ಅಂತಾರಾಷ್ಟ್ರೀಯ

ರಫೇಲ್ ಡೀಲ್ ವಿರುದ್ದ ಮತ್ತೇ ಸಂಸತ್ ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ : ಚಳಿಗಾಲದ ಸಂಸತ್ ಅಧಿವೇಶನದಲ್ಲಿ ರಫೇಲ್ ಯುದ್ದ ವಿಮಾನ ಕುರಿತಂತೆ ಮತ್ತೇ ಸಂಸತ್ ನಲ್ಲಿ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ಇದರಿಂದಾಗಿ ಸಂಸತ್ ನಲ್ಲಿ ಭಾರೀ ಕೋಲಾಹಲ ಉಂಟಾಯಿತು.

ಹೆಚ್. ಎ ಎಲ್ ಕಂಪನಿಗೆ ನೀಡುವ ಬಿಟ್ಟು ಅನಿಲ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಕಂಪನಿಗೆ ನೀಡಿದ್ದು ಯಾಕೆ ಎಂದು ತರಾಟೆಗೆ ತೆಗೆದುಕೊಂಡರು. ಮೇಕ್ ಇನ್ನ ಇಂಡಿಯಾ ಬಗ್ಗೆ ಉದ್ದದ ಭಾಷಣ ಬಿಗಿಯುವ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನರ ಉದ್ಯೋಗ ಕಸಿದುಕೊಂಡು ಫ್ರಾನ್ಸ್ ಕಂಪನಿಗೆ ನೀಡಿದ್ದು ದೊಡ್ಡ ದುರಂತ ಎಂದು ಕಿಡಿಕಾರಿದರು.

ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಪದೇ ಪದೇ ಅನಿಲ್ ಅಂಬಾನಿ ಹೆಸರು ಪ್ರಸ್ತಾಪಿಸದಂತೆ ಸೂಚಿಸಿದರು. ಇದರಿಂದಾಗಿ ಡಬಲ್ ಎ ಎಂದು ಅನಿಲ್ ಅಂಬಾನಿ ಅವರನ್ನು ಸಂಬೋಧಿಸಿದರು.

ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಸಚಿವ ಸಂಪುಟ ಸಭೆಯಲ್ಲಿ ರಫೇಲ್ ಡೀಲ್ ಪ್ರಕರಣದ ಸಂಪೂರ್ಣ ಮಾಹಿತಿ ನನ್ನ ಬಳಿಯಿದೆ. ಫೈಲ್ ನನ್ನ ಮನೆಯಲ್ಲಿ ಬಿದ್ದಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಅದರ ಸತ್ಯಾಂಶವೇನು. ಅವರನ್ನು ಬದಲಿಸಿದ್ದೇಕೆ. ಆ ಸತ್ಯವನ್ನು ಹೊರಹಾಕಬೇಕು ಎಂದು ಪಟ್ಟು ಹಿಡಿದರು.

ಅನಿಲ್ ಅಂಬಾನಿ ಅವರಿಗೆ ಮೂವತ್ತು ಸಾವಿರ ಕೋಟಿ ಗೆ ಡೀಲ್ ನೀಡಿದ್ದು ಏಕೆ. ರಫೇಲ್ ಡೀಲ್ ಕೊಡಲು ಕಾರಣವೇನು. ಮನಮೋಹನ್ ಸಿಂಗ್ ಹಾಗೂ ಆನಂದ ಶರ್ಮಾ ಅವರು ಈ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದು, ಸಾಕಷ್ಟು ಲೋಪದೋಷಗಳಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಗೆಳೆಯನಿಗೆ ಈ ಡೀಲ್ ಕೊಡಲು ಕಾರಣವೇನು. ಉದ್ದದ ಭಾಷಣ ಬಿಗಿಯುವ ಅವರು ಸಂಸತ್ ನಲ್ಲಿ ಉತ್ತರ ಕೊಡಲು ಹಿಂಜರಿಕೆ ಏಕೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ದೇಶದ ಆಂತರಿಕ ಭದ್ರತೆ ನೆಪ ಹೇಳಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಗುಡುಗಿದರು. ಬಿಜೆಪಿ ಸಂಸದರು ರಾಹುಲ್ ಗಾಂಧಿ ಭಾಷಣಕ್ಕೆ ಅಡ್ಡಿ ಪಡಿಸುತ್ತಲೇ ಇದ್ದರು. ಇದಕ್ಕೆ ಅರುಣ ಜೇಟ್ಲಿ ಅವರು ಕೂಡ ಆಕ್ಷೇಪ ವ್ಯಕ್ತಪಡಿಸಿದರು.

526 ಕೋಟಿಯ ಯುದ್ದ ವಿಮಾನ 1600 ಕೋಟಿಗೆ ಏರಿಕೆಯಾಗಲು ಕಾರಣವೇನು. ಮೋದಿ ಸಂಸತ್ ಗೆ ಬರಲು ಹಿಂಜರಿಕೆ ಏಕೆ ಎಂದು ತರಾಟೆಗೆ ತೆಗೆದುಕೊಂಡರು.

ಅಲ್ಲದೆ. ಲೋಕಸಭಾ ಹಾಗೂ ರಾಜ್ಯಸಭೆಯ ಜಂಟಿ ಸದನ ಸಮಿತಿಗೆ ತನಿಖೆ ಗೆ ವಹಿಸಿದರೆ ಹಾಲಿಗೆ ಹಾಲು ನೀರಿಗೆ ನೀರು ಹೊರಬರಲಿದೆ. ಅವರ ಜೇಬು ತುಂಬಿಸುವ ಕೆಲಸ ಮಾಡಿದ ಅಕ್ರಮ ಭ್ರಷ್ಟಾಚಾರ ಹೊರಗೆ ಬರಲಿದೆ.

ಜಂಟಿ ಸದನ ಸಮಿತಿ ತನಿಖೆ ಆಗಲಿ, ದೇಶದ ಜನರ ಎದುರು ಸತ್ಯಾಂಶ ಹೊರಬರಲಿ. ನನ್ನ ಮೇಲೆ ಆರೋಪ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ಸಿದ್ದವಾಗಲಿ ಎಂದು ಬಹಿರಂಗವಾಗಿ ಸವಾಲ್ ಎಸೆದರು.

Please follow and like us:

Leave a Reply

Your email address will not be published. Required fields are marked *