ಹುಬ್ಬಳ್ಳಿ : ಕೌಟಂಬಿಕ ಜಗಳ ಬಗೆಹರಿಸಲು ಮುಂದಾದಾಗ ಅದೇ ದ್ವೇಷವನ್ನು ಇಟ್ಟುಕೊಂಡು ಮರಣಾಂತಿಕ ಹಲ್ಲೆ ನಡೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮಾರಣಾಂತಿಕ ಹಲ್ಲೆ ಗೊಳಗಾದವನನ್ನು ಹುಬ್ಬಳ್ಳಿಯ ಗಣೇಶೇಪೇಟ್ ದ ನಿವಾಸಿ ಯಾದ ಇಂತಿಯಾಜ್ ಪಠಾಣ್ ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೆ ಒಳಗಾದ ಇಂತಿಯಾಜ್ ಪಠಾಣ್ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಮಾಡಿದ ಆರೋಪಿಗಳಾದ ಬಾಬಾಜಾನ್ ಶೇಖಬೇಡ
ಅಸ್ಲಂ ಶೇಖಬೇಡ, ಮುಸ್ತಾಕ್ ಅಹಮದ್ ಹಾಗೂ ನಾಜರಿನ ನಾಲ್ಕು ಆರೋಪಿಗಳ ಪೈಕಿ ಇಬ್ಬರನ್ನು ಈಗಾಗಲೇ ಕೇಶ್ವಾಪುರ್ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ ಎಂದು ತಿಳಿದು ಬಂದಿದೆ.