ಜಿಲ್ಲೆ

ಗಣರಾಜ್ಯೋತ್ಸವ ಬದಲಿಗೆ ಸಂವಿಧಾನೋತ್ಸವ ಆಗಲಿ

ಧಾರವಾಡ : ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಕೆ ಎಚ್ ಬಿ ಕಾಲೋನಿಯ ಶ್ರೀ ವೀರಾಂಜನೇಯ ಹಿತಾಭಿವೃದ್ದಿ ಸಂಘದ ವತಿಯಿಂದ ೭೦ನೇ ಗಣ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಶ್ರೀ ವೀರಾಂಜನೇಯ ಹಿತಾಭಿವೃದ್ದಿ ಸಂಘದ ಅಧ್ಯಕ್ಷರಾದ ಬಿ.ಎಲ್. ಶಿವಳ್ಳಿ ಅವರು ಧ್ವಜಾರೋಹಣ ನೆರವೇರಿಸಿದರು.

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ಒಡೆದು ಹಂಚಿ ಹೋಗಿದ್ದ ಎಲ್ಲಾ ಗಣ ರಾಜ್ಯಗಳನ್ನು ಕೂಡಿಸಿ, ಅದಕ್ಕೆ ಒಂದು ಚೌಕಟ್ಟನ್ನು ಸಂವಿಧಾನದ ಮೂಲಕ ಹಾಕಿಕೊಟ್ಟು ಸಂವಿಧಾನ ಜಾರಿಗೆ ತರಲಾಯಿತು. ಅಂದಿನಿಂದ ಇಂದಿನವರೆಗೂ ಎಲ್ಲರಿಗೂ ಸಂವಿಧಾನವೂ ಒಂದೇ ಕಾನೂನು, ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಲಾಗಿದೆ. ಹೀಗಾಗಿ ಅದನ್ನು ಗಣರಾಜ್ಯೋತ್ಸವ ಬದಲಿಗೆ ಸಂವಿಧಾನೋತ್ಸವ ಎಂದು ಕರೆಯಬೇಕು ಎಂದರು.

ಈ ಸಂದರ್ಭದಲ್ಲಿ ಸುಮಂಗಲಾ ಕೊರವರ, ಸಾವಿತ್ರಿ ಅಗಳಗಟ್ಟಿ, ಎಂ‌.ಬಿ. ಪಾಟೀಲ, ಗುಂಡಗಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಮುಧೋಳಕರ್ ಕಾಲೋನಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಪ್ಪ ಮನ್ನಿಕೇರಿ ಧ್ವಜಾರೋಹಣ ಮಾಡಿದರು.

ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಬಸವರಾಜ ಕೊರವರ, ಶ್ರೀಮತಿ ವಿಶಾಲಾ ಮಲ್ಲಾಪುರ, ಸುರೇಶ ಪವಾರ, ಬಸವರಾಜ ಶೀಲವಂತರ, ಸುನೀಲ ಮಹೇಂದ್ರಕರ, ವೀರೇಶ ಆರಾಧ್ಯಮಠ, ಅಮೃತ ಮಡಿವಾಳರ, ಸೇರಿದಂತೆ ಹಲವಾರು ಪ್ರಮುಖರು ಹಾಗೂ ನೂರಾರು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *