ರಾಜ್ಯ

ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಮುಖಂಡ ಶೆಡ್ ನಲ್ಲಿ ಲಾಕ್ …!

ಅಥಣಿ PRAJAKIRAN.COM : ರಾಜ್ಯದಲ್ಲಿ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಉಪಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತದಾರರು ಕೂಡ ಅಭ್ಯರ್ಥಿಗಳಿಗೆ ಆಗಾಗ ಶಾಕ್ ನೀಡುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಲೇ ಇದೆ.

ಇತ್ತೀಚೆಗೆಷ್ಟೇ ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಗೆ ಬಿಸಿ ತಾಕಿಸಿದ್ದ ಬೆನ್ನಲ್ಲೇ ಇದೀಗ ಅಂತಹದೊಂದು ಸುದ್ದಿ ಅಥಣಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಅಥಣಿ ಉಪಚುನಾವಣೆ ಪ್ರಚಾರಕ್ಕೆ ಬಂದ ಬಿಜೆಪಿ ಮುಖಂಡರನ್ನು ಶೆಡ್ ನಲ್ಲಿ ಲಾಕ್ ಮಾಡಿ ಗ್ರಾಮಸ್ಥರು ಸರಿಯಾದ ಶಾಸ್ತಿ ಮಾಡಿದ್ದಾರೆ.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮಸ್ಥರು ಜಿಲ್ಲಾ ಪಂಚಾಯತಿ ಸದಸ್ಯ ಸಿದ್ದಪ್ಪ ಮುದುಕಣ್ಣವರ ಅವರನ್ನು ಶೆಡ್ ನಲ್ಲಿ ಲಾಕ್ ಮಾಡಿ ಪಾಠ ಮಾಡಿದ್ದಾರೆ.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮವು ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿದ್ದ ಗ್ರಾಮವಾಗಿದೆ. ಪ್ರಚಾರ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಗ್ರಾಮದಿಂದ ಹೊರಗೆ ನಡಿಯಿರಿ ಎಂದು ಹೇಳಿದರು. ಬಲವಂತವಾಗಿ ಗ್ರಾಮಕ್ಕೆ ಬಂದ ಬಿಜೆಪಿ ನಾಯಕನಿಗೆ ಈ ರೀತಿ ಬಿಸಿ ತಾಕಿಸಿದ್ದಾರೆ.

ನೆರೆ ಸಂತ್ರಸ್ತರ ಪರಿಹಾರ ಇದುವರಿಗೆ ಸರಿಯಾದ ರೀತಿ ನಮಗೆ ಬಂದಿಲ್ಲ. ನೀವು ಯಾಕೆ ಈಗ ನಮ್ಮ ಬಳಿ ಬರುತ್ತಿರಾ ಎಂದು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.

ಪ್ರತಿರೋಧದ ನಡುವೆ ಗ್ರಾಮಸ್ಥರು ಶೆಡ್ ನಲ್ಲಿ ಬಂಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ

ಭಯದಿಂದ ತಹಸೀಲ್ದಾರ ಗೆ ಕರೆ ಮಾಡಿದ ಜಿಪಂ ಸದಸ್ಯ ಸಿದ್ದಪ್ಪ ಮುದುಕಣ್ಣವರ, ಗ್ರಾಮಸ್ಥರು ನನ್ನ ಇಲ್ಲಿ ಬಂಧಿಸಿದ್ದಾರೆ. ಚುನಾವಣೆ ಪ್ರಚಾರಕ್ಕೆ ಅವಕಾಶ ನಿಡುತ್ತೀಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಗ್ರಾಮಸ್ಥರು ಸಭೆ ಮಾಡಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ನೀವು ನೆರೆ ಸಂತ್ರಸ್ತರ ಪರಿಹಾರ ವಿತರಣೆ ಮಾಡಿ ಜಿ ಪಂ ಸದಸ್ಯ ಸಿದ್ದಪ್ಪ ಅಂಗಲಾಚಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *