ, ಎಂ. ಬಿ. ಬೇನಪ್ಪನವರ, ಮಹೇಶ ಕಲ್ಲಿಕರೆಣ್ಣವರ, ಎಸ್. ವೈ. ಕುಲಕರ್ಣಿ , ಪಂಡಿತ ಮುಂಜಿ, ವೀರಣ್ಣ ಹಿರೇಮಠ, ಎಸ್.ಬಿ. ಗುತ್ತಲ, ಮುರಳೀಧರರಾವ್, ಪ್ರೊ. ಬೆಂಜಾಮಿನ್ ಸಕ್ಕರಿ, ಪ್ರಾಣೇಶ ಪಾಶ್ಚಾಪೂರ, ಪಿ. ಕೆ. ಪಾಟೀಲ, ಎ. ಆರ್. ಜೋಶಿ, ರವಿ ದೇಸಾಯಿ ಉಪಸ್ಥಿತರಿದ್ದರು.
ಧಾರವಾಡ : ತಾಲೂಕಿನ ಮುಗಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಕಂಡರೂ ಮೂಲಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಆರೋಪಿಸಿ ನೂರಾರು ಮಕ್ಕಳು ಧಾರವಾಡ ಜಿಲ್ಲಾಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಸೋಮವಾರ ಮುಗಳಿ ಗ್ರಾಮಸ್ಥರು ಹಾಗೂ ರೈತ-ಕೃಷಿ ಕಾರ್ಮಿಕರ ಸಂಘಟನೆಯ ಕಾರ್ಯಕರ್ತರು ಜಿಲ್ಲಾಡಳಿತದ ವಿರುದ್ದ ಘೋಷಣೆ ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ಶಾಲೆಯಲ್ಲಿರುವ 180 ಮಕ್ಕಳು ಶಿಥಿಲಾವ್ಯಸ್ಥೆಯ ಕಟ್ಟಡದಲ್ಲಿಯೇ ಓದುವಂತಾಗಿದೆ. ಮಕ್ಕಳಿಗೆ ಕೊಠಡಿ, ಶಿಕ್ಷಕರ ಕೊರತೆ, ನೀರಿನ ಸೌಲಭ್ಯ, ಶೌಚಾಲಯವಾಗಲಿ ಇಲ್ಲದಿರುವುದು ಖೇದಕರ ಸಂಗತಿ. ಈ […]
ಹುಬ್ಬಳ್ಳಿ : ಧಾರವಾಡ ಜಿಲ್ಲಾಧಿಕಾರಿ ಎಂ. ದೀಪಾ ಹೊಸೂರಿನಿಂದ ಉಣಕಲ್ವರೆಗೆ 4 ಕಿ.ಮೀ. ಕಾಲನಡಿಗೆ ಮೂಲಕ ಬಿಆರ್ಟಿಎಸ್ ಕಾಮಗಾರಿಯ ಪ್ರಗತಿ ವೀಕ್ಷಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಆರ್ಟಿಎಸ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಯುಜಿಡಿ ಡ್ರೇನ್ ಹಾಗೂ ಪುಟ್ಪಾತ್ ನಿರ್ಮಾಣ ಕಾಮಗಾರಿಗಳ ನಿರ್ಮಾಣ ಬಾಕಿಯಿವೆ. ಈ ಕಾಮಗಾರಿಗಳನ್ನು ನಿಗದಿತ ಅವಧಿದಲ್ಲಿ ಪೂರ್ಣಗೊಳಿಸಲು ಹೆಚ್ಚಿನ ತಂಡ ಹಾಗೂ ವೇಳಾಪಟ್ಟಿಯಲ್ಲಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು. ಹುಬ್ಬಳ್ಳಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ಅವರು […]
ಧಾರವಾಡ : ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಧೀಕರಣದಿಂದ ಅಂತಿಮ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮುಂಜಾಗೃತಾ ಕ್ರಮವಾಗಿ ಆಗಸ್ಟ್ 14 ರ ಸಂಜೆ 4 ಗಂಟೆಯಿಂದ ಆಗಸ್ಟ್ 16 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯಪಾನ, ಮದ್ಯಮಾರಾಟ ಹಾಗೂ ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ. ದೀಪಾ ಆದೇಶ ಹೊರಡಿಸಿದ್ದಾರೆ. ತಾಲೂಕಿನಾದ್ಯಂತ ಮದ್ಯ ತಯಾರಿಕೆ ಅಂಗಡಿಗಳು, ಬಾರ್, ಕ್ಲಬ್ ಹಾಗೂ ಮದ್ಯದ ಡಿಪೋಗಳು ಈ ಅವಧಿಯಲ್ಲಿ […]