ರಾಜ್ಯ

ಬಿಜೆಪಿ ಸುಳ್ಳಿಗೆ ಕರ್ನಾಟಕದ ಉಪಚುನಾವಣೆ ಉತ್ತರ

ಧಾರವಾಡ : ರಾಜ್ಯದ ನಾಲ್ಕು ಉಪಚುನಾವಣೆಗಳಲ್ಲಿ ಬಿಜೆಪಿ ಸೋಲಿಗೆ ಕಾರಣ ಅವರು ಹೇಳಿರುವ ಸುಳ್ಳುಗಳೇ ಕಾರಣ. ಇವತ್ತು ಜನರಿಗೆ ಗೊತ್ತಾಗಿದೆ. ಅವರು ಎಷ್ಟು ಸುಳ್ಳು ಹೇಳಿದ್ದರೋ ಅಷ್ಟು ಕೆಳಗೆ ಕುಸಿದಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಹೇಳಿದ ಒಂದು ಮಾತನ್ನು ಉಳಿಸಿಕೊಳ್ಳದೆ ಜನರನ್ನು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಬಿತ್ತರಿಸುತ್ತಾರೆ. ಪೆಟ್ರೋಲ್ ದರ ನೂರು ರೂಪಾಯಿ ಆದ್ರು ಮೋದಿಗೆ ಓಟ್ ಮಾಡತಿವಿ ಅಂತಾರೆ ಅವರೆಲ್ಲ ಅವರ ಜನಾನೆ. ದೇಶದ ಜನರ ಮತ್ತು ನಮ್ಮ ರೈತರ ಪರಿಸ್ಥಿತಿಯನ್ನು ಅದೋಗತಿಗೆ ತಳ್ಳಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರ ಸುಳ್ಳಿಗೆ ಇಂದು ಕರ್ನಾಟಕದ ಉಪಚುನಾವಣೆ ಉತ್ತರ ನೀಡಿದೆ‌. ಮುಂದೆ ದೇಶದಾದ್ಯಂತ ನಡೆಯುವ ಚುನಾವಣೆಯಲ್ಲಿ ಇದರ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂದರು.

ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿಯವರನ್ನು ಬಿಜೆಪಿ ದೂರ ಇಟ್ಟಿದೆ. ಮೋದಿಯವರಿಗೂ ಗೊತ್ತಾಗಿದೆ ಜನಾರ್ಧನ ರೆಡ್ಡಿಯಂತವರನ್ನು ಇಟ್ಟಕೊಂಡರೆ ಏನು ಆಗತ್ತೆ ಅಂತ. ಇನ್ನು ಸ್ವಲ್ಪ ಜನಾ ಇಂತವರನ್ನು ಕೂಡಿಸಿಕೊಂಡರೆ ಅವರ ಪರಿಸ್ಥಿತಿ ಎನಾಗತ್ತೆ ಅಂತ ಈಗಾಗಲೆ ಅರ್ಥವಾಗುತ್ತಿದೆ ಅವರಿಗೆ

ಸಿಬಿಐ ಸೇರಿದಂತೆ ಹಲವಾರು ಹಗರಣಗಳನ್ನು ನೋಡಿದ್ದಿರಿ ಇದನ್ನೆಲ್ಲಾ ನೋಡಿದ ಮೇಲೆ ಯಾರಿಗೂ ಸ್ವತಂತ್ರವೇ ಇಲ್ಲದಂತಾಗಿದೆ. ಹೀಗೆ ಮುಂದುವರೆದರೆ ದೇಶದ ಗತಿ ಏನು ಎಂಬುದನ್ನು ಸಾಮಾನ್ಯ ಜನರು ವಿಚಾರಿಸಬೇಕು ಎಂದರು.

ಉಪ ಚುನಾವಣೆ ಫಲಿತಾಂಶ ದೇಶದೆಲ್ಲೆಡೆ ೧೦೦ % ಇದೇ ಮುಂದುವರೆದೆವರೆಯುತ್ತದೆ. ಇದರಲ್ಲಿ ನೋ ಡೌಟ್ ಎಂದ ಅವರು ಜನಾರ್ದನ ರೆಡ್ಡಿ ಇಡಿ ಡೀಲ್ ವಿಚಾರ ಕುರಿತಂತೆ ನನಗೆ ಯಾವುದೇ ಮಾಹಿತಿ ಇಲ್ಲ. ಅದರ ಬಗ್ಗೆ ಮಾತನಾಡುವದು ತಪ್ಪು ಎಂದರು.

ಇದೇ ವೇಳೆ ಲೋಕಸಭಾ ಧಾರವಾಡ ಅಭ್ಯರ್ಥಿ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಚುನಾವಣೆ ಬರಲಿ ಬಂದಾಗ ನೋಡಿದ್ರಾಯಿತು ಎಂದರು.

Please follow and like us:

Leave a Reply

Your email address will not be published. Required fields are marked *