ರಾಜ್ಯ

ಬಿಜೆಪಿಯ ಕೆಲಸ ಅಸಹ್ಯ ಮೂಡಿಸಿದೆ ಎಂದ ದೊಡ್ಡಗೌಡರು

ಬೆಂಗಳೂರು : ಸಮ್ಮೀಶ್ರ ಸರಕಾರದ ಅಸ್ಥಿರಕ್ಕೆ ಪ್ರಯತ್ನ ಮಾಡುತ್ತಿರುವ ಬಿಜೆಪಿಯ ಕೆಲಸ ಅಸಹ್ಯ ಮೂಡಿಸಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬಿಜೆಪಿ ನಾಯಕರ ವಿರುದ್ದ ಹರಿಹಾಯ್ದಿದ್ದಾರೆ.

ಅವರು ಮಂಗಳವಾರ ಬೆಂಗಳೂರಿನ ಪದ್ಮನಾಭನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮಾಧ್ಯಮಗಳಲ್ಲಿ ರಾಜಕೀಯ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ಯಾರಿಗೂ ಏನೂ ಆಗಲ್ಲ. ಬರೀ ಭ್ರಮೆ ಎಂದು ಕಟಕಿಯಾಡಿದರು.

ನಾನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಗ್ಗೆ ಮಾತನಾಡಲ್ಲ. ಆದರೆ ಉದ್ದದ ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿಗೆ ಏನಾಗಿದೆ ಎಂದು ಕಿಡಿಕಾರಿದರು.

ಒಬ್ಬೋಬ್ಬ ಶಾಸಕರಿಗೆ 60 ಕೋಟಿ 70 ಕೋಟಿ ಆಮಿಷ ಒಡ್ಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಇದು ನೀಚತನದ ಪರಮಾವಧಿ ಎಂದು ಟೀಕಿಸಿರುವ ಅವರು ದೈವ ಇಚ್ಛೆ ಇರುವ ವರೆಗೆ ಕುಮಾರಸ್ವಾಮಿ ಸರಕಾರ ಇರುತ್ತದೆ ಎಂದು ತಮ್ಮ ನಿರಾಶೆ ಭಾವನೆ ಹೊರ ಹಾಕಿದರು.

ಬಿಜೆಪಿಯವರಿಗೆ ಹಾಗೂ ನಿಮಗೆ ಭ್ರಮೆ ನಡಿರಿ ಎಂದು ಕುಟುಕುತ್ತಲೇ ಆಪರೇಶನ ಕಮಲದ ವಿರುದ್ದ ವಾಗ್ದಾಳಿ ನಡೆಸಿದ ದೊಡ್ಡಗೌಡರು ಸಮ್ಮೀಶ್ರ ಸರಕಾರದ ಸ್ಥಿತಿ ಕಂಡು ಮನಸ್ಸಿನಲ್ಲಿಯೇ ನಲಗುತ್ತಿರುವುದಂತೂ ಅವರ ಮಾತಿನ ದಾಟಿಯಲ್ಲಿಯೇ ಕಂಡುಬರುತ್ತಿರುವುದಂತೂ ಸತ್ಯ.

Please follow and like us:

Leave a Reply

Your email address will not be published. Required fields are marked *