ಅಂತಾರಾಷ್ಟ್ರೀಯ

ಬಾಬರನ ಮಸೀದಿ ಕಟ್ಟಲು ಬಿಡುವುದಿಲ್ಲ ಎಂದ ಮಹಾರಾಜ್

ಹುಬ್ಬಳ್ಳಿ : ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಮಸೀದಿ ಬಗ್ಗೆ ನಮಗೆ ವಿರೋಧವಿಲ್ಲ… ಆದ್ರೇ ಬಾಬರನ ಮಸೀದಿ ಕಟ್ಟಲು ಬಿಡುವುದಿಲ್ಲ ಎಂದು ಜಬಲ್ ಪುರದ ಮಹಾಮಂಡಳೇಶ್ವರ ಅಖಿಲೇಶ್ವರಂದಗಿರಿ ಮಹಾರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅವರು ಭಾನುವಾರ ಸಂಜೆ ಹುಬ್ಬಳ್ಳಿಯಲ್ಲಿ ವಿಶ್ವ ಹಿಂದು ಪರಿಷದ್ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಅವರು ಅಯೋಧ್ಯದ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಗಳಿಂದ ಜನ ಹರಿದು ಬರುತ್ತಿದೆ. ಬಿಜೆಪಿ ರಾಮ ಜನ್ಮಭೂಮಿಯಲ್ಲಿ ನಿರ್ಮಾಣ ವಿಚಾರದಲ್ಲಿ ದೇಶದ ಜನತೆಗೆ ಮಾತು ಕೊಟ್ಟಿದೆ.ನಾವು ಇನ್ನೂ ಬಿಜೆಪಿ ಕೊಟ್ಟ ಆಶ್ವಾಸನೆ ಮೇಲೆ ನಂಬಿಕೆ‌ ಕಳೆದುಕೊಂಡಿಲ್ಲ ಎಂದರು.

ರಾಮ ಮಂದಿರ ನಿರ್ಮಾಣ ವಿಚಾರ ದೇಶದ ಜನರ ಭಾವನೆಗಳ ಜೊತೆ ಜೋಡಣೆಯಾಗಿದೆ.ಅದು ಬಾಬರನ‌ ಜನ್ಮಭೂಮಿ ಅಲ್ಲ.ರಾಮನ ಜನ್ಮಭೂಮಿ. ಬಾಬರ್ ಓರ್ವ ದಾಳಿಕೊರ, ರಾಜ್ಯಭಾರ ಮಾಡಲು ಅಕ್ರಮಣ ಮಾಡಿಕೊಂಡು ಬಂದವನು ಎಂದು ಕಿಡಿಕಾರಿದರು.

ನಾವು ಪುರತಾತ್ವದ ಇಲಾಖೆಯ ಸಾಕ್ಷಗಳು, ಪುರಾಣದ ಸಾಕ್ಷಗಳ ಆಧಾರದ ಮೇಲೆ ಮಂದಿರ ನಿರ್ಮಿಸಿ ಎಂದು ಕೇಳುತ್ತಿದ್ದೇವೆ. ನ್ಯಾಯಾಲಯ ಈ ವಿಚಾರದಲ್ಲಿ ನಮ್ಮ ಭಾವನೆಗಳನ್ನು ಕಡೆಗಣಿಸಲು ಬರುವುದಿಲ್ಲ. ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಬದ್ದತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

ಪೂರ್ಣ ಪ್ರಮಾಣದ ಬಹುಮತದಿಂದ ಅಧಿಕಾರ‌ಕ್ಕೆ ಬಂದಾಗಿನಿಂದ ಬಿಜೆಪಿ‌ ಮೇಲೆ ನಿರೀಕ್ಷೆ ಇಟ್ಟಕೊಂಡಿದ್ದೇವೆ. ನ್ಯಾಯಾಲಯದ ಹೋರಾಟದ ಜೊತೆಗೆ ನಿಮ್ಮ ಬದ್ದತೆ ಪ್ರದರ್ಶಿಸಿ ಎಂದು ಸವಾಲ್ ಹಾಕಿದರು.

ಕಾಂಗ್ರೆಸ್ ರಾಮಸೇತು ಕಾಲ್ಪನಿಕ‌ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಗೆ ಈಗ ಬುದ್ದಿ ಬಂದಿದೆ. ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಇಬ್ಬರು ಮಹಿಳೆಯರಿಗೆ ಅನುಮತಿ ಕೊಟ್ಟಿದ್ದು ಸರಿಯಾ? ಎಂದು ಪ್ರಶ್ನಿಸಿದ ಅವರು ಹಾಗಾದ್ರೆ ಜುಮ್ಮಾ ಮಸೀದಿಯಲ್ಲಿ ರುದ್ರಾಭಿಷೇಕ ಮಾಡಲು ಅನುಮತಿ ಕೋಡ್ತೀರಾ…? ಎಂದು ಸ್ವಾಮೀಜಿ ಸುಪ್ರೀಂ ಕೋರ್ಟ ತೀರ್ಪು ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬಹುಸಂಖ್ಯಾತರ ಭಾವನೆಗಳು ನಿಮಗೆ ಕಾಣುತ್ತಿಲ್ವಾ? ಎಂದು ಪ್ರಶ್ನಿಸಿದರು. ಇದೇ ವೇಳೆ ಶಬರಿ ಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ನೀಡದ ಭಕ್ತರಿಗೆ ಹಾಗೂ ದೇವಸ್ಥಾನದ ಅರ್ಚಕರಿಗೆ ಅಭಿನಂದನೆ ಸಲ್ಲಿಸುತ್ತೇ ಎಂದರು.

Please follow and like us:

Leave a Reply

Your email address will not be published. Required fields are marked *