ಬರ್ಮಿಂಗ್ಹ್ಯಾಮ್: ಭಾರತ-ಇಂಗ್ಲೆಂಡ್ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೇಂಡ್ ಭರ್ಜರಿ ಜಯ ಸಾಧಿಸಿದ್ದು, ಭಾರತ ತಂಡವು 31ರನ್ಗಳ ಮೂಲಕ ಸೋಲು ಕಂಡಿದೆ.
ಈ ಗೆಲುವು ದಾಖಲಿಸುವ ಮೂಲಕ ಇಂಗ್ಲೆಂಡ್ ತಂಡವು ಐತಿಹಾಸಿಕ ಗೆಲುವು ದಾಖಲಿಸಿದಂತಾಗಿದೆ. ಆ ಮೂಲಕ ಐದು ಟೆಸ್ಟ್ ಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಂತಾಗಿದೆ. ಇದೇ ವೇಳೆ ವಿರಾಟ್ ಕೊಹ್ಲಿ ಅಜೇಯ 43 ರನ್ ಹಾಗೂ ದಿನೇಶ್ ಕಾರ್ತಿಕ್ ಅಜೇಯ 18 ರನ್ ಗಳಿಸಿ ನಾಲ್ಕನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಆದರೆ, ಆರಂಭದಲ್ಲೇ 20 ರನ್ ಮಾಡಿದ್ದ ದಿನೇಶ್ ಕಾರ್ತಿಕ್ ಜೇಮ್ಸ್ ಆಂಡರ್ಸೆನ್ ಬೌಲಿಂಗ್ ವೇಳೆ ವಿಕೆಟ್ ಒಪ್ಪಿಸಿದರು.
ಇನ್ನೊಂದೆಡೆ ದಿಟ್ಟ ಹೋರಾಟ ಮುಂದುವರಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ ಕೊಹ್ಲಿ ಆಕರ್ಷಕ ಅರ್ಧ ಶತಕ ಬಾರಿಸಿರುವುದು ವಿಶೇಷವಾಗಿದೆ. ಇವರಿಗೆ ಹಾರ್ದಿಕ್ ಪಾಂಡ್ಯ ಉತ್ತಮ ಬೆಂಬಲ ನೀಡಿದರು.
ಈ ಮುನ್ನ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 287 ರನ್ಗಳಿಗೆ ಉತ್ತರವಾಗಿ ನಾಯಕ ವಿರಾಟ್ ಕೊಹ್ಲಿ ಅಮೋಘ ಶತಕದ (149) ಹೊರತಾಗಿಯೂ ಟೀಂ ಇಂಡಿಯಾ 274 ರನ್ಗಳಿಗೆ ಸರ್ವಪತನವನ್ನು ಕಂಡಿತು. ಇದು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಭಾರಿ ನಿರಾಶೆ ಮೂಡಿಸಿದೆ.
ಜಕಾರ್ತ್ : ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಮಹಿಳಾ ಕುಸ್ತಿ ವಿಭಾಗದಲ್ಲಿ ವಿನೇಶ್ ಪೋಗಾತ್ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ 500 ಮೀಟರ್ ಪ್ರೀ ಸ್ಟೈಲ್ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನವಾಗಿದ್ದಾರೆ. ಇದೇ ವೇಳೆ ಪೂಜಾ ದಾಂಡಾ ಹಾಗೂ ಸುಮಿತ್ ಮಲಿಕ್ ಕೂಡ ಪದಕ ಗೆಲ್ಲುವ ಹಂತ ತಲುಪುವ ಮೂಲಕ ಭಾರತದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಈವರೆಗೆ ಭಾರತ ಎರಡು ಚಿನ್ನ ಎರಡು ಬೆಳ್ಳಿ ಹಾಗೂ […]
ದುಬೈ: ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಮಹಾಸಮರಕ್ಕೆ ಐಸಿಸಿ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಪ್ರಮೋಷನ್ ಆರಂಭಗೊಂಡಿದೆ. ಈಗಿನಿಂದಲೇ ಕ್ರಿಕೆಟ್ ವಿಶ್ವಕಪ್ ಜಾತ್ರೆಗಾಗಿ ಐಸಿಸಿ ವಿಶೇಷ ಪ್ರಮೋಷನ್ ವಿಡಿಯೋ ತಯಾರಿಸಿದ್ದು, ಅದನ್ನ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ಇದಕ್ಕಾಗಿಯೇ ಒಂದು ವಿಶೇಷ ಗೀತೆ ತಯಾರಿಸಿದ್ದು, ಇಂಗ್ಲೆಂಡ್ನ ಆಟಗಾರ ಫ್ಲಿಂಟಾಪ್ ಹಾಗೂ ಕ್ರಿಕೆಟ್ ಅಭಿಮಾನಿಗಳನ್ನ ಬಳಿಸಿಕೊಂಡು ಈ ಹಾಡಿನ ಪ್ರೋಮೋ ಚಿತ್ರೀಕರಣ ಮಾಡಿದೆ. ಫ್ಲಿಂಟಾಪ್ ಜತೆಗೆ ಈ ವಿಡಿಯೋದಲ್ಲಿ ಮಾಜಿ ಕ್ರಿಕೆಟಿಗರಾದ ಕುಮಾರ ಸಂಗಕ್ಕರ, […]
ಟ್ರೆಂಟ್ ಬ್ರಿಡ್ಜ್ : ಸತತ ಎರಡು ಟೆಸ್ಟ್ ಗಳಲ್ಲಿ ಸೋಲು ಕಂಡಿದ್ದ ಭಾರತದ ಕ್ರಿಕೆಟ್ ತಂಡ ಮೂರನೇ ಪಂದ್ಯದಲ್ಲಿ ಫೀನಿಕ್ಸ್ ನಂತೆ ಎದ್ದು ಬರುವ ಮೂಲಕ ಗೆಲುವನ್ನು ದಾಖಲಿಸಿದೆ. ಆ ಗೆಲುವನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದೇವರ ನಾಡು ಕೇರಳದ ಸಂತ್ರಸ್ತರಿಗೆ ಸಮರ್ಪಣೆ ಮಾಡಿದ್ದಾರೆ. ಆ ಮೂಲಕ ಅವರ ನೋವಿನಲ್ಲೂ ನಾವಿದ್ದೇವೆ. ಮತ್ತೇ ಕೇರಳ ಮೊದಲಿನಂತಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡಕ್ಕೆ […]