ರಾಜ್ಯ

ಮಣ್ಣಿನ ಪರೀಕ್ಷೆ, ಕಟ್ಟಡದ ಸಾಮರ್ಥ್ಯ ಪರಿಶೀಲನೆ

ಧಾರವಾಡ : ಕಟ್ಟಡ ದುರಂತದ ಪ್ರಾಥಮಿಕ ವರದಿಯನ್ನು ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಅವರು ಸೋಮವಾರ ಘಟನಾ ಸ್ಥಳದಲ್ಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ದರಕರಣ ಕುರಿತು ವಿವರ ನೀಡಿದರು.

ವರದಿ ಆಧಾರದ ಮೇಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ
ನಾಲ್ಕು ಜನ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಸ್ಥಳದಲ್ಲಿ
ಬೆಳ್ಳಿ ಗಣೇಶ ಮೂರ್ತಿ, ಲ್ಯಾಪ್ ಟಾಪ್, ಪೋನ್ ಸಿಕ್ಕಿದೆ ಎಂದರು.

ಹಲವು ಬೈಕ್ ಕೂಡ ದೊರೆತಿದ್ದು ಈ ಬಗ್ಗೆ ಸಹ ತಹಸೀಲ್ದಾರ ಕಡೆ ಮಾಹಿತಿ ಇದೆ. ಲಾಸ್ ಬಗ್ಗೆ ತಿಳಿಯುತ್ತೇವೆ ಎಂದರು.

ಹೆಚ್ಚಿನ ಪರಿಹಾರ ನೀಡುವ ಕುರಿತು ಮುಖ್ಯ ಕಾರ್ಯದರ್ಶಿ ಗೆ ಪತ್ರ ಬರೆಯಲಾಗಿದೆ. ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ದೀಪಾ ಚೋಳನ್ ವಿವರಿಸಿದರು.

ಪ್ರಕರಣದಲ್ಲಿ ಮಣ್ಣಿನ ಪರೀಕ್ಷೆ, ಕಟ್ಟಡದ ಸಾಮರ್ಥ್ಯ ಪರಿಶೀಲನೆ ನಡೆದಿದೆ. ಸಮಗ್ರ ವರದಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *