ಆರೋಗ್ಯ

ಕಿವಿ ನೋವು ಮತ್ತು ಸಿಡಿತಕ್ಕೆ ಇಲ್ಲಿದೆ ಮನೆ ಮದ್ದು

  • ಅಮೃತ ಬಳ್ಳಿಯ ಬೇರನ್ನು ಎಣ್ಣೆಯಲ್ಲಿ ಜಜ್ಜಿ ರಸ ತೆಗೆದು ಮೂರು ದಿನ ಕಿವಿಗೆ ಹಿಂಡುವುದು.
  • ಹಸಿ ಶುಂಠಿಯ ರಸವನ್ನು ಬಿಸಿ ಮಾಡಿ ಕಿವಿಗೆ ಮೂರರಿಂದ ನಾಲ್ಕು ಹನಿ ಹಾಕುವುದರಿಂದ ಕಿವಿ ನೋವು ಕಡಿಮೆ ಆಗುವುದು.
  • ಬೆಳ್ಳುಳ್ಳಿ, ಹಿಪಲಿ, ಕರಿಮೆಣಸು ಇವುಗಳನ್ನು ಎಣ್ಣೆಯಲ್ಲಿ ಕಾಯಿಸಿ ಸೋಸಿ ಮೂರು ಹನಿ ಕಿವಿಗೆ ಹಾಕುವುದರಿಂದ ನೋವು, ಸಿಡಿತ ಕಡಿಮೆ ಆಗುವುದು.
  • ಹೊಂಗಾರ ಸೊಪ್ಪಿನ ಹಸಿ ರಸ ವನ್ನು ಕಿವಿಗೆ ಹಿಂಡುವುದರಿಂದ ಕಿವಿ ನೋವು ಕಡಿಮೆ ಆಗುವುದು.
  • ಬೆಳ್ಳುಳ್ಳಿ ಮತ್ತು ಹಿಂಗು ಇವುಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕಾಯಿಸಿ ಸೋಸಿ, ಆ ಎಣ್ಣೆಯನ್ನು ಕಿವಿಗೆ ಹಾಕುವುದರಿಂದ ಕಿವಿ ನೋವು ಸಿಡಿತ ಶಮನ
  • ಜೇನು ತುಪ್ಪ 1ರಿಂದ 2 ಸಲ ಕಿವಿಗೆ ಹಾಕುವುದರಿಂದ ಕಿವಿ ನೋವು ಶಮನ
  • ನಿಂಬೆ ರಸ ಬಿಸಿ ಮಾಡಿ ಅದಕ್ಕೆ ನೀರು ಸೇರಿಸಿ ತೊಟ್ಟು ತೊಟ್ಟಾಗಿ ಕಿವಿಗೆ ಬಿಡುವುದರಿಂದ ಕಿವಿ ನೋವು ಕಡಿಮೆ ಆಗುವುದು.
  • ಉಳ್ಳಾಗಡ್ಡೆ ರಸವನ್ನು ಬಿಸಿ ಮಾಡಿ ಕಿವಿಗೆ ಬಿಡುವುದು
  • ಬೇವಿನ ಎಲೆಯನ್ನು ಕುದಿಸಿ ಅದರ ಆವಿಯನ್ನು ಕಿವಿಗೆ ತಾಗುವಂತೆ ಹಿಡಿದರೆ ಕಿವಿ ನೋವು ಮಾಯಾವಾಗುವುದು.
  • ಕೀಟಗಳು ಕಿವಿ ಹೊಕ್ಕರೆ ನೀರಿನಲ್ಲಿ ಉಪ್ಪು ಮಿಶ್ರ ಮಾಡಿ ಕಿವಿಗೆ ಬಿಟ್ಟರೆ ಕೀಟ ಹೊರಕ್ಕೆ ಬರುತ್ತದೆ.
  • (ಹಳ್ಳಿಯಲ್ಲಿ ಅಜ್ಜಿಯಂದಿರು ಈ ರೀತಿಯಾದ ಔಷಧಗಳನ್ನು ಮೊದಲು ಉಪಯೋಗಿಸುತ್ತಿದ್ದರು. ಬರ ಬರುತ್ತಾ ಇದಲ್ಲೆ ಕಡಿಮೆಯಾಗುತ್ತಾ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು)

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.

Please follow and like us:

Leave a Reply

Your email address will not be published. Required fields are marked *