ಬೆಂಗಳೂರು prajakiran.com : ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಒಂದೇ ದಿನ ಹತ್ತು ಪ್ರಕರಣಗಳು ಏರಿಕೆಯಾಗುವ ಮೂಲಕ 207 ಕ್ಕೆ ಏರಿಕೆಯಾಗಿದೆ.
ನಂಜನಗೂಡಿನ ಕಾರ್ಮಿಕನಿಂದ ಅತ್ತೆ ಹಾಗೂ 8 ಮಗುವಿಗೆ ಹರಡಿದ್ದು, ಇವರೊಬ್ಬರಿಂದಲೇ 38 ಜನರಿಗೆ ಕರೋನಾ ಸೋಂಕು ಹರಡಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಏಪ್ರಿಲ್ ಅಂತ್ಯಕ್ಕೆ ಹತ್ತು ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ ರಾಜ್ಯ ಸರಕಾರ ಹೈಕೋರ್ಟ್ ಗೆ ವರದಿ ಸಲ್ಲಿಸಿದೆ.
ಈ ಕುರಿತು ಅಂಕಿ ಅಂಶಗಳ ಮಾಹಿತಿ ನೀಡಿದ್ದು, ಅಷ್ಟು ಜನರಿಗೆ ಕರೋನಾ ತಲುಪಿದರೂ ಚಿಕಿತ್ಸೆ ನೀಡಲು ಸರಕಾರ ಸನ್ನದ್ದವಾಗಿದೆ ಎಂದು ಹೇಳಿದೆ.
ಇನ್ನೂ ಐಸಿಎಂಆರ್ ಡೆಡ್ಲಿ ವಾರ್ನಿಂಗ್ ನೀಡಿದ್ದು, ಶೇ. 30 ಜನರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಅವರಿಗೆ ಉಸಿರಾಟದ ತೋಂದರೆಯಿಂದ ಹರಡಿರುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದೆ.
ರಾಜ್ಯಕ್ಕೂ ನಿಜಾಮೋದ್ದೀನ್ ನಂಟು ವಿಸ್ತರಿಸಿದೆ. ತುಮಕೂರಿನ ವೃದ್ದ ಸಾವನ್ನಪ್ಪಿರುವುದರ ಬೆನ್ನಲ್ಲೇ ಬೆಳಗಾವಿ, ಮೈಸೂರು, ಬೀದರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ ವ್ಯಕ್ತಿಗೂ ನಿಜಾಮೋದ್ದೀನ್ ನಂಟಿರುವುದು ಟ್ರಾವೆಲ್ ಹಿಸ್ಟರಿ ವೇಳೆ ಬೆಳಕಿಗೆ ಬಂದಿದೆ.
ದೆಹಲಿಯಿಂದ ಬಂದಿದ್ದ ಗುಜರಾತ್ ಮೂಲದ ವ್ಯಕ್ತಿ ಬಾಗಲಕೋಟೆಯಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ 700 ಜನರ ಪ್ರತಿಭಟನೆ ನಡೆಸಿದಾಗ ಕೂಡ ಇದ್ದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.