ಆರೋಗ್ಯ

ತಲೆ ನೋವಿಗೆ ಮನೆ ಮದ್ದು

  • ದಾಳಿಂಬೆ ಗಿಡದ ಎಲೆ ಹಾಗೂ ತುಳಸಿ ಎಲೆ ಎರಡನ್ನು ಸೇರಿಸಿ ಅರೆದು ಹಣೆಗೆ ಲೇಪಿಸಬೇಕು.
  • ನಿಂಬೆ ಹೊಳಿನ ಮೇಲೆ ಉಪ್ಪನ್ನು ಉದುರಿಸಿ ನೆಕ್ಕುತ್ತಾ ನಿಧಾನವಾಗಿ ಸೇವಿಸಬೇಕು.
  • ಪಪ್ಪಾಯಿ ಕಾಯಿಯ ಹಾಲಿನಲ್ಲಿ ಶುಂಠಿಯನ್ನು ತೇಯ್ದು ಹಣೆಗೆ ಲೇಪಿಸಬೇಕು.
  • ರಾತ್ರಿ ವೇಳೆ ಮಲಗುವಾಗ ಪಪ್ಪಾಯಿ ಹಣ್ಣಿನ ರಸವನ್ನು ಬಿಸಿ ಮಾಡಿ ಸೇವಿಸಬೇಕು.
  • ಶುಂಠಿ ಹಾಗೂ ಇಂಗು ಎರಡನ್ನು ನೀರಿನಲ್ಲಿ ತೇಯ್ದು ಹಣೆಗೆ ಲೇಪಿಸಬೇಕು.
  • ತುಳಸಿಯ ರಸದ ಕೆಲವು ಹನಿಗಳನ್ನು ಮೂಗಿನಲ್ಲಿ ಬಿಡಬೇಕು. ಗಾಗೂ ತಲೆಯ ಮೇಲೆ ತುಳಸಿ ಎಲೆಯ ರಸವನ್ನು ಲೇಪಿಸಬೇಕು.
  • ನಿಂಬೆಯ ರಸ ಹಸಿ ಶುಂಠಿ ರಸ ಎರಡನ್ನು ಸೇರಿಸಿ ಹಣೆಗೆ ಲೇಪಿಸಬೇಕು.
  • ಬೆಳ್ಳುಳ್ಳಿ ಅರೆದು ಅದರ ರಸವನ್ನು ಹಣೆಗೆ ಲೇಪಿಸಬೇಕು.
  • ಹುಣಸೆ ಹಣ್ಣನ್ನು ಸ್ವಲ್ಪ ಸಮಯದ ವರೆಗೆ ತುಟ್ಟಿಯ ಒಳ‍ಗೆ ಇಟ್ಟುಕೊಳ್ಳಬೇಕು. ನಿಧಾನವಾಗಿ ರಸವನ್ನು ನುಂಗಬೇಕು. ಇದರಿಂದ ತಲೆನೋವು ಕಡಿಮೆಯಾಗುವುದು.
  • ಅರಳಿ ವೃಕ್ಷದ ಎಲೆಯ ಮೇಲೆ ಶುದ್ದು ತುಪ್ಪ ಲೇಪಿಸಿ ಸ್ವಲ್ಪ ಬಿಸಿ ಮಾಡಿ ಹಣೆಯ ಮೇಲಿರಿಸಿ ಪಟ್ಟಿ ಹಾಕಬೇಕು.
  • ಹಸುವಿನ ಶುದ್ದ ತುಪ್ಪವನ್ನು (ದೇಸಿ ಹಸು) ಕಣ ತಲೆ ಹಾಗೂ ಅಂಗಾಲುಗಳಿಗೆ ಲೇಪಿಸಬೇಕು.
  • ಎರಡು ಚಮಚ ತುಳಸಿ ರಸ ಎರಡು ಚಮಚ ನಿಂಬೆರಸ ಇವರೆಡನ್ನು ಸೇರಿಸಿ ಸೇವಿಸಬೇಕು.
  • ನೇರಳೆ ಹಣ್ಣಿನ ಬೀಜವನ್ನು ನೀರಿನಲ್ಲಿ ತೇಯ್ದು ಹಣೆಗೆ ಲೇಪಿಸಬೇಕು.

ಮಾಹಿತಿ PRAJAKIRAN.COM : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

Leave a Reply

Your email address will not be published. Required fields are marked *