- ಆಲದ ಮರದ ಹಾಲನ್ನು ಕಂಠಮಾಲೆಯ ಮೇಲೆ ಲೇಪಿಸುವುದರಿಂದ ಅದು ಬೇಗ ವಾಸಿಯಾಗುವುದು.
- ದತ್ತೂರಿ ಎಲೆಗಳನ್ನು ಅರೆದು ಲೇಪಿಸುವುದರಿಂದ ಕಂಠ ಮಾಲೆ ನಿವಾರಣೆ ಆಗುವುದು.
- ಅರಳಿಮರದ ಬೇರನ್ನು ತೇಯ್ದು ಆ ಗಂಧವನ್ನು ಲೇಪಿಸಿದರೆ ಕಂಠ ಮಾಲೆಯೂ ನಿವಾರಣೆಯಾಗುವುದು.
- ಬ್ರಹ್ಮದಂಡಿಯೂ ಬೇರನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಲೇಪಿಸುವುದರಿಂದ ಕಂಠಮಾಲೆ ಗುಣವಾಗುವುದು.
- ಜೇಷ್ಠಮಧುವಿನ ಚೂರ್ಣವನ್ನು ಹಾಲಿಗೆ ಬೇರಿಸಿ ತುಪ್ಪ ಸೇರಿಸಿ ಲೇಪಿಸುವುದರಿಂದ ಧ್ವನಿಯ ದೋಷಗಳು ಬೇಗ ನಿವಾರಣೆಯಾಗುತ್ತದೆ.
- ಕಾಳು ಮೆಣಸಿನ ಚೂರ್ಣ, ಸಕ್ಕರೆ ಬೆರೆಸಿ ಚೂರ್ಣ ಮಾಡಿ ಸೇವಿಸಿ ನಂತರ ಹಾಲು ಕುಡಿದರೆ ಗಂಟಲು ಕಟ್ಟಿರುವುದು ಕಡಿಮೆಯಾಗುವುದು. ಸ್ವರವು ಸರಿಯಾಗುವುದು.
- ಬಜೆಯ ಚೂರ್ಣವನ್ನು ಜೇನಿನೊಡನೆ ಅರೆದು ಸೇವಿಸುವುದರಿಂದ ಸ್ವರಭಂಗವು ನಿವಾರಣೆಯಾಗುವುದು.
- ಶುಂಠಿಯನ್ನು ಕಲ್ಲು ಸಕ್ಕರೆಯೊಡನೆ ಅರೆದು ಚಪ್ಪರಿಸುತ್ತಿದ್ದರೆ ಕಂಠವು ಶುದ್ದವಾಗುವುದು. ಸ್ವರವು ಸರಿಯಾಗುವುದು.
- ಬ್ರಾಹ್ಮಿ ಎಲೆಗಳ ರಸವನ್ನು ಸೇವಿಸುವುದರಿಂದ ಕಂಠದ ದೋಷಗಳು ನಿವಾರಣೆಯಾಗುವುವು.
- ಉತ್ತರಣಿಯ ಎಲೆಗಳನ್ನು ಸೇವಿಸುವುದರಿಂದ ಸ್ವರವು ಮಧುರವಾಗುವುದು.
- ತ್ರಿಫಲಾ ಚೂರ್ಣವನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಅದರಿಂದ ಬಾಯಿ ಮುಕ್ಕಳಿಸುವುದರಿಂದ ಟಾನ್ಸಿಲ್ ವಾಸಿಯಾಗುವುದು.
ಮಾಹಿತಿ PRAJAKIRAN.COM : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು