ರಾಜ್ಯ

ಅತಿಥಿ ಉಪನ್ಯಾಸಕರ ವಿವಾಹ ವಿಚ್ಛೇದನವೇ ಹೆಚ್ಚು ….!

ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಗುರುವಾರ ವಿಧಾನ ಪರಿಷತ್ ನಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಿ ಗಂಭೀರ ಚರ್ಚೆ ನಡೆಯಿತು.

ಅತಿಥಿ ಉಪನ್ಯಾಸಕರು ವಿವಾಹ ವಿಚ್ಛೇದನಕ್ಕೆ ಹೆಚ್ಚಾಗಿ ಒಳಗಾಗುತ್ತಿದ್ದಾರೆ ಎಂದು ಪರಿಷತ್ ಸದಸ್ಯರಾದ ಬೋಜೆಗೌಡ, ಹಣಮಂತ್ ರುದ್ರಪ್ಪ ಆಪಾದಿಸಿದರು.

ಅವರು ಸರಕಾರಿ ನೌಕರರು ಅಂತ ತಿಳಿದು ಮದುವೆಯಾಗುತ್ತಾರೆ. ಆನಂತರ ಅವರ ಸಂಬಳ, ಪರಿಸ್ಥಿತಿ ಅರಿತು ಅನೇಕರು ವಿವಾಹ ವಿಚ್ಛೇದನ ನೀಡುತ್ತಿದ್ದಾರೆ. ಹೀಗಾಗಿ ಅವರ ಬದುಕು ಯಾತನಾಮಯವಾಗಿದೆ ಎಂದು ದೂರಿದರು.

ಅವರಿಗೆ ಕನಿಷ್ಟ ವೇತನ 40 ಸಾವಿರ ರೂ ಸಂಬಳ ನೀಡಬೇಕು, ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಕರಾತ್ಮಕ ಸ್ಪಂದಿಸಿದ ಉನ್ನತ ಶಿಕ್ಷಣ ಜಿ.ಟಿ. ದೇವೇಗೌಡ, ರಾಜ್ಯದ 12,400 ಅತಿಥಿ ಉಪನ್ಯಾಸಕ ಹಿತ ಕಾಯ್ತಿವಿ. ಅವರಿಗೆ ಅಗತ್ಯ ಸೇವಾ ಭದ್ರತೆ, ಸೌಲಭ್ಯ ಒದಗಿಸಲು ಸರಕಾರ ಬದ್ದವಾಗಿದೆ ಎಂದು ಸದನಕ್ಕೆ ಭರವಸೆ ನೀಡಿದರು.

ಇದೇ ವೇಳೆ ಅತಿಥಿ ಉಪನ್ಯಾಸಕರು ಗುರುವಾರ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದು ವಿಶೇಷವಾಗಿದೆ.

Please follow and like us:

Leave a Reply

Your email address will not be published. Required fields are marked *