ಧಾರವಾಡ : ಇಲ್ಲಿಯ ಎಸ್ ಡಿಎಂ ವೈದ್ಯಕೀಯ ಆಸ್ಪತ್ರೆಯ ವೈದ್ಯ ದಂಪತಿಗಳಾದ ಡಾ. ಸುನೀಲ್ ಕುಮಾರ ಕೆ.ಎಸ್. ಹಾಗೂ ಡಾ. ಶರ್ಮಿಳಾ ಸುನೀಲಕುಮಾರ ಅವರ 8ನೇ ತರಗತಿ ಓದುತ್ತಿರುವ ಮಗಳು ಅದಿತಿ ಎಸ್ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಒಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು.
ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮಕ್ಕೆ ಅವಳಿ ನಗರದ ಅಪಾರ ಜನಸ್ತೋಮವೇ ಹರಿದು ಬಂದಿತ್ತು, ಇಡೀ ಸಭಾಂಗಣ ಕಿಕ್ಕಿರಿದು ತುಂಬಿತ್ತು.
ಆ ಪುಟ್ಟ ಬಾಲಕಿಯ ದಿಟ್ಟ ಸಾಧನೆಗೆ ಅಲ್ಲಿ ನೆರೆದಿದ್ದ ಸಾವಿರಾರು ಕಲಾಸಕ್ತರು, ಆಕೆಯ ಸತತ ಮೂರು ಗಂಟೆಗಳ ಕಾಲ ಸಂಗೀತದ ರಸದೋತಣಕ್ಕೆ ಮನಸೋತು ಚಪ್ಪಾಳೆಯ ಸುರಿಮಳೆಯನ್ನು ಹರಿಸಿ, ಹಾರೈಸಿ, ಅಭಿನಂದಿಸಿದರು.
ರಂಗದ ಮೇಲೆ ಕಾಲಿಟ್ಟರೆ ಸಾಕು ಮನೋಜ್ಞವಾಗಿ ರಾಗ,ತಾಳ, ಲಯದೊಂದಿಗೆ ಹೆಜ್ಜೆಯನ್ನು ಹಾಕುತ್ತ ಒಂದು ಹೊಸ ಸಂಗೀತ ಲೋಕಕ್ಕೆ ನೆರೆದಿದ್ದ ಅಪಾರ ಪ್ರೇಕ್ಷಕರನ್ನು ಕರೆದುಕೊಂಡು ಹೋದ ಖ್ಯಾತಿ ಆದಿತಿ ಎಸ್. ಅವಳಿಗೆ ಸಲ್ಲುತ್ತದೆ.
ಅವಳ ನಾಟ್ಯಕ್ಕೆ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರು ಸೈ ಎಂದು ತಲೆದೂಗಿದರು. ಅಷ್ಟೇ ಅಲ್ಲದೆ, ಅವಳ ನಯನ, ಮನೋಹರ ಮನೋಜ್ಞ ನೃತ್ಯಕ್ಕೆ ಶಹಬಾಸ್ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಗಣೇಶ ಸುತ್ತಿ, ಪುಷ್ಪಾಂಜಲಿಯೊಂದಿಗೆ ಆರಂಭಗೊಂಡ ಆದಿತಿ ಎಸ್. ಅವಳ ರಂಗ ಪ್ರವೇಶ, ಸಾಂಪ್ರದಾಯಿಕ ಶೈಲಿಯ ಸಂಗೀತವನ್ನು ಪ್ರಸ್ತುತ ಪಡಿಸಿ, ಎಕದಂತಂ ಗೀತೆಗೆ ತಲೆ ಬಾಗಿ ನಮಿಸಿ, ನೆರೆದಿದ್ದ ಶೋತೃಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದಳು.
ಆನಂತರ ನಡೆದ ನೃತ್ಯ ಅಲೆರಿಪು ಕತ್ತು, ಕಣ್ಣು, ಕೈ, ಕಾಲು ನಯನ ಮೋಹನ ಭರತ ನಾಟ್ಯ ನೃತ್ಯಕ್ಕೆ ವಾರೆ ವಾ ಎಂದರೆ ತನು ಕರಗದೆ ವಚನ ನೃತ್ಯಕ್ಕೆ ಅನುಭವಿ ಕಲಾವಿದರನ್ನು ಮೀರಿಸುವಂತೆ ನಾಟ್ಯ ಪ್ರಸ್ತುತ ಪಡಿಸಿ ಗಮನ ಸೆಳೆದಳು.
ಇದರೊಂದಿಗೆ ವರ್ಣ ಪ್ರದರ್ಶನ, ಪಲ್ಲವಿ, ಅನುಲ್ಲವಿ ಜೊತೆಗೆ ನೃತ್ಯ ಸಮ್ನೀಲನದ ಸಾಕಾರವಾದ ವೇಣುಗೋಪಾಲ ನ ಹುಡುಕಾಟದಲ್ಲಿ ತೊಡಗುವ ಸನ್ನಿವೇಶವಂತೂ ಮಾಡಿದರೆ ಸ್ವಾಮಿಯ ಕರೆತಾರೆ ….ನೃತ್ಯವೂ ಭಾವದ ಜೊತೆಗೆ ಅಭಿನಯ ಮಾಡುವುದು ಗುರು ಶಿಷ್ಯ ರ ಶಕ್ತಿ ಸಾಮರ್ಥ್ಯ ಒರೆಗೆ ಹಚ್ಚುವುದನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಯಿತು.
ಒಟ್ಟಾರೆ ಅದಿತಿ ಎಸ್, ಮನೋಜ್ಞ ಭರತ ನಾಟ್ಯದ ರಂಗ ಪ್ರವೇಶ ಹೊಸ ಸಂಗೀತ ಲೋಕದಲ್ಲಿ ತೇಲುವಂತೆ ಮಾಡಿದ ಅನುಭವ ನೀಡಿತು. ಅವಳ ಅಭಿನಯಕ್ಕೆ ಹಿರಿಯರು ಕೂಡ ಮನಸೋಲುವಂತೆ ಮಾಡಿತು.
ಪುರಂದರದಾಸರ ಅಲ್ಲಿ ನೋಡಲೂ ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲೀ ನೋಡಲು ಶ್ರೀರಾಮ, ರಂಗ ಏತಕ್ಕೆ ಬಾರನೇ, ದಿಲ್ಲಾಣ, ಪುಷ್ಟಿ ಹೀಗೆ ಅನೇಕ ಗೀತೆಗಳಿಗೆ ಅರ್ಧ ಗಂಟೆ ನಿರಂತರವಾಗಿ ನೃತ್ಯ ಮಾಡುವ ಮೂಲಕ ಡಾ. ಸುನೀಲ್ ಕುಮಾರ ಕೆ.ಎಸ್. ಹಾಗೂ ಡಾ. ಶರ್ಮಿಳಾ ಸುನೀಲಕುಮಾರ ಅವರ ಮಗಳು ಅದಿತಿ ಎಸ್ ಸಾವಿರಾರು ನೃತ್ಯ ಆಸಕ್ತರು, ತಲೆ ದೂಗುವಂತೆ ಮಾಡಿದಳು.
ಇದೇ ವೇಳೆ ಎಸ್ ಡಿಎಂ. ಆಸ್ಪತ್ರೆಯ ಡಾ. ರತ್ನಮಾಲಾ ದೇಸಾಯಿ, ವಿದೂಷಿ ರೂಪಶ್ರೀ ಮಧುಸೂದನ್, ಬಾಲಬಳಗ ಶಾಲೆಯ ಉಪಪ್ರಾಚಾರ್ಯೆ ತೇಜಶ್ವಿನಿ ಸಬನೀಶ, ವಿದೂಷಿ ನಾಗರತ್ನ ಹಡಗಲಿ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ, ಡಾ ರತ್ನಮಾಲಾ ದೇಸಾಯಿ, ರೂಪಶ್ರೀ ಮಧುಸೂದನ್ ಅವರು ಆದಿತಿ ನೃತ್ಯ ವಿಶಿಷ್ಟ, ವಿಭಿನ್ನವಾಗಿದ್ದು, ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾಳೆ. ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ನೃತ್ಯ ಎಲ್ಲವೂ ಒಳಗೊಂಡಿದೆ. ಅವಳ ಕಲಾ ಆಸಕ್ತಿ ನೃತ್ಯಕ್ಕೆ ಸಾಕ್ಷಿಯಾದರೆ ಕಲಿತದ್ದು ಕಡಲೆ, ಕಲಿಯಬೇಕಾಗಿದ್ದು ಕಡಲಷ್ಟು ಗುರು ಶಿಷ್ಯರ ಪೈಕಿ ಯಾರೂ ಯಾರ ಪಾದ ಮುಟ್ಟಿದ್ದರೂ ಸಾಂಕೇತಿಕ. ಗುರು ಶಿಷ್ಯ ಶುದ್ಧಾತ್ಮ ಸಂಗೀತ ಹದವಾದ ಸಂಗೀತ ಶಾಂತಿ, ನೆಮ್ಮದಿ ತಂದು ಕೊಡುತ್ತದೆ. ಇನ್ನಷ್ಟು ಹೆಮ್ಮೆಯ ಸಾಧನೆ ತರಲಿ ಎಂದು ಹರಿಸಿದರು.
ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದೂಷಿ ನಾಗರತ್ನ ಹಡಗಲಿ, ಹಾಡುಗಾರಿಕೆ ವಿದ್ವಾನ ಬಾಲ ಸುಬ್ರಮಣ್ಯಶರ್ಮ, ಮೃದಂಗದಲ್ಲಿ ವಿದ್ವಾನ್ ತುಮಕೂರು ಬಿ. ಶಶಿಶಂಕರ, ಕೊಳಲಿನಲ್ಲಿ ವಿದ್ವಾನ್ ರಾಕೇಶ ಸುಧೀರ್, ವಯೋಲೀನ್ ನಲ್ಲಿ ಕೃತಿಕ್ ಕೌಶಿಕ್, ರಿದಂ ಪ್ಯಾಡ್ ನಲ್ಲಿ ವಿದ್ವಾನ್ ಸ್ಕಂದ ಎಂ.ವಿ. ಸಾಥ್ ನೀಡಿದರು.
ಸುನೀಲ್ ಕುಲಕರ್ಣಿ ನಿರೂಪಿಸಿದರೆ, ಸಂತೋಷ ಮಹಾಲೆ ಪ್ರಸಾದನ ಮಾಡಿದರು. ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧಡೆಯ ಗುರುಹಿರಿಯರಿಗೆ ಗುರು ಕಾಣಿಕೆ ನೀಡಿ ಸನ್ಮಾನಿಸಲಾಯಿತು.