ರಾಜ್ಯ

ಕೇರಳ ಸರಕಾರ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿದಿದೆ

ಧಾರವಾಡ : ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದಿಂದಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದಂತಾಗಿದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದ್ದಾರೆ.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇರಳ ಸರಕಾರ ನಡೆದುಕೊಂಡಿದೆ. ಹೀಗಾಗಿ ನಾನು ಕೇರಳ ಸರಕಾರಕ್ಕೆ ಅಭಿನಂದನೆ ಸಲ್ಕಿಸುತ್ತೇನೆ ಎಂದರು.

ಅಲ್ಲಿನ ಸರಕಾರದ ಸೂಕ್ತವಾದ ನಿರ್ಣಯ ತೆಗೆದುಕೊಂಡಿದೆ. ಇದೊಂದು ಹೆಮ್ಮೆಯ ಕ್ರಮ. ಮಹಿಳೆಯರ ಪ್ರವೇಶಕ್ಕೆ ವಿರೋಧಿಸಿದರೆ ಸುಪ್ರಿಂಗೆ ಅಗೌರವ ತೋರಿದಂತಾಗುತ್ತದೆ ಎಂದರು.

ಇದು ಸಂವಿಧಾನಕ್ಕೂ ಅಗೌರವ ತೋರಿಸಿದಂತೆ. ಇದೀಗ ಕೇರಳ ಸರಕಾರ ಒಳ್ಳೆಯ ಕೆಲಸ ಮಾಡಿದೆ. ನಾವು ಇಡೀ ಕೇರಳ ಜನತೆಗೆ ಅಭಿನಂದನೆ ಸಲ್ಲಿಸಬೇಕು ಎಂದ ಅವರು ಒಬ್ಬರಿಗೆ ಎಂಟ್ರಿ ಸಿಕ್ಕರೆ ಸಾಕು, ಅದು ಮುಂದುವರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೂಢನಂಬಿಕೆ, ಕೋಮುವಾದ, ಆಧುನಿಕ ಮೌಲ್ಯಗಳಲ್ಲ ಎಂದು ಪ್ರತಿಪಾದಿಸಿದ ಚಂಪಾ ವಿರೋಧಿಸುವವರು ಮಹಿಳೆಯರ ಪ್ರವೇಶಕ್ಕೆ ಮುಕ್ತ ವಾತವರಣ ಕಲ್ಪಿಸಬೇಕು ಎಂದು ಚಂಪಾ ಸಲಹೆ ನೀಡಿದರು.

Please follow and like us:

Leave a Reply

Your email address will not be published. Required fields are marked *