* ತಣ್ಣನೆ ನೀರಿನಲ್ಲಿ ನೀಲಗಿರಿ ಏಲೆಯನ್ನು ಹಾಕಿ ಕುದಿಸಿ ಸ್ಥಾನ ಮಾಡಿದರೆ ಮೈ-ಕೈ ನೋವು ಕಡಿಮೆಯಾಗುತ್ತದೆ.
* ನಾಲ್ಕರಿಂದ ಆರು ಬಿಳಿ ದಾಸವಾಳ ಹೂವನ್ನು ಆಕಳ ತುಪ್ಪದಲ್ಲಿ ಹುರಿದು ಸೇವಿಸುವುದರಿಂದ ಸ್ತ್ರೀಯರ ಬಿಳಿ ಮುಟ್ಟಿನ ಸ್ರಾವ ನಿವಾರಣೆಯಾಗುತ್ತದೆ.
* ಎಳೆ ಬೆಂಡೆಕಾಯಿಯನ್ನು 1 ರಿಂದ 2 ಸಣ್ಣಗೆ ಹೆಚ್ಚಿ ಹಸಿಯಾಗಿಯೇ ಸೇವಿಸಿ, ಬಳಿಕ ಜೇನು ಬೇರಿಸಿದ ಹಾಲನ್ನು ಸೇವಿಸುವುದರಿಂದ ದಾತು ವೃದ್ದಿಯಾಗುತ್ತದೆ.
* ಬಾಣಂತಿ ಸ್ತ್ರೀಯರಲ್ಲಿ ಎದೆ ಹಾಲು ಹೆಚ್ಚಬೇಕಾದರೆ ನುಗ್ಗೆ ಹೂ, ನುಗ್ಗೆ ಸೊಪ್ಪಿನ ಪದಾರ್ಥ ಅಡುಗೆಯಲ್ಲಿ ಅಧಿಕವಾಗಿ ಬಳಸುವುದರಿಂದ ಬಾಣಂತಿ ಸ್ತ್ರೀಯರಲ್ಲಿ ಎದೆ ಹಾಲು ಹೆಚ್ಚುತ್ತದೆ.
* ನಿಂಬೆ ಹಣ್ಣು ಪಾನಕ ತಯಾರಿಸಿ ಅದಕ್ಕೆ ಜಾಝಿಕಾಯಿ ಪುಡಿ 2ರಿಂದ 3 ಚಿಟಿಕೆ ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಮಹಿಳೆಯರಲ್ಲಿ ಋತು ಸ್ರಾವದ ಸಮಯದಲ್ಲಿ ಅಧಿಕ ರಕ್ತ ಸ್ರಾವ ಇದ್ದರೆ ಕಡಿಮೆಯಾಗುತ್ತದೆ.
* ಸೇವಂತಿ ಹೂವನ್ನು ಅರೆದು ಕೂದಲಿಗೆ ಲೇಪಿಸಿ ಅರ್ಧ ಗಂಟೆಯ ನಂತರ ತಲೆ ಸ್ನಾನ ಮಾಡಿದರೆ ಹೇನು, ಸೀರು ತೊಂದರೆ ನಿವಾರಣೆಯಾಗುತ್ತದೆ.
* ಬಿಳಿದಾಸವಾಳ ಹೂವನ್ನು 4ರಿಂದ 6 ಕಲ್ಲು ಸಕ್ಕರೆ ಜೊತೆಗೆ ಬೆರೆಸಿ ತಿನ್ನುವುದರಿಂದ ಸ್ತ್ರೀಯರ ಬಿಳಿ ಮುಟ್ಟಿನ ಸ್ರಾವ ನಿವಾರಣೆ ಯಾಗುತ್ತದೆ.
* ಕಡಿಮೆ ರಕ್ತದ ಒತ್ತಡದಿಂದ ಬಳಲುವವರು ಮೆಂತ್ಯೆ ಸೊಪ್ಪನ್ನು ಬೇಯಿಸಿ ಅದಕ್ಕೆ ಶುಂಠಿ ರಸ ಹಾಗೂ ಉಪ್ಪು ಬೆರೆಸಿ ನಿತ್ಯವು ಸೇವಿಸಿದರೆ ಹಿತಕರ.
* ಅಧಿಕ ರಕ್ತದ ಒತ್ತಡ ದಿಂದ ಬಳಲುವವರು ನಿತ್ಯ ಬೆಳ್ಳಿಗೆ 3 ಚಮಚ ಈರುಳ್ಳಿ ರಸಕ್ಕೆ 2 ಚಮಚ ಶುದ್ಧ ಜೇನು ಬೆರೆಸಿ ಕುಡಿದರೆ ಹಿತಕರ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು