ಧಾರವಾಡ : ಒಡೆದು ಛಿದ್ರವಾಗಿರುವ ಲಿಂಗಾಯತ ಸಮುದಾಯ ಆದಿಚುಂಚನಗಿರಿ ಮಠದಿಂದ ಕಲಿಯಬೇಕಾಗಿದ್ದು ಬಹಳ ಇದೆ ಎಂದು ಮಾಜಿ ಸಚಿವ ಹಾಗೂ ಲಿಂಗಾಯತ ಸಮಾಜದ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿದರು.
ಅವರು ಧಾರವಾಡದ ಮುರುಘಾಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇಡೀ ಸಮಾಜದವರನ್ನು ಕೈಯಲ್ಲಿ ಹಿಡಿದುಕೊಂಡಿರುವ ಮಠ ಆದಿಚುಂಚನಗಿರಿ ಮಠ. ಸ್ವಾಮೀಜಿಯವರ ಒಂದು ಮಾತು ಇಡೀ ಸಮಾಜಕ್ಕೆ ವೇದ ವಾಕ್ಯ. ಇದನ್ನು ನಾವು ಕೂಡ ಮೈಗೂಡಿಸಿಕೊಂಡು ನಡೆಯಬೇಕಿದೆ ಎಂದರು.
ಈಗಲಾದರೂ ನಾವೆಲ್ಲಾ ಪರಸ್ಪರ ಕಚ್ಚಾಡುವುದು ಬಿಟ್ಟು ಒಗ್ಗೂಡಬೇಕಿದೆ. ಆ ಮೂಲಕ ರಾಜ್ಯದ ಚುಕ್ಕಾಣಿ ಹಿಡಿಯಬೇಕಿದೆ ಎಂದ ಅವರು ಸಮಾಜದ ಉದ್ದಾರಕ್ಕೆ ಮಠಗಳೇ ಕಾರಣ. ನೂರು ವರ್ಷದ ಹಿಂದೆ ಕೆಲವೇ ಮಠಗಳು ನಮ್ಮ ನಾಡಿನಲ್ಲಿ ಇದ್ದವು ಎಂದು ಸ್ಮರಿಸಿದರು.
ಕೊಡಗು : ಕಳೆದ ಎರಡು ತಿಂಗಳಿಂದ ನಾನು ಸೂರ್ಯನ ನೋಡಿಲ್ಲ. ಹಾಗೂ ನನ್ನ ಬಟ್ಟೆಗಳನ್ನು ಒಣಗಿಸಿಕೊಂಡು ಬರಲು ನನಗೆ ಐದು ದಿನ ರಜೆ ಕೊಡಿ ಎಂದು ಮಡಿಕೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪೊಲೀಸ್ ಪೇದೆಯೊಬ್ಬ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಇದು ಅಚ್ಚರಿಯಾದರೂ ನಂಬಲೇ ಬೇಕಾದಂತಹ ಸತ್ಯ. ಪಿ.ಸಿ. ನಂ 1121 ಆದ ರಮೇಶ ತಮ್ಮ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿಗಳಿಗೆ ಆಗಷ್ಟ 16ರಂದು ಬರೆದ ಪತ್ರ ಇದಾಗಿದೆ. ಪೊಲೀಸ್ ಪೇದೆ ರಮೇಶ […]
ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆ ದಿನೆ ದಿನೇ ಹೆಚ್ಚಳವಾಗುತ್ತಿರುವುದನ್ನು ಖಂಡಿಸಿ ದೇಶದ ವಿವಿಧ ವಿಪಕ್ಷಗಳು ಕರೆ ನೀಡಿರುವ ಭಾರತ ಬಂದ್ ಗೆ ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಪೂರ್ಣ ಬೆಂಬಲ ಸೂಚಿಸಿವೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡ ಅವರು ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿ, ಭಾರತ ಬಂದ್ ಗೆ ಜೆಡಿಎಸ್ ಪಕ್ಷದ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು. ಪಕ್ಷದ ಎಲ್ಲ ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಿಳಿದು ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ದ […]
ಮೈಸೂರು : ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಕಲಿ ಮತದಾನವಾಗಿದ್ದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವ ಮೂಲಕ ನಕಲಿ ಮತದಾನ ತಡೆಗಟ್ಟಬೇಕು ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಶನಿವಾರ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಿರುವ ಅವರು, ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅವ್ಯಾಹತವಾಗಿ ನಕಲಿ ಮತದಾನವಾಗಿರುವುದು ಕಂಡು ಬಂದಿದೆ ಎಂದು ದೂರಿದ್ದಾರೆ. […]