ಬೆಂಗಳೂರು : ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಇಳಿಕೆ ಖಂಡಿಸಿ ಕರೆ ನೀಡಿರುವ ಭಾರತ ಬಂದ್ ಗೆ ಎಲ್ಲಡೆ ಸಂಪೂರ್ಣ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಅದರಲ್ಲೂ ವಿಶೇಷವಾಗಿ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಬಂದ್ ಗೆ ಬೆಂಬಲ ಸೂಚಿಸಿದ್ದರಿಂದ ಇದರ ಹಿಂದೆ ಸಮ್ಮೀಶ್ರ ಸರಕಾರದ ಸಹಮತ ಕೂಡ ವ್ಯಕ್ತವಾದಂತಾಗಿದೆ.
ಭಾರತ ಬಂದ್ ಗೆ ಪರೋಕ್ಷ ಬೆಂಬಲ ಘೋಷಿಸಿರುವ ಸಮ್ಮೀಶ್ರ ಸರಕಾರದ ನಡೆ ಹಿಂದೆಯೇ ಕೆಎಸ್ ಆರ್ ಟಿಸಿ ಬಿಎಂಟಿಸಿ ಹಾಗೂ ಹೊರ ರಾಜ್ಯದ ಬಸ್ ಸೇವೆ ಬಂದ್ ಗೆ ನಿರ್ಧರಿಸಿದೆ. ಇನ್ನೂ ಆಟೋ, ವೋಲಾ, ಉಬರ್, ಎರ್ ಪೋರ್ಟ್ ಟ್ಯಾಕ್ಸಿ ಸಂಘಟನೆಗಳು ಕೂಡ ಬಂದ್ ಗೆ ತಮ್ಮ ಬೆಂಬಲ ಸೂಚಿಸಿವೆ.
ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯಾದ್ಯಂತ ಶಾಲಾ-ಕಾಲೇಜ್ ಗಳನ್ನು ಬಂದ್ ಮಾಡಲು ಅಥವಾ ರಜೆ ಘೋಷಿಸಲು ಜಿಲ್ಲಾಧಿಕಾರಿಗಳ ವಿವೇಚನೆ ಬಿಡಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಬೆಂಗಳೂರು ಪೊಲೀಸ್ ಸಜ್ಜು : ಬೆಂಗಳೂರು ಮಹಾನಗರದಲ್ಲಿ ಬಂದ್ ಎದುರಿಸಲು ಮಹಾನಗರ ಪೊಲೀಸರು ಸಜ್ಜಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಸುನೀಲಕುಮಾರ ತಿಳಿಸಿದ್ದಾರೆ.
ಬಂದ್ ಗೆ 30 ಸಿಆರ್ ತುಕ್ಕಡಿ, 30 ಕೆಎಸ್ ಆರ್ ಪಿ ಹಾಗೂ 270 ಹೊಯ್ಸಳ ವಾಹನ ಗಸ್ತು, ಟ್ರಾಫೀಕ್ ಪೊಲೀಸ್ ಸೇರಿ ಹದಿನೈದು ಸಾವಿರ ಪೊಲೀಸ್ ನಿಯೋಜನೆ ಮಾಡಲಾಗಿದೆ. ಅಲ್ಲದೆ, ಬೆಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಬೆಳಗಾವಿ : ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಬೆಂಗಳೂರಿನ ಗಾಡ್ ಫಾದರ್ ಕೈ ಕೊಟ್ಟಾಗ ನಮ್ಮ ಮನೆಗೆ ಅಳುತ್ತಾ ಬಂದಾಗ ನಾನು ಸಹಾಯ ಮಾಡಿದ್ದೇನೆ. ಅವರು ನಡೆದುಬಂದ ದಾರಿ ಮರೆತರೆ ರಾಜಕೀಯದಲ್ಲಿ ಉದ್ದಾರವಾಗಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ. ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಲವೊಂದು ವೈಯಕ್ತಿಕ ವಿಚಾರ ಹೇಳಬಾರದು ಎಂದುಕೊಂಡಿದ್ದೆ. ಆದರೆ ಅವರು ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದ್ದರೆ ಹೇಳುತ್ತಿದ್ದನೆ, ಅವಳಿಗೆ ಜಾರಕಿಹೊಳಿ ಸಹೋದರರಿಗೆ 90 ಕೋಟಿ ಸಾಲ ಕೊಡುವಷ್ಟು ಶಕ್ತಿ […]
ಬೆಂಗಳೂರು : ರಾಜ್ಯದ ಸಮ್ಮೀಶ್ರ ಸರಕಾರದ ವಿರುದ್ದ ಜಾರಕಿಹೊಳಿ ಸಹೋದರರ ಬಂಡಾಯ ಬುಗಿಲೆದ್ದಿದೆ. ಮಂಗಳವಾರ ಬೆಂಗಳೂರಿಗೆ ರಾಜಕೀಯ ಚದುರಂಗದಾಟ ಶೀಫ್ಟ್ ಆಗಿದೆ. ವಿಶೇಷವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ವಿರುದ್ದ ಮುನಿಸಿಕೊಂಡಿರುವ ಸಚಿವ ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವ ರಮೇಶ ಜಾರಕಿಹೊಳಿ, ನಮಗೆ ಒಂದು ಇತಿಮಿತಿ ಇರುತ್ತದೆ. ನಮಗೇನು ಕೆಣಕಬೇಡಿ. ನಮ್ಮ ಪಾಡಿಗೆ ನಮಗೆ ಬಿಟ್ಟಬಿಡಿ ನಮ್ಮೊಂದಿಗೆ ಸಾಕಷ್ಟು ಶಾಸಕರಿದ್ದಾರೆ ಎಂದು ಗುಡುಗಿದರು. […]
ಯಾದಗಿರಿ : ನೆರೆ ಸಂತ್ರಸ್ತ್ರರಿಗಾಗಿ ರಾಜ್ಯದ ವಿವಿಧ ಪ್ರತಿಷ್ಠಿತ ದೇಗುಲಗಳಿಂದ 12.38 ಕೋಟಿ ತೆಗೆದುಕೊಂಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಜರಾಯಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಸಮರ್ಥಿಸಿಕೊಂಡಿದ್ದಾರೆ. ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 3 ಕೋಟಿ, ಚಾಮುಂಡೇಶ್ವರಿಯಿಂದ 1 ಕೋಟಿ, ಹೀಗೆ ವಿವಿಧ ದೇವಾಲಯಗಳಿಂದ 8.38 ಕೋಟಿ ತೆಗೆದುಕೊಂಡಿದ್ದೇನೆ ಎಂದರು. ಇಡೀ ರಾಜ್ಯವೇ ಅವರ ನೆರವಿಗೆ ಧಾವಿಸಿರುವ ಸಂದರ್ಭದಲ್ಲಿ ಜನರ ಹಣವನ್ನು ಸಂಕಷ್ಟದಲ್ಲಿರುವ ಜನರ ಕಲ್ಯಾಣಕ್ಕೆ ಬಳಸಲಾಗುತ್ತಿದೆ. ಇದರಲ್ಲಿ ಮುಖ್ಯಮಂತ್ರಿ ಹೆಚ್.ಡಿ. […]