ಅಂತಾರಾಷ್ಟ್ರೀಯ

ನಾಲೆಗೆ ಉರುಳಿದ ಬಸ್, 25ಕ್ಕೂ ಹೆಚ್ಚು ಜನರ ಸಾವು……!

ಮಂಡ್ಯ : ವಿಸಿ ನಾಲೆಯಲ್ಲಿ ಬಸ್ ವೊಂದು ಉರುಳಿದ ಪರಿಣಾಮ ಇಪ್ಪತ್ತೈದು ಜನ ಜಲ ಸಮಾಧಿಯಾದ ಘಟನೆ ಮಂಡ್ಯದಲ್ಲಿ ಜರುಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿಯ
ರಾಜಕುಮಾರ ನಾಲೆಯಲ್ಲಿ ಖಾಸಗಿ ಬಸ್ ಉರುಳಿ ಈ ದುರ್ಘಟನೆ ನಡೆದಿದೆ.

ಚಾಲಕನ ನಿರ್ಲಕ್ಷ್ಯದಿಂದ ನಾಲೆಗೆ ಖಾಸಗಿ ಬಸ್ ಉರುಳಿದೆ.
ಘಟನೆಯಲ್ಲಿ ಇನ್ನು ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ ಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ಶವಗಳನ್ನು ಮಂಡ್ಯ ಮಿಮ್ಸ್ ಆಸ್ಪತಗೆ ರವಾನೆ ಮಾಡಲಾಗಿದ್ದು, ಕುಟುಂಬದ ವರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರಲ್ಲಿ ನಾಲ್ಕೈದು ಮಕ್ಕಳು, ಹತ್ತಾರು ಯುವಕರು ಇದ್ದಾರೆ.

ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಶವಗಳನ್ನು ಹೊರ ತೆಗೆಯುವ ಕೆಲಸ ಮುಂದುವರೆದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು, ಮುಳುಗು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

ಸುಮಾರು ಹನ್ನೆರಡು ಆಳದ ನಾಲಾದಲ್ಲಿ ಬಸ್ ಬಿದ್ದ ಪರಿಣಾಮ ಒಳಗಿದ್ದ ೩೦ ಜನರ ಪೈಕಿ, ೨೫ ಪ್ರಯಾಣಿಕರು ಜಲ ಸಮಾಧಿಯಾಗಿದ್ದಾರೆ. ಇನ್ನೂಳಿದವರ ಪತ್ತೆ ಕಾರ್ಯ ಮುಂದುವರೆದಿದೆ. ಶಾಲಾ ಮಕ್ಕಳು ಈ ದುರಂತದಲ್ಲಿ ಸಾವನ್ನಪ್ಪಿರುವುದು ಇಡೀ ಜಿಲ್ಲೆಯ ಜನತೆಯನ್ನು ಆತಂಕದಲ್ಲಿ ಮುಳುಗಿಸಿದೆ.

Please follow and like us:

Leave a Reply

Your email address will not be published. Required fields are marked *