ರಾಜ್ಯ

ಪ್ರಸಾದದಲ್ಲಿ ವಿಷ ಬೆರೆಕೆ : ತಾಯಿ ಸಾವು, ಮಕ್ಕಳ ಸ್ಥಿತಿ ಗಂಭೀರ

ಚಿಂತಾಮಣಿ : ಸುಳ್ವಾಡಿಯ ಕಿಚ್ಚಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದ ದುರಂತ ಮರೆಯುವ ಮುನ್ನವೇ ಇಲ್ಲಿಯ ಗಂಗಮ್ಮ ದೇವಿ ದೇವಸ್ಥಾನದಲ್ಲಿ ಪ್ರಸಾದ ತಿಂದು ಮಹಿಳೆಯೊಬ್ರು ಸಾವನ್ನಪ್ಪಿದ್ದಾರೆ.

ಆ ಕುಟುಂಬದ ಆರು ಮಂದಿ ಸ್ಥಿತಿ ಗಂಭೀರ ವಾಗಿದೆ. ಅದರಲ್ಲಿ ಇಬ್ಬರು ಮಕ್ಕಳು ಸೇರಿರುವುದು ಆತಂಕದ ಸಂಗತಿಯಾಗಿದೆ.

ಮೃತ ಮಹಿಳೆಯನ್ನು ಕವಿತಾ ಎಂದು ಗುರುತಿಸಲಾಗಿದೆ. ಮಕ್ಕಳಾದ ಕಾನ್ವಿ, ದೀಕ್ಷಾ ಹಾಗೂ ಪತಿ ಗಂಗಾಧರಪ್ಪ ಅವರಿಗೆ ನೀಡಿದ್ದರು.

ಮಕ್ಕಳು ಹಾಗೂ ಪತಿಗೆ ವಾಂತಿ ಆಗಿದ್ದರಿಂದ ಕೂಡಲೇ ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಾಯಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಕವಿತಾ ಅವರು ಮೃತ ಪಟ್ಟಿದ್ದಾರೆ.

ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯೂ ದಲ್ಲಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನೂಳಿದವರ ಸ್ಥಿತಿ ಗಂಭೀರವಾಗಿದೆ. ದೇವಸ್ಥಾನದ ಟ್ರಸ್ಟಿ ಹಾಗೂ ಅರ್ಚಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಅರ್ಚಕ, ಮಹಿಳೆ ಅನುಸೂಯಮ್ಮ ಸೇರಿದಂತೆ ಪ್ರಸಾದ ತಯಾರಿಸಿದ ಹಲವರನ್ನು ವಶಕ್ಕೆ ಪಡೆದು ಪೊಲೀಸರು ಹಲವು ತಂಡಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *