ರಾಜ್ಯ

ರಡ್ಡಿ ಮನೆಗೆ ಎಂಟ್ರಿ ಕೊಟ್ಟ ಸಿಸಿಬಿ ಪೊಲೀಸರು !

ಬೆಂಗಳೂರು/ಚಿತ್ರದುರ್ಗ/ಹೈದ್ರಾಬಾದ್ : ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ ಪಾರಿಜಾತ ಅಪಾರ್ಟಮೆಂಟ್ ಮೇಲೆ ದಾಳಿ ನಡೆಸಿದ್ದಾರೆ.

ಅದೇ ರೀತಿಯಾಗಿ, ಚಿತ್ರದುರ್ಗದ ಮೊಳಕಾಲ್ಮೂರ ಮನೆ, ರಡ್ಡಿ ಆಪ್ತ ಅಲಿಖಾನ್ ಆರ್.ಟಿ. ನಗರದ ಮನೆ ಹಾಗೂ ಹೈದ್ರಾಬಾದ ಮನೆ ಸೇರಿದಂತೆ ಅನೇಕ ಕಡೆ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮನೆಯಲ್ಲಿನ ಸಿಸಿ ಟಿವಿ ಪೂಟೇಜ್ ತಡಕಾಡಿದ್ದು, ಬೆಳಗ್ಗೆಯಿಂದ ಶತಾಯ ಗತಾಯ ಗಾಲಿ ಜನಾರ್ಧನರಡ್ಡಿಯನ್ನು ಬಂಧೀಸಲೇ ಬೇಕು ಎಂದು ಪಣತೊಟ್ಟಿದೆ.

ಹೀಗಾಗಿ ರಡ್ಡಿ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಯಾವುದೇ ಕ್ಷಣದಲ್ಲೂ ಬಂಧಿಸುವ ಸಾಧ್ಯತೆಗಳಿದ್ದು, ರಡ್ಡಿ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರುವ ಸಾಧ್ಯತೆಯಿದೆ.

ವಕೀಲ ಸುನೀಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಇದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಸಿಸಿಬಿ ಪೊಲೀಸರ ಮೇಲೆ ರಾಜ್ಯದ ಸಮ್ಮೀಶ್ರ ಸರಕಾರ ಒತ್ತಡ ಹೇರಿದೆ ಎಂದು ಆರೋಪಿದ್ದಾರೆ. ಇದರ ವಿರುದ್ದ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *