• ಜೇನುತುಪ್ಪವನ್ನು ಮೊಸರಿನಲ್ಲಿ ಸೇರಿಸಿ ಐದರಿಂದ ಆರು ದಿನದವರೆಗೆ ಬೆಳಗ್ಗೆ ಸಾಯಂಕಾಲ ನಿಯಮಿತವಾಗಿ ಸೇವಿಸುತ್ತಾ ಬಂದರೆ ಊದರ ಜಂತುಗಳು ದೂರವಾಗುವುದು.
• ಜೇನುತುಪ್ಪದಲ್ಲಿ ಬೆಳ್ಳುಳ್ಳಿ ರಸವನ್ನು ಸೇರಿಸಿ ಸೇವಿಸುವುದರಿಂದ ಜಂತುಹುಳಗಳು ದೂರವಾಗುವುದು
• ಎರಡು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚ ಹುರಿದ ಅರಸಿಣ ಪುಡಿ ಸೇರಿಸಿ ಸೇವಿಸುವುದರಿಂದ ಜಂತು ಹುಳ ಶಮನ
• ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಅರ್ಧ ಲಿಂಬೆ ಹಣ್ಣಿನ ರಸವನ್ನು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.
• ಜೇನುತುಪ್ಪದಲ್ಲಿ ಹತ್ತು ಕರಿಮೆಣಸು ಮತ್ತು 25 ಗ್ರಾಂ ಪುದಿನ ಚೂರ್ಣ ಸೇರಿಸಿ ಸೇವಿಸುವುದರಿಂದ ಜಂತು ಹುಳ ಕಡಿಮೆಯಾಗುವುದು.
• ಪಪ್ಪಾಯಿ ಹಣ್ಣಿನ ಬೀಜದ ಕಷಾಯದಲ್ಲಿ ಜೇನುತುಪ್ಪ ಸೇರಿಸಿ ನಿಯಮಿತವಾಗಿ ಸೇವಿಸುವುದರಿಂದ ಜಂತು ಹುಳು ಶಮನ
• 10 ಎಂಎಲ್ ಜೇನುತುಪ್ಪದಲ್ಲಿ ಔಡಲ ಎಲೆಯ ರಸ 5 ಎಂ ಎಲ್ ಸೇರಿಸಿ ದಿನದಲ್ಲಿ 3 ಬಾರಿ ಸೇವಿಸಿದರೆ ಜಂತುಹುಳ ಶಮನ
• ಜೇನುತುಪ್ಪದಲ್ಲಿ ಅರ್ಧ ಚಮಚ ವಾಯವಿಳಂಗದ ಚೂರ್ಣವನ್ನು ಸೇರಿಸಿ ರಾತ್ರಿ ಮಲಗುವ ಅರ್ಧಗಂಟೆ ಮುಂಚೆ ಸೇವಿಸಬೇಕು
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು