ಆರೋಗ್ಯ

ಗೋಡಂಬಿ ಸೇವನೆಯಿಂದ ಇದೆ ಸಾಕಷ್ಟು ಲಾಭಗಳು

* ಗೋಡಂಬಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಫಂಗಲ್‍ ಗುಣಗಳಿರುತ್ತದೆ. ಇದನ್ನು ಸೇವೆನೆ ಮಾಡಿದರೆ ಮುಖದ ಬಣ್ಣ ಬಿಳಿಯಾಗುತ್ತದೆ.

* ಗೋಡಂಬಿಯಲ್ಲಿ ಕಾಪರ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಕೂದಲು ಉದುರುವಿಕೆ ಕೂಡ ನಿವಾರಣೆಯಾಗುತ್ತದೆ.

* ಗೋಡಂಬಿಯಲ್ಲಿ ಕಬ್ಬಿಣದ ಅಂಶವಿರುವುದರಿಂದ ರಕ್ತ ಹೀನತೆ ಸಮಸ್ಯೆ ಉಂಟಾಗದಂತೆ ಕಾಪಾಡುತ್ತದೆ.

* ಇದರಲ್ಲಿರುವ ಪಾಸ್ಟರಸ್ ಹಲ್ಲುಗಳನ್ನು ಗಟ್ಟಿಮುಟ್ಟಾಗಿರಲು ಸಹಾಯ ಮಾಡುತ್ತದೆ.

* ಇದರಲ್ಲಿ ಪೈಬರ್ ಹೆಚ್ಚಾಗಿ ಇರುತ್ತದೆ. ಹಾಗೂ ಫ್ಯಾಟ್‍ ಕಡಿಮೆ ಇರುತ್ತದೆ. ಇದರಿಂದ ಜೀರ್ಣ ಕ್ರಿಯೆ ಕೂಡ ಸರಿಯಾಗುತ್ತದೆ. ಜೊತೆಗೆ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ.

* ಗೋಡಂಬಿ ಕೊಲೆಸ್ಟಾಲ್ ಫ್ರೀ ಆಗಿದೆ. ಇದನ್ನು ಸೇವನೆ ಮಾಡುವುದರಿಂದ ಹೃದಯ ಸಮಸ್ಯೆ ದೂರವಾಗುತ್ತದೆ.

* ಗೋಡಂಬಿಯಲ್ಲಿ ಪ್ರೋಟಿನ್, ಕ್ಯಾಲ್ಸಿಯಂ ಹೆಚ್ಚಾಗಿರುತ್ತದೆ. ಇದರಿಂದ ಮಾಂಸ ಖಂಡ (ಮಸಲ್ಸ್) ಸದೃಢವಾಗುತ್ತದೆ.

* ಗೋಡಂಬಿಯಲ್ಲಿ ವಿಟಾಮಿನ್ ‘ಬಿ’ ಮತ್ತು ಫಾಲಿಕ್ ಆ್ಯಸಿಡ್ ಹೆಚ್ಚಾಗಿರುವುದರಿಂದ ಮೆದಳಿನ ಶಕ್ತಿ ಹೆಚ್ಚಿಸುತ್ತದೆ.

* ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‍ ಇದೆ. ಇದು ಕ್ಯಾನ್ಸರ್ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

* ಗೋಡಂಬಿ ಸೇವನೆ ಮಾಡುವುದರಿಂದ ಬ್ಲಡ್ ಶುಗರ್ ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ. ಇದರಿಂದ ಸಕ್ಕರೆ ರೋಗವನ್ನು ಕೂಡ ನಿಯಂತ್ರಿಸಿಕೊಳ್ಳಬಹುದು.

* ಹಸಿಯಾದ ಗೋಡಂಬಿಯನ್ನು ತಿನ್ನಲೇಬಾರದು. ಅದನ್ನು ಹುರಿದು ತಿನ್ನಬೇಕು. ಅಲ್ಲದೆ, ನಿಯಮಿತವಾಗಿ ತಿನ್ನಬೇಕು. (ಔಷಧಿ ರೂಪದಲ್ಲಿ ಸೇವಿಸಬೇಕು)

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

Leave a Reply

Your email address will not be published. Required fields are marked *