ರಾಜ್ಯ

ಶ್ರೇಷ್ಠತೆ ಸಾಧಿಸಬೇಕಾದರೆ ಯೋಗಾಯೋಗ ಇರಬೇಕು : ಸಿದ್ದೇಶ್ವರ ಸ್ವಾಮೀಜಿ

ಧಾರವಾಡ : ಇಲ್ಲಿನ ಮುರುಘಾಮಠದ ಶ್ರೀ ಮುರುಘರಾಜೇಂದ್ರ ಪ್ರಸಾದ ನಿಲಯದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ವಿದ್ಯುಕ್ತ ತೆರೆ ಬಿದ್ದಿದೆ.
ಸಾನ್ನಿಧ್ಯವಹಿಸಿ ಮಾತನಾಡಿದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ‘ಶ್ರೇಷ್ಠತೆ ಸಾಧಿಸಬೇಕಾದರೆ ಯೋಗಾಯೋಗ ಇರಬೇಕು. ಧಾರವಾಡದ ಮುರುಘಾಮಠ ದಾಸೋಹ ಯೋಗ ಹೊಂದಿರುವ ಮಠ. ಈ ದಾಸೋಹ ದೀಪ, ನಂದಾದೀಪವಾಗಿರಲಿ’ ಎಂದು ಆಶಿಸಿದರು.
ಬಸವಾದಿ ಶರಣರು ಹಾಕಿಕೊಟ್ಟ ದಾಸೋಹ ಪರಂಪರೆಯನ್ನು ಮನೆ ಮನೆಗಳಲ್ಲೂ ಮುಂದುವರೆಸಬೇಕು. ಅನ್ನ ಹಾಕಿದಾಗ ಉಂಡವರ ಸಂತೋಷ ನೋಡುವುದೇ ಭಾಗ್ಯ. ಈ ಭಾಗ್ಯವನ್ನು ಕಂಡವರು ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳು ಎಂದು ಸ್ಮರಿಸಿದರು.
ಮೃತ್ಯುಂಜಯ ಅಪ್ಪಗಳು ದೇಹವನ್ನೇ ದೇವಾಲಯವಾಗಿ‌ ಮಾಡಿ, ಮನಸ್ಸನ್ನು ನಿಜದಲ್ಲಿ ಸಮ್ಮಿತಗೊಳಿಸಿದರು. ಮಹಾಂತ ಶ್ರೀಗಳಾದಿಯಾಗಿ ಮುರುಘಾಮಠದ ತ್ರಿವಿಧ ದಾಸೋಹ ಮುಂದುವರೆದುಕೊಂಡು ಬಂದಿದೆ ಎಂದ ಅವರು, ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಕರೆಯದಿದ್ದರೂ ಬರುತ್ತಿದ್ದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಧಾರವಾಡಕ್ಕೆ ವಿದ್ಯಾಕಾಶಿ ಎಂದು ಹೆಸರು ಬರಲು ಕಾರಣ ಮುರುಘಾಮಠ. ಇದರಿಂದ ಹೊಲ ಗದ್ದೆಗಳಲ್ಲಿ ಮಾತ್ರ ಕೆಲಸ ಮಾಡಿಕೊಂಡಿದ್ದ ಲಿಂಗಾಯತರು ದೊಡ್ಡ ಮಟ್ಟದಲ್ಲಿ ಶಿಕ್ಷಿತರಾದರು. ಈ ಪರಂಪರೆಯನ್ನು ಉಳಿಸಿ ಬೆಳೆಸೋಣ ಎಂದರು.
ಇದೇ ವೇಳೆ ಮುರುಘಾಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಶ್ರೀಗಳನ್ನು ಭಕ್ತ ವೃಂದ ಚಿನ್ನದ ಗುಂಡಗಡಿಗೆ (ಲಿಂಗ) ನೀಡಿ ಸನ್ಮಾಸಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಶ್ರೀ, ಬೆಳಗಾವಿ ರುದ್ರಾಕ್ಷಿ ಮಠದ ಡಾ.ಸಿದ್ದರಾಮ ಶ್ರೀ, ಮೈಸೂರು ಸುತ್ತೂರು ಮಠದ ನಿಯೋಜಿತ ಉತ್ತರಾಧಿಕಾರಿ ಜಯರಾಜೇಂದ್ರ ಶ್ರೀ, ಆಡಿ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಶ್ರೀ, ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ, ಆಳಂದದ ಮಾಜಿ ಶಾಸಕ ಬಿ.ಆರ್.ಪಾಟೀಲ, ಮಾಜಿ ಸಚಿವ ಹಾಗೂ ಪ್ರಸಾದ ನಿಲಯದ ಅಧ್ಯಕ್ಷ ವಿನಯ ಕುಲಕರ್ಣಿ ಸೇರಿ ಹಲವರು ಭಾಗಿಯಾದರು.
Please follow and like us:

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6