ಅಪರಾಧ

ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಹುಬ್ಬಳ್ಳಿ PRAJAKIRAN.COM : ಪ್ರಿಯಕರ ತನ್ನ ಫೋನ್ ಕರೆ ಸ್ವೀಕರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪ್ರೇಯಸಿ ಕೂಡ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಯುವಕನು ನೇಣಿಗೆ ಶರಣಾದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ‍್ಳಿಯ ಕರ್ಕಿ ಬಸವೇಶ್ವರ ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ರೇಖಾ (19) ವಿಷ ಸೇವಿಸಿದ ಯುವತಿಯಾದ್ರೆ, ವಿಷ್ಣು ಪಗಲಾಪುರ (20 ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.

ಇವರಿಬ್ಬರು ಕಳೆದ ಐದಾರು ವರ್ಷಗಳಿಂದ ಪರಸ್ಪರ ‌ಪ್ರೀತಿ ಮಾಡುತ್ತಿದ್ದರು. ಅಲ್ಲದೆ, ಅವರ ಮನೆಯವರ ವಿರೋಧದ ನಡುವೆ ಕಳೆದ ಐದು ತಿಂಗಳ ಹಿಂದೆ ಇಬ್ಬರು ಮನೆಯವರು ಅದಕ್ಕೆ ಸಮ್ಮತಿ ಸೂಚಿಸಿದ್ದರಿಂದ ನಿಶ್ಚಿತಾರ್ಥ ಕೂಡ ಮಾಡಿದ್ದರು.

ಇವರಿಬ್ಬರಿಗೂ ಮುಂದಿನ ವರ್ಷ ಏಪ್ರಿಲ್ 24ರಂದು ಮದುವೆ ದಿನಾಂಕವನ್ನು ಸಹ ಪೋಷಕರು ನಿಶ್ಚಿತ ಮಾಡಿದ್ದರು ಎಂದು ತಿಳಿದುಬಂದಿದೆ.

ಆದ್ರೆ ನಿನ್ನೆ ರೇಖಾ, ವಿಷ್ಣುಗೆ ದಿನವೀಡಿ ಫೋನ್ ಕರೆ ಮಾಡಿದ್ದಾಳೆ. ಆದ್ರೆ ವಿಷ್ಣು ಫೋನ್ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ವಿಷಯ ತಿಳಿಯುತ್ತಿದಂತೆ ತನ್ನ ಅಜ್ಜಿಯ ಮನೆಗೆ ತೆರಳಿದ ವಿಷ್ಣು ನೇಣಿಗೆ ಕೊರಳೊಡಿದ್ದಾನೆ. ಈ ಸಂಬಂಧ ಹುಬ್ಬಳ್ಳಿಯ ಬೆಂಡಿಗೇರಿ‌‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *