- ಜಾಲಿಯ ಚಿಗುರು ಮತ್ತು ಅಶ್ವಥ ಜಿಗರನ್ನು ಸಮಪ್ರಮಾಣದಲ್ಲಿ ನುಣ್ಣಗೆ ಅರೆದು ಗುದದ್ವಾರ ಮೊಳಕೆಗೆ ಲೇಪಿಸಬೇಕು. ಒಂದು ವಾರದಿಂದ 2 ವಾರ ತನಕ ಇದರಿಂದ ಮೂಲವ್ಯಾಧಿಯ ಮೊಳಕೆ ನಿವಾರಣೆಯಾಗುವುದು,
- ನುಗ್ಗೆಯ ಎಲೆ ಮತ್ತು ಎಕ್ಕದ ಎಲೆಗಳನ್ನು ಸಮಭಾಗ ಅರೆದು ಮೊಳಕೆಗೆ ಲೇಪಿಸುತ್ತಿದ್ದರೆ ಮೂಲವ್ಯಾಧಿಯ ಮೊಳಕೆ ನಿವಾರಣೆ.
- ಮೂಲಂಗಿ ಎಲೆ ಮತ್ತು ನುಗ್ಗೆ ಎಲೆ ಸಮಭಾಗ ಅರೆದು ಲೇಪಿಸುವುದರಿಂದ ಮೊಳಕೆ ನಿವಾರಣೆ
- ಮೂರು ಗ್ರಾಂ ನುಗ್ಗೆ ಎಲೆ, ಮೂರು ಗ್ರಾಂ ಬೇವಿನ ಬೀಜ, ತುತ್ಯದ ಅರಳು ಒಂದು ಚಿಟಿಕೆ ಇವು ಎಲ್ಲಾವನ್ನು ಅರೆದು ಲೇಪಿಸುವುದರಿಂದ ಮೂಲವ್ಯಾಧಿ ಮೊಳಕೆ ಪರಿಹಾರ
- ಸೀಗೆ ಬೀಜ ಚೂರ್ಣ, ತುಳಸಿ ಸೊಪ್ಪಿನ ರಸ ಮತ್ತು ಬೆಣ್ಣೆ ಚೆನ್ನಾಗಿ ಮಿಶ್ರಣ ಮಾಡಿ ನಾಭಿ ಮತ್ತು ಗುದದ್ವಾರಕ್ಕೆ ಲೇಪಿಸಿ ಒಣಗಿದ ನಂತರ ಅತ್ತಿ, ಆಲ, ಅಶ್ವಥ, ಮಾವು ಮರದ ತೊಗಟೆ ಕಷಾಯದಲ್ಲಿ ನಾಭಿಯು ಗುದವು ಮುಳಗುವಂತೆ ಕುಳಿತುಕೊಳ್ಳುವುದರಿಂದ ಮೂಲವ್ಯಾಧಿ, ಮೊಳಕೆ, ಹುಣ್ಣು, ಊತ, ಬಾವು, ಊರಿಗಳೆಲ್ಲಾ ಪರಿಹಾರ
- ಆಲದ ಎಲೆಯನ್ನು ಸುಟ್ಟು ಕರಕು ಮಾಡಿ ಎಳ್ಳೆಣ್ಣೆಯಲ್ಲಿ ಅರೆದು ನಿತ್ಯ ಲೇಪಿಸುವುದರಿಂದ ಮೂಲವ್ಯಾಧಿ ಮೊಳಕೆಗೆ ನಿವಾರಣೆಯಾಗುವುದು
- ಹಿರೇಕಾಯಿ, ಅರಶಿಣ ನುಣ್ಣಗೆ ಅರೆದು ಮೂಲವ್ಯಾಧಿಯ ಮೊಳಕೆಗೆ ಲೇಪಿಸಿದರೆ 2 ವಾರದಲ್ಲಿ ಪರಿಹಾರ
- ಈರುಳ್ಳಿಯನ್ನು ನುಣ್ಣಗೆ ಜಜ್ಜಿ ತುಪ್ಪ ಹಾಕಿ ಹುರಿದು ಸ್ವಚ್ಛ ಭಂಗಿ ಸೊಪ್ಪಿನ ಹುಡಿಯನ್ನು ಹಾಕಿ ಅರೆದು ವಿಲ್ಯೆದೆಲೆಯಲ್ಲಿ ಇಟ್ಟು ಮೊಳಕೆಗೆ ಕಟ್ಟುವುದರಿಂದ ನೋವು ಪರಿಹಾರ. ಮೊಳಕೆ ಗುಣವಾಗುತ್ತದೆ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು
