ಧಾರವಾಡ : ಧಾರವಾಡದ ಲಿಂಗಾಯತ ಭವನ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹಾಗೂ ಹಾಲಿ ಶಾಸಕ ಅರವಿಂದ ಬೆಲ್ಲದ್ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇರ ವಾಗ್ದಾಳಿ ನಡೆಸಿದರು.
ಅವರು ಧಾರವಾಡ ಲಿಂಗಾಯತ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಲ್ಲದ್ ಕುಟುಂಬದ ವಿರುದ್ಧ ಹರಿಹಾಯ್ದರು.
ನೂತನವಾಗಿ ನಿರ್ಮಿಸಿದ್ದ ಕಟ್ಟಡಕ್ಕೆ ಲೀಲಾವತಿ ಬೆಲ್ಲದ್ ಹೆಸರಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಆದರೂ ಅದಕ್ಕೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಹಾಗೂ ಅವರ ಮಗ ಹಾಲಿ ಶಾಸಕ ಅರವಿಂದ ಬೆಲ್ಲದ್ ಸ್ಪಂದಿಸದೆ ಇದ್ದರಿಂದ ರಗಳೆಯಾಗಿತ್ತು. ಹೆಸರು ತೆಗೆಸಿದ ಬಳಿಕ ಆಕ್ರೋಶ ಕಡಿಮೆಯಾಗಿದೆ ಎಂದರು.
ಬೆಲ್ಲದ ಕುಟುಂಬಕ್ಕೆ ನಾವು ತುಂಬಾ ಅನುಕೂಲ ಮಾಡಿ ಕೊಟ್ಟಿದ್ದೆವು. ಆದರೆ ಅವರು ಧಾರವಾಡ ಲಿಂಗಾಯತ ಭವನ ತಮ್ಮದು ಎನ್ನಲು ಹೋದರು. ಹೀಗಾಗಿ ಆಗ ಅಖಿಲ ಭಾರತ ವೀರಶೈವ ಮಹಾಸಭೆ ಮಧ್ಯ ಪ್ರವೇಶಿಸಬೇಕಾಯ್ತು ಎಂದ ಅವರು ಬೆಲ್ಲದ್ ಕುಟುಂಬವನ್ನು ಹೊರಗೆ ಹಾಕಿದ ಮೇಲೆ ಎಲ್ಲವೂ ಚೆನ್ನಾಗಿ ಆಗಿದೆ ಎಂದರು.
ಡಿವೈಎಸ್ಪಿ ಶ್ರವಣ ಗಾಂವಕರ್ ಇನ್ನಿಲ್ಲ ಧಾರವಾಡ : ಧಾರವಾಡ ಜಿಲ್ಲೆಯ ಡಿಸಿಆರ್ ಬಿಯ ಡಿವೈಎಸ್ಪಿ ಆಗಿದ್ದ ಶ್ರವಣ ಗಾಂವಕರ್ (42) ಮಂಗಳವಾರ ಬೆಳಗಿನ ಜಾವ ನಿಧನ ಹೊಂದಿದರು. ಅವರಿಗೆ ಹೃದಯ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಯಿತಾದರೂ ಆದರೂ ಅವರು ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು. ಅವರು ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ […]
ಮೈಸೂರು/ಉಡುಪಿ : ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ 57 ರಿಂದ ಸ್ರರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ರಾಮದಾಸ್ ಪ್ರೇಯಿಸಿ ಪ್ರೇಮಾಕುಮಾರಿ ಹೀನಾಯ ಸೋಲು ಅನುಭವಿಸಿದ್ದಾರೆ. ಅವರಿಗೆ ಕೇವಲ 16 ಮತಗಳು ಬಂದಿವೆ. ಚುನಾವಣೆ ಫಲಿತಾಂಶ ಕಂಡು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರೆ ಹೀನಾಯ ಸೋಲು ಕಂಡ ಮಾಜಿ ಸಚಿವ ರಾಮದಾಸ್ ಪ್ರೇಯಸಿ ಪ್ರೇಮಾಕುಮಾರಿ ಮತ ಎಣಿಕೆ ಕೇಂದ್ರದತ್ತ ಹಾಯಲೇ ಇಲ್ಲ. ಕಾಂಗ್ರೆಸ್ ಅಭ್ಯರ್ಥೀಗೆ ಮುಜುಗರ : ಇನ್ನೂ ಉಡುಪಿ ನಗರಸಭೆ ಚುನಾವಣೆಯಲ್ಲಿ […]
ಧಾರವಾಡ : ಕೊಡಗು ನೆರೆ ಸಂತ್ರಸ್ತ್ರರ ನೆರವಿಗೆ ಇಲ್ಲಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಧಾವಿಸಿದ್ದು, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿದ ಬ್ಯಾಂಕ್ ಅಧ್ಯಕ್ಷ ಎಸ್ ರವೀಂದ್ರನ್ ಅವರು ಬ್ಯಾಂಕ್ ಸಿಬ್ಬಂದಿಯಿಂದ ಸಂಗ್ರಹಗೊಂಡ 26 ಲಕ್ಷ ರೂಪಾಯಿಗೂ ಮಿಕ್ಕಿದ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಿದರು. ಪರಿಹಾರ ಮೊತ್ತದ ಚೆಕ್ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬ್ಯಾಂಕಿನ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ಕೊಡಗಿನಲ್ಲಿ ಘಟಿಸಿದ ಅಚಾನಕ್ ಪ್ರಕೃತಿ ವಿಕೋಪದ ಸಂದರ್ಭದಲ್ಲಿ […]