ರಾಜ್ಯ

ಕುಮಾರಸ್ವಾಮಿ ಹೇಳಿಕೆಗೆ ಯಡಿಯೂರಪ್ಪ ತಿರುಗೇಟು

ಬಾಗಲಕೋಟೆ : ಶಿವಮೊಗ್ಗದಲ್ಲಿ ನಾವು ಗೆದ್ದರೆ ಮಾತ್ರ ಸರಕಾರ ಉಳಿಯುತ್ತದೆ ಎಂದು ಹೇಳಿರುವ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಅವರು ಸೋಮವಾರ ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಗಿದ್ದರೆ ಶಿವಮೊಗ್ಗದಲ್ಲಿ ನಾವೇ ಗೆಲ್ತೀವಿ ಬಿಡಿ, ಸರಕಾರ ಉಳಿಯಲ್ಲ ಎಂದು ವ್ಯಂಗ್ಯ ವಾಡಿದ್ದಾರೆ.
ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ತಲೆ ತಿರುಕ ಮಾತನಾಡುತ್ತಿದ್ದಾನೆ. ನನಗೆ ಟೋಪಿ ಹಾಕಿದವರ ಜೊತೆಗೆ ನಾನೇಕೆ ಹೋಗಲಿ. ಅವರ ಸಹಾಯದಿಂದ ಈ ಹಿಂದೆ 20 ತಿಂಗಳು ಟೋಪಿ ಹಾಕಿಸಿಕೊಂಡು ಮರೆತಿಲ್ಲ. ಈ ಜನ್ಮದಲ್ಲಿ ಮತ್ತೇ ಅವರ ಕೈ ಜೋಡಿಸುವ ಪ್ರಶ್ನೇಯೇ ಇಲ್ಲ ಎಂದು ಯಡಿಯೂರಪ್ಪ ಗುಡುಗಿದ್ದಾರೆ.

Please follow and like us:

Leave a Reply

Your email address will not be published. Required fields are marked *