ಅಂತಾರಾಷ್ಟ್ರೀಯ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ ಮಹಿಳೆಯರು

ಕೇರಳ : ಸುಪ್ರೀಂಕೋರ್ಟ್ ಆದೇಶದ ಬಳಿಕ ದೇಶದ್ಯಾಂತ ತೀವ್ರ ಮಿಂಚಿನ ಸಂಚಲನ ಸೃಷ್ಟಿಸಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಕೊನೆಗೂ ಇಬ್ಬರು ಮಹಿಳೆಯರು ಪ್ರವೇಶ ಮಾಡುವ ಮೂಲಕ ಪರ ವಿರೋಧಕ್ಕೆ ಕಾರಣವಾಗಿದ್ದಾರೆ.

ಕಳೆದ ಒಂದು ತಿಂಗಳಿಂದ ದೇಗುಲ ಪ್ರವೇಶ ಮಾಡಬೇಕು ಎಂದು ಪಣ ತೊಟ್ಟಿದ್ದ ಈ ಮಹಿಳೆಯರು. ಸಾವಿರಾರು ಪ್ರತಿಭಟನಾಕಾರರ ವಿರೋಧದ ಹಿನ್ನಲೆಯಲ್ಲಿ ಕೈ ಬಿಟ್ಟಿದ್ದರು. ಆದರೆ ನಿನ್ನೆ ರಾತ್ರಿ ಶಬರಿಗಿರಿ ಬೆಟ್ಟ ಹತ್ತಿ, ಪೊಲೀಸ್ ಭದ್ರತೆ ಮೂಲಕ ದೇವರ ದರ್ಶನ ಪಡೆದುಕೊಂಡಿದ್ದಾರೆ.

ಬಿಂದು ಹಾಗೂ ಕನಕಾದುರ್ಗಾ ಅವರೇ ದೇವಸ್ಥಾನ ಪ್ರವೇಶಿಸಿ ಮಹಿಳೆಯರಾಗಿದ್ದಾರೆ. ಇವರಿಬ್ಬರು ಕೇರಳದ ಮಲಪ್ಪುರಂ ನಿವಾಸಿಗಳಾಗಿದ್ದು, ಈ ಮಹಿಳೆಯರು ಶಬರಿಮಲೆ ಪ್ರವೇಶ ಇದೀಗ ದೇವಸ್ಥಾನದ ಮಲೀನಗೊಂಡಿದೆ ಎಂದು ದೇವಾಲಯದ ಅರ್ಚಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ 800 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಂತಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರು ದೇಗುಲ ಬಂದ್ ಮಾಡಿ ಅಯ್ಯಪ್ಪ ಸ್ವಾಮಿ ಸನ್ನೀಧಿಯನ್ನು ಶುಚಿಗೊಳಿಸುವ ಕೆಲಸ ಮಾಡುತ್ತಿದ್ದಾರೆ.

ಇದರ ವಿರುದ್ದ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳು ಕಿಡಿ ಕಾರಿದ್ದು, ಸಮಾನತೆ ಹೆಸರಿನಲ್ಲಿ ಧಾರ್ಮಿಕ ಆಚರಣೆ ಹಕ್ಕು ಮೂಲಭೂತ ಅಗತ್ಯ ಅಲ್ಲ. ಪ್ರಾಯಶಃ ಇದು ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಈ ಕೃತ್ಯ ನಡೆದಿದೆ.

ಪಿಣರಾಯಿ ವಿಜಯನ್ ಸರಕಾರ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬಿಜೆಪಿ ಕಿಡಿಕಾರಿದೆ. ನಾಗರಿಕ ಸಮಾಜದಲ್ಲಿ ಎಲ್ಲ ಧರ್ಮದವರು ಗೌರವ ಕಾಪಾಡಬೇಕು ಹೊರತು ಕ್ರಾಂತಿ ನಿರ್ಮಾಣದ ಹೆಸರಿನಲ್ಲಿ ನಮ್ಮ ನಂಬಿಕೆ, ಆಚರಣೆಗೆ ಧಕ್ಕೆ ತಂದಿರುವುದು ಸರಿಯಲ್ಲ ಎಂದು ಗುಡುಗಿದ್ದಾರೆ.

ಕೇರಳದ ಸಿಪಿಐ ಎಂ ಸರಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರ ಇದನ್ನು ಸ್ವಾಗತಿಸಿದ್ದು, ಇದೊಂದು ದೊಡ್ಡ ಕ್ರಾಂತಿ. ಎಲ್ಲ ಮಹಿಳೆಯರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗುವುದು. ಅಲ್ಲದೆ, ಮಹಿಳೆಯರಿಗೆ ಪೊಲೀಸ್ ಭದ್ರತೆ ಒದಗಿಸಲು ಸಿದ್ದ ಎಂದು ಭರವಸೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *