ರಾಜ್ಯ

ಬಾರ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ…!

ಧಾರವಾಡ PRAJAKIRAN.COM : ಬಾರ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ಇತ್ತೀಚಿಗೆ ನಡೆದಿರುವುದು ಬೆಳಕಿಗೆ ಬಂದಿದೆ.

ಹಾಡುಹಗಲೇ ಬಾರ್ ಮುಂದೆ ಹಚ್ಚಲಾಗಿದ್ದ ಬೈಕ್ ಕದ್ದ ಖದೀಮನ ವೀಡಿಯೋ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ಎಕ್ಸಕ್ಲೂಸಿವ್ ವೀಡಿಯೋ PRAJAKIRAN.COM ಕ್ಕೆ ಲಭ್ಯವಾಗಿದೆ.

ಬೈಕ್ ಗೆ ನಕಲಿ ಕೀ ಬಳಸಿ ಕೈಚಳಕ ತೋರಿದ ಕಳ‍್ಳ ನ ಮುಖಚಹರೆಯು ಬೈಕ್ ಮಾಲೀಕನಿಗೆ ಗೊತ್ತಾಗಿದೆ.

ಈ ಘಟನೆ ನಡೆದಿರುವುದು ಧಾರವಾಡದ ಅಶೋಕ ಗಾರ್ಡನ್ ಆವರಣದಲ್ಲಿ. ಅದರ ಸಿಸಿ ಟಿವಿ ದೃಶ್ಯವಳಿಗಳ ಆಧಾರದ ಮೇಲೆ ಬೈಕ್ ಮಾಲೀಕರು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಧಾರವಾಡ-ಹಳಿಯಾಳ ಮಾರ್ಗದಲ್ಲಿರುವ ಅಶೋಕ್ ಗಾರ್ಡನ್ ಮುಂದೆ ಹಚ್ಚಲಾಗಿದ್ದ ಬೈಕ್ ಕ್ಷಣಾರ್ಧದಲ್ಲಿ ಮಾಯಾವಾಗಿರುವುದು ಕಂಡು ಗಲಿಬಿಲಿಗೊಂಡು, ಹಾಡಹಗಲೇ ಈ ರೀತಿ ಬೈಕ್ ಕಳ್ಳತನವಾಗಿರುವುದು ಕಂಡು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ದುರಂತದ ಸಂಗತಿಯೆಂದರೆ ಅಮಾಯಕನಂತೆ ನಟಿಸಿ ಬೈಕ್ ಕದ್ದು ಪರಾರಿಯಾದ ಪವನ್ ಪಾಟೀಲ್ ಇದೀಗ ಪೊಲೀಸರ ಅತಿಥಿಯಾಗುವ ಭಯದಿಂದ ಬೈಕ್ ನ್ನು ತಂದು ಮೂಲ ಮಾಲೀಕರಿಗೆ ಪೊಲೀಸರ ಸಮ್ಮುಖದಲ್ಲಿಯೇ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಇನ್ನೂ ಮುಂದೆ ಇಂತಹ ಕೈ ಚಳಕ ತೋರುವುದಿಲ್ಲ ಎಂದು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾನೆ ಎನ್ನಲಾಗಿದೆ.

ಹೀಗಾಗಿ ಎಲ್ಲೆಂದರಲ್ಲಿ ಬೈಕ್ ಪಾರ್ಕ್‌ ಮಾಡೋ ಮುನ್ನ ಬೈಕ್ ಮಾಲೀಕರು ಸ್ವಲ್ಪ ಎಚ್ಚರವಹಿಸುವುದು ಒಳಿತು. ಇಲ್ಲದಿದ್ದರೆ ನೀವು ಪಾರ್ಕ್ ಮಾಡಿದ ಬೈಕ್ ನಿಮಗೆ ಗೊತ್ತಿಲ್ಲದಂತೆ ಖದೀಮರ ಪಾಲಾಗುವುದು ಗ್ಯಾರಂಟಿ ಎಂದರೆ ತಪ್ಪಾಗಲಾರದು.

 

Please follow and like us:

Leave a Reply

Your email address will not be published. Required fields are marked *