- ಬಾಳೆ ಗಿಡ ಬೇರಿನ ರಸವನ್ನು ಖಾಲಿ ಹೊಟ್ಟೆಗೆ ಐದರಿಂದ ಏಳು ದಿನ ಎರಡೂವರೆ ಚಮಚ ದಿನ ಸೇವಿಸುವುದರಿಂದ ಜಂತು ಹುಳು ನಿವಾರಣೆ
- ಪಪ್ಪಾಯಿ ಗಿಡದ ಬೇರಿನ ಕಷಾಯ ಸೇವಿಸಿದರೆ ಹೊಟ್ಟೆ ಯಲ್ಲಿನ ಹುಳು ನಾಶ
- ಪಪ್ಪಾಯಿ ಹಣ್ಣಿನ ಬೀಜಗಳನ್ನು ಒಣಗಿಸಿ ಮಾಡಿದ ಚೂರ್ಣವನ್ನು ಸೇವಿಸಿದರೂ ಜಂತು ಹುಳಗಳು ನಿವಾರಣೆ
- ಸೀತಾಫಲ ಚಿಗುರು ಎಲೆ ಕಷಾಯ ಸೇವಿಸುವುದರಿಂದ ಜಂತುಹುಳ ನಾಶವಾಗುತ್ತದೆ.
- ಬೆಳ್ಳುಳ್ಳಿ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಇರುವ ಜಂತು ಹುಳ ಹೊರ ಬೀಳುತ್ತವೆ.
- ಮಾವಿನ ಹಣ್ಣಿನ ಬೀಜದ ಚೂರ್ಣವನ್ನು ಕಾಲು ಚಮಚದಷ್ಟು ನಿತ್ಯ ರಾತ್ರಿ ನಾಲ್ಕು ದಿನ ಸೇವಿಸಬೇಕು. ಐದನೇ ರಾತ್ರಿ ಒಂದು ಚಮಚ ಹರಳೆಣ್ಣೆಯನ್ನು ಹಾಲಿಗೆ ಹಾಕಿ ಸೇವಿಸಬೇಕು. ಇದರಿಂದ ಜಂತು ಹುಳಗಳು ಬಿದ್ದು ಹೋಗುತ್ತವೆ.
- ಪ್ರತಿ ದಿನ ಬೆಳಗ್ಗೆ ಒಂದು ಲಿಂಬೆರಸದಲ್ಲಿ ಹುರಿದ ಇಂಗನ್ನು ಮಿಶ್ರಮಾಡಿ ಕುಡಿಯಬೇಕು. ಹೀಗೆ ಒಂದು ವಾರ 8ನೇ ದಿನ ಒಂದು ಚಮಚ ಹರಳಣ್ಣೆ ಸೇವಿಸಬೇಕು. ಜಂತು ಹುಳ ಹೊರಹೋಗುತ್ತದೆ.
- ಹಾಗಲಕಾಯಿ ಸೊಪ್ಪಿನ ರಸಕ್ಕೆ ತೆಂಗಿನಕಾಯಿ ಹಾಲು ಸಮಪ್ರಮಾಣ ಸೇರಿಸಿ ಕುದಿಸಿ ಸೇವಿಸುತ್ತಿದ್ದರೆ ಕ್ರೀಮಿಗಳು ಬೇದಿಯಲ್ಲಿ ಹೋಗುವುದು (ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ )
- ಲಿಂಬೆಯ ಎಲೆಯ ರಸ 50 ಗ್ರಾಂ ಜೇನುತುಪ್ಪ 25 ಗ್ರಾಂ ಸೇರಿಸಿ ನಿತ್ಯ ಬೆಳಗ್ಗೆ ಕುಡಿಯುವುದರಿಂದ 7 ದಿನ 8ನೇ ದಿನ ವಿರೇಚನೆಗೆ ಕೊಡುವುದು.
- 6 ಗ್ರಾಂ ಶುಂಠಿ, 6 ಗ್ರಾಂ ತುಳಸಿ ಬೇರನ್ನು ಬಿಸಿನೀರಿನಲ್ಲಿ ಅರೆದು ಪ್ರತಿ ದಿನ 4 ರಿಂದ 6 ದಿನ ಸೇವಿಸಿ ಕೊನೆಯಲ್ಲಿ ವಿರೇಚನೆಕ್ಕೆ ತೆಗೆದುಕೊಳ್ಳವುದು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು