ಕೇರಳ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ಮಾಡಿದ ಮಹಿಳೆಯರ ನಡೆ ಖಂಡಿಸಿ ಕೇರಳ ರಾಜ್ಯಾದ್ಯಾಂತ ಭಾರೀ ಪ್ರತಿಭಟನೆ ಆರಂಭಗೊಂಡಿದೆ.
ದೇಗುಲ ಪ್ರವೇಶ ಮಾಡಿದ ಇಬ್ಬರು ಮಹಿಳೆಯರಾದ ಬಿಂದು ಹಾಗೂ ಕನಕದುರ್ಗಾ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಬೀದಿಗಿಳಿರುವ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹೋರಾಟಕ್ಕೆ ಬಿಜೆಪಿ ಸಾಥ್ ನೀಡಿದ್ದು, ವಿಕಲಚೇತನರ ಮೇಲೆ ಹಲ್ಲೆ ಮಾಡಿ ಅಂಗಡಿ ಮುಂಗಟ್ಟು ಬಂದ್ ಕೇರಳದ ಹಲವಡೆ ಪ್ರತಿಭಟನೆ ತೀವ್ರ ಗೊಳಿಸಿದ್ದಾರೆ.
ಇದರಿಂದಾಗಿ ಕೆಂಡವಾದ ಕೇರಳ ಹೊತ್ತಿ ಉರಿಯುತ್ತಿದ್ದು, ಕೇರಳ ಡಿಜಿಪಿ ಲೋಕನಾಥ್ ಅವರು ಎಲ್ಲಡೆ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸುರಕ್ಷಾ ದೃಷ್ಟಿಯಿಂದ ಆ ಇಬ್ಬರು ಮಹಿಳೆಯರನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು
ಇದೇ ವೇಳೆ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ಮೂರು ಗಂಟೆ ಮುಚ್ಚಿ ಶುಚಿಗೊಳಿಸಿದ ಬಳಿಕ ಆನಂತರ ತೆರಯಲಾಯಿತು. ದೇವಾಲಯದ ಬಾಗಿಲು ಇದೀಗ ತೆರೆದಿದ್ದು, ಎಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ದುಷ್ಕೃತ್ಯ ಎಸಗದಂತೆ ಕಟ್ಟೇಚ್ಚರ ವಹಿಸಲಾಗಿದೆ.