ಬೆಂಗಳೂರು : ಸೆ.10ರ ಭಾರತ ಬಂದ್ ಗೆ ರಾಜ್ಯಾದ್ಯಂತ ಸಂಪೂರ್ಣ ಬೆಂಬಲ ವ್ಯಕ್ತವಾಗುತ್ತಿದ್ದು, ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಹಾಗೂ ಎಡಪಕ್ಷಗಳ ಕಾರ್ಯಕರ್ತರು ಹಾಗೂ 25ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲಿಸಿವೆ.
ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘ ಬೆಂಬಲ ಘೋಷಿಸಿವೆ. ಅಲ್ಲದೆ, ಗದಗ,ಚಿಕ್ಕಬಳ್ಳಾಪುರ, ರಾಮನಗರ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಶಾಲಾ ಕಾಲೇಜು ಗಳಿಗೆ ಬಂದ್ ಗೆ ರಜೆ ಘೋಷಣೆ ಮಾಡಲಾಗಿದೆ.
ಇನ್ನೂ ಕೆಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಪರಿಸ್ಥೀತಿಗೆ ಅನುಗುಣವಾಗಿ ರಜೆ ಘೋಷಣೆ ಮಾಡಲಿದ್ದಾರೆ.
ಅದೇ ರೀತಿ ಬಂದ್ ಗೆ ಬ್ಯಾಂಕ್ ಅಸೋಸಿಯೇಶನ್ ವತಿಯಿಂದ ನೈತಿಕ ಬೆಂಬಲ ಘೋಷಿಸಲಾಗಿದೆ. ಅಲ್ಲದೆ, ಜನಸಾಮಾನ್ಯರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಕರವೇ ನಾರಾಯಣಗೌಡ ಬಣ, ಲಾರಿ, ಟೆಂಪೋ, ಮ್ಯಾಕ್ಸಿಕ್ಯಾಬ್ ಸಂಘಟನೆ ಬೆಂಬಲ ಘೋಷಿಸಿವೆ.
ಬೆಂಗಳೂರು : ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ದಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಹಿಂಸೆ ನೀಡಿರುವುದು ಬೆಳಕಿಗೆ ಬಂದಿದೆ. ಅಂಗಿ, ಪ್ಯಾಂಟ್ ಹರಿದು, ಮೈ ಮೇಲೆ ಚಿತ್ರ ಬಿಡಿಸಿ ನೀರಿನಲ್ಲಿ ಡ್ಯಾನ್ಸ್ ನಡೆಸುವಂತೆ ತಾಕೀತು ಮಾಡಿದ್ದಾರೆ. ಅಲ್ಲದೆ, ಹುಡುಗಿಯರಿಗೂ ಬಿಸಿ ತಾಕಿದ್ದು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಆದರೆ ಈ ಕುರಿತು ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೇಂದ್ರ ಸರಕಾರದ ಅಧೀನದಲ್ಲಿರುವ ಈ ಕೇಂದ್ರದಲ್ಲಿ […]
ಹುಬ್ಬಳ್ಳಿ : ಒಂದು ಹುಡುಗನಿಗಾಗಿ ಮೂವರು ಹುಡುಗಿಯರು ಪರಸ್ಪರ ನಡು ರಸ್ತೆಯಲ್ಲಿಯೇ ಕಿತ್ತಾಡಿಕೊಂಡ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲಿಯ ಗೋಕುಲ್ ರಸ್ತೆಯಲ್ಲಿ ಹಾಡ ಹಗಲೇ ಮೂವರು ಕಾಲೇಜ್ ವಿದ್ಯಾರ್ಥಿನಿಯರು ಈ ರೀತಿ ನಡು ರಸ್ತೆಯಲ್ಲಿ ಜಡೆ ಜಗಳ ಆಡಿರುವುದು ಸ್ಥಳೀಯರಿಗೆ ಆತಂಕ ತಂದಿತ್ತು. ಕೂಡಲೇ ಅನೇಕರು ಮಧ್ಯಪ್ರವೇಶ ಮಾಡಿ ಅವರಿಗೆ ತಿಳುವಳಿಕೆ ಹೇಳಿ, ಮನೆ ದಾರಿ ತೋರಿಸಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರು ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿಯರು ಎಂದು ತಿಳಿದುಬಂದಿದ್ದು, ಮೂವರು ವಿದ್ಯಾರ್ಥಿನಿಯರು ಒಬ್ಬನೇ […]
ಅಜ್ಮೀರ್ : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಟೆಂಪಲ್ ರನ್ ಗುರುವಾರವೂ ಮುಂದುವರೆದಿದೆ. ಈಗಾಗಲೇ ರಾಜ್ಯ ಹಾಗೂ ಹೊರ ರಾಜ್ಯದ ಹತ್ತು ಹಲವು ಮಂದಿರಗಳಿಗೆ ಕುಟುಂಬ ಸಮೇತ ಭೇಟಿ ನೀಡಿದ ಬೆನ್ನಲ್ಲೇ ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜಸ್ಥಾನದ ಪುಷ್ಕರ್ ನಲ್ಲಿರುವ ಬ್ರಹ್ಮ ದೇವಾಲಯದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಜ್ಮೀರ್ ನಲ್ಲಿರುವ ಖಾಜಾ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡಿ ಚಾದರ್ ಸಮರ್ಪಣೆ ಮಾಡಿದರು. ಅವರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡ, […]