ಆಧ್ಯಾತ್ಮ

ದೇವರ ಕೋಣೆಯಲ್ಲಿ ವಾಸ್ತು

  • ದೇವರ ಕೋಣೆಯಲ್ಲಿ ವಿಗ್ರಹ ಮತ್ತು ಪೋಟೋಗಳು ಕಡಿಮೆ ಇದ್ದಷ್ಟು ಒಳ್ಳೆಯದು.
  • ಕೆಲವರೂ ದೇವರ ಮನೆಯ ತುಂಬಾ ಪೋಟೋಗಳು ಹಾಗೂ ಮೂರ್ತಿ ಇಟ್ಟಿರುತ್ತಾರೆ. ಅದು ಒಳ್ಳೆಯದಲ್ಲ.
  • ಒಂದೇ ದೇವರ ಪೋಟೋ ಹಾಗೂ ಮೂರ್ತಿಗಳನ್ನು ಇಟ್ಟರೆ ಒಳ್ಳೆಯದು.
  • ಪ್ರತಿಯೊಂದು ದೇವರು ಬೇರೆ ಬೇರೆ ತರಹದ ಶಕ್ತಿ, ಸ್ವರೂಪ. ಅದು ಯಾವುದೇ ತರಹದ ರೂಪ ಶಕ್ತಿ ಹೊಂದಿದ್ದರೂ ವ್ಯಕ್ತಿಗತವಾಗಿ ಎಲ್ಲ ದೇವರು ಉಪಯುಕ್ತವೇ.
  • ಎಲ್ಲ ಮೂರ್ತಿಗಳನ್ನು ಒಂದೇ ಜಾಗದಲ್ಲಿ ಇಟ್ಟರೆ ಬೇರೆ ಬೇರೆ ಶಕ್ತಿ ಒಟ್ಟುಗೂಡಿ ಅದರ ಪರಿಣಾಮ ಕೆಲವೊಮ್ಮೆ ಮನೆಯವರಿಗೆ ಸಂಕಟ ತರಬಹುದು.
  • ಬಲಗಡೆ ಗಂಡು ದೇವರಗಳನ್ನು ಹಾಗೂ ಎಡಗಡೆ ಹೆಣ್ಣು ದೇವರನ್ನು ಇಟ್ಟು ಮಧ್ಯದಲ್ಲಿ ಗಣೇಶ ದೇವರ ಪೋಟೋ ಅಥವಾ ಮೂರ್ತಿಯನ್ನು ಜೋಡಿಸುವಿಕೆಯಿಂದ ಒಳ್ಳೆಯ ಪರಿಣಾಮ ಉಂಟಾಗುತ್ತದೆ.
  • ಮನೆಯ ದೇವರು ಅಥವಾ ಕುಲ ದೇವರ ಒಂದು ಪೋಟೋ ಅಥವಾ ವಿಗ್ರಹ ದೇವರ ಮನೆಯಲ್ಲಿ ಇಡುವುದು ಒಳಿತು.
  • ಮನೆ ದೇವರ ಹೆಸರನ್ನು ಪ್ರತಿ ದಿನ ಮುಂಜಾನೆ ಮತ್ತು ಸಂಜೆ 15 ಸಲ ಪಠಣ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಕಂಪನ ಇರುತ್ತದೆ.

ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು,

Please follow and like us:

Leave a Reply

Your email address will not be published. Required fields are marked *