ಆರೋಗ್ಯ

ವಿಭಿನ್ನ ಜ್ವರಗಳಿಗೆ ಮನೆ ಮದ್ದು

  • ಬೆಚ್ಚನೆಯ ಶುಂಠಿ, ಕಷಾಯದಲ್ಲಿ ಜೇನು ತುಪ್ಪ ಬೆರೆಸಿ ಸೇವಿಸಿದರೆ ಹಳೆಯ ಜ್ವರ ನಿವಾರಣೆ
  • ಶುದ್ದ ಜೇನು ತುಪ್ಪದಲ್ಲಿ ಕರಿಮೆಣಸು ಮತ್ತು ಏಲಕ್ಕಿ ಚೂರ್ಣವನ್ನು ಸೇರಿಸಿ ಸೇವಿಸುವುದರಿಂದ ಹಳೆಯ ಜ್ವರ ವಾಸಿಯಾಗುತ್ತದೆ.
  • ಹಳೆಯ ಜ್ವರದಲ್ಲಿ ಅರ್ಧ ಚಮಚ ಹುರಿದ ಜೀರಿಗೆಯ ಚೂರ್ಣದಲ್ಲಿ ಜೇನುತುಪ್ಪ ಸೇರಿಸಿ ಸೇವಿಸಬೇಕು.
  • ರೋಗಿಯ ತಲೆಯ ಮೇಲೆ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಹಾಕಿ ದೇಹಕ್ಕೆ ಜೇನುತುಪ್ಪ ಲೇಪನ ಮಾಡುವುದರಿಂದ ಉಷ್ಣಜ್ವರ ನಿಯಂತ್ರಣಕ್ಕೆ ಬರುತ್ತದೆ.
  • ಬದನೆಕಾಯಿಯನ್ನು ಬೆಂಕಿಯಲ್ಲಿ ಸುಟ್ಟು ಅದರ ನಾಲ್ಕು ಚಮಚ ರಸದಲ್ಲಿ ಜೇನುತುಪ್ಪ ಸೇರಿಸಿ ಸೇವಿಸಿದರೆ ಉಷ್ಣಜ್ವರ ದೂರವಾಗುವುದು.
  • ತುಳಸಿ ಮತ್ತು ಪುದೀನಾ ಎಲೆಗಳ ಕಷಾಯ ಸೇವಿಸುವುದರಿಂದ ನಿತ್ಯ ಬರುವ ಜ್ವರ ನಿಲ್ಲುತ್ತದೆ.
  • 12 ಗ್ರಾಂ ನಷ್ಟು ತುಳಸಿಯ ರಸವನ್ನು ನಿತ್ಯ ಸೇವಿಸುವುದರಿಂದ ನಿರಂತರವಾಗಿರುವ ಜ್ವರಾದಿಗಳು ನಿವಾರಣೆಯಾಗುತ್ತವೆ.
  • 3 ಗ್ರಾಂ ತುಳಸಿ ರಸ, 3 ಗ್ರಾಂ ಕರಿಮೆಣಸು, 6 ಗ್ರಾಂ ಕಲ್ಲು ಸಕ್ಕರೆಯನ್ನು ಸೇರಿಸಿ ಸೇವಿಸಿದರೆ ಜೀರ್ಣ ಜ್ವರ ಕಡಿಮೆಯಾಗುತ್ತದೆ.
  • ತುಳಸಿ, ಕರಿಮೆಣಸು, ಶುಂಠಿ, ಬೆಲ್ಲ ಇವುಗಳನ್ನು ಸೇರಿಸಿ ಕಷಾಯ ಸಿದ್ದ ಪಡಿಸಿ ಅದರಲ್ಲಿ ನಿಂಬೆ ರಸ ಸೇರಿಸಿ ಸೇವಿಸಿದರೆ ಸಾಮಾನ್ಯ ಜ್ವರ ನಿವಾರಣೆ
  • ರೋಗಿಗೆ ಗಾಬರಿಯ ಅನುಭವವಾಗುತ್ತಿದ್ದರೆ ತುಳಸಿಯ ಎಲೆಯ ರಸದಲ್ಲಿ ಸಕ್ಕರೆ ಸೇರಿಸಿ ಪಾನಕ ಮಾಡಿ ಸೇವಿಸಲು ಸೂಚಿಸಬೇಕು. ಗಾಬರಿಯೊಡನೆ ಹಳೆಯ ಜ್ವರ ಕೂಡ ದೂರವಾಗುತ್ತದೆ.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

Leave a Reply

Your email address will not be published. Required fields are marked *