ರಾಜ್ಯ

ಮಾನ ಇಲ್ಲದವರಿಗೆ ಮಾನನಷ್ಟ ಮೊಕದ್ದಮೆ ಯಾಕೆ

ಮೊಳಕಾಲ್ಮೂರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಮಾನ ಇಲ್ಲ. ಹೀಗಾಗಿ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ಯಾಕೆ ಎಂದು ಗಣಿ ಲೂಟಿ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ಧನ ರಡ್ಡಿ ಪ್ರಶ್ನೆ ಮಾಡಿದ್ದಾರೆ.

ಅವರು ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ. ನನ್ನ ವಿರುದ್ದ ಒಂದು ಲಕ್ಷ ಕೋಟಿ ಗಣಿ ಆರೋಪ ಮಾಡಿರುವ ಕಾಂಗ್ರೆಸ್ ಸರಕಾರ ನನ್ನಿಂದ ಒಂದು ಕೋಟಿನೂ ವಸೂಲಿ ಮಾಡಲು ಆಗಿಲ್ಲ ಎಂದು ಹರಿಹಾಯ್ದರು.

ಮಾನನಷ್ಟ ಮೊಕದ್ದಮೆ ಹೂಡಬೇಕು ಅಂತ ಮಾಡಿದ್ದೇ. ಆದರೆ ಅವರಿಗೆ ಮಾನನೇ ಇಲ್ಲದ್ದರಿಂದ ಕೇಸ್ ಯಾಕೆ ಎಂದು ಕಿಡಿ ಕಾರಿದ ಜನಾರ್ಧನ ರಡ್ಡಿ ಹಾಗಿದ್ದರೆ ನಿಮ್ಮನ್ನು ಈ ರಾಜ್ಯದ ಜನರು ಅಯೋಗ್ಯ ಅಂತ ಕರೆಯಬೇಕೋ ಅಥವಾ ಏನಂತ ಕರೆಯಬೇಕು ಎಂದು ಗುಡುಗಿದ್ದಾರೆ.

ಲೂಟಿ ಮಾಡಿನೀ ಅಂತ ಹೇಳಿ ನನಗೆ ನಾಲ್ಕೂವರೆ ವರ್ಷಗಳ ಕಾಲ ಜೈಲಿಗೆ ಕಳುಹಿಸಿದ್ದೀರಿಲ್ಲ. ನನ್ನ ಅಮೂಲ್ಯ ಸಮಯವನ್ನು ಹಾಳು ಮಾಡಿರಲ್ಲ. ಇದರಿಂದ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಫೇಸ್ ಬುಕ್ ಟ್ವೀಟರ್ ನಲ್ಲಿ ಸಿದ್ದರಾಮಯ್ಯ 25 ಲಕ್ಷ ಕೋಟಿ ಲೂಟಿ ಅಂತ ಬರೆದುಕೊಂಡಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 35 ಲಕ್ಷ ಕೋಟಿ ಲೂಟಿ ಅಂತ ಬರೆದಿದ್ದರು. ನನಗೆ ನಾಲ್ಕೂವರೆ ವರ್ಷ ಜೈಲಿಗೆ ಕಳುಹಿಸಿ, ನನ್ನ ಹೆಸರಿನಲ್ಲಿ ಗಣಿ ಲೂಟಿ ಮಾಡಿದ ಶಾಸಕ ಆನಂದ್ ಸಿಂಗ್ ಹಾಗೂ ನಾಗೇಂದ್ರ ಅವರನ್ನು ನಿಮ್ಮ ಎಡಬಲದಲ್ಲಿಯೇ ಇಟ್ಟುಕೊಂಡಿದ್ದರಲ್ಲ. ನಿಮಗೆ ನಾಚಿಕೆಯಾಗುವುದಿಲ್ಲವೇ. ನನ್ನ ವಿರುದ್ದ ಆರೋಪ ಮಾಡಲು ಎಂದು ಸವಾಲ್ ಹಾಕಿದ್ದಾರೆ.

ಅವರನ್ನು ಅಕ್ಕಪಕ್ಕದಲ್ಲಿ ಕೂಡಿಸಿಕೊಂಡು ಮಾತನಾಡುವ ನಿಮಗೇನಾದರೂ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ ಗಾಲಿ ಜನಾರ್ಧನ ರಡ್ಡಿ, ನಾನು ಈ ಹಿಂದೆ ಬೆಂಗಳೂರು ಮನೆ ಸುತ್ತ ಭದ್ರತೆ ಕೇಳಿದ್ದೆ. ಆದರೆ ಸಿದ್ದರಾಮಯ್ಯ ಸರಕಾರ ರಕ್ಷಣೆ ಕೊಟ್ಟಿಲ್ಲ ಎಂದು ದೂರಿದರು.

ಪೊಲೀಸ್ ಅಧಿಕಾರಿಗಳೇ ನನಗೆ ಎಚ್ಚರದಿಂದ ಇರಲು ಹೇಳಿದ್ದರು. ಅಯೋಮಯ ಆತಂಕದ ವಾತವರಣ ನಿರ್ಮಾಣವಾಗಿದೆ ಸಮ್ಮೀಶ್ರ ಸರಕಾರ ನನಗೆ ತೊಂದರೆ ಮಾಡುವ ದುರುದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದರು.

Please follow and like us:

Leave a Reply

Your email address will not be published. Required fields are marked *