ರಾಜ್ಯ

ಮುರುಗೇಶ ನಿರಾಣಿಗೆ ಬಿಸಿ ತಾಕಿಸಿದ ರೈತರು

ಬಾಗಲಕೋಟೆ : ನಿನ್ನೇ ಮುಧೋಳದಲ್ಲಿರುವ ಡಿಸ್ಟಲರಿ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ಮೃತಪಟ್ಟು, ಮೂರು ಜನ ಗಾಯಗೊಂಡಿದ್ದರೂ ಘಟನಾ ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರಿದ್ದ ಸಕ್ಕರೆ ಕಾರ್ಖಾನೆ ಮಾಲೀಕ ಹಾಗೂ ಹಾಲಿ ಬಿಜೆಪಿ ಶಾಸಕ ಮುರುಗೇಶ ನಿರಾಣಿ ಅವರಿಗೆ ರೈತರು ಬಿಸಿ ತಾಕಿಸಿದ್ದಾರೆ.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಸೋಮವಾರ ಕಾರ್ಖಾನೆ ಆವರಣದಲ್ಲಿ ನಡೆದಿದ್ದ ಘಟನೆ ವೀಕ್ಷಿಸಲು ಆಗಮಿಸಿದ್ದ ವೇಳೆ ಸಚಿವರ ಜೊತೆಗೆ ಮುರುಗೇಶ ನಿರಾಣಿ ಕೂಡ ಆಗಮಿಸಿದ್ದರು.

ಅವರನ್ನು ಕಂಡ ಕೂಡಲೇ ಸಚಿವರ ಎದುರೇ ರೈತರು ನಿರಾಣಿ ಅವರಿಗೆ ತರಾಟೆ ತೆಗೆದುಕೊಂಡು ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲ. ಬಡ ಜೀವಗಳ ಜೊತೆಗೆ ಚೆಲ್ಲಾಟ ಆಡ್ತಿರಾ ಎಂದು ಬಿಸಿ ತಾಕಿಸಿದರು.

ಪರಿಹಾರ ನೀಡಲಾಗಿದೆ ಎಂದು ನಿರಾಣಿ ಹೇಳುತ್ತಿದ್ದಂತೆ ಇನ್ನಷ್ಟು ಕುಪಿತಗೊಂಡ ರೈತರು ನೀವು 5 ಲಕ್ಷ ನೀಡಿದರೆ ಹೋದ ಜೀವಗಳು ಮರಳಿ ಬರುತ್ತವಾ ಎಂದು ಕಿಡಿಕಾರಿದರು.

ಆಗ ಮಧ್ಯಪ್ರವೇಶ ಮಾಡಿದ ಸಚಿವ ಶಿವಾನಂದ ಪಾಟೀಲ ಅವರು ರೈತರನ್ನು ಸಮಾಧಾನ ಪಡಿಸಿ, ತಾನೂ ಕೂಡ ವೈಯಕ್ತಿಕವಾಗಿ ಮೃತ ಕುಟುಂಬಗಳಿಗೆ ತಲಾ 2.5 ಲಕ್ಷ ರೂಪಾಯಿ ಪರಿಹಾರ ನೀಡುವ ಭರವಸೆ ನೀಡಿದರು. ಅಲ್ಲದೆ, ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸಲಾಗುವುದು. ಇನ್ನೂ ಮುಂದೆ ಡಿಸ್ಟಲರಿ ಲೋಪವಾಗದಂತೆ ನೋಡಿಕೊಳ್ಳಲು ಮುರುಗೇಶ ನಿರಾಣಿ ಅವರಿಗೆ ಸೂಚಿಸಲಾಗಿದೆ ಎಂದು ಸಮಜಾಯಿಸಿ ನೀಡಿದರು.

Please follow and like us:

Leave a Reply

Your email address will not be published. Required fields are marked *