ರಾಜ್ಯ

ದೇವಸ್ಥಾನಗಳ ಭೇಟಿಗೆ ತೆರಳಿದ ಅತೃಪ್ತ ಶಾಸಕ …..!

ಕೊಲ್ಲಾಪುರ : ಕಾಂಗ್ರೆಸ್ ಪಾಳೇಯದಿಂದ ಜಿಗಿದು ಬಿಜೆಪಿ ಪಾಳೇಯದಲ್ಲಿ ಗುರುತಿಸಿಕೊಂಡಿರುವ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಅವರು ದೇವಸ್ಥಾನಗಳ ಭೇಟಿಗೆ ತೆರಳಿರುವುದಾಗಿ ಬಹಿರಂಗ ಪಡಿಸಿದ್ದಾರೆ.

ಸಂಕ್ರಾಂತಿ ಹಬ್ಬದ ನಿಮಿತ್ಯ ಕುಟುಂಬ ಸಮೇತ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನಕ್ಕೆ ಆಗಮಿಸಿದ್ದೇನೆ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿರುವ ಅವರು ಇನ್ನೇರಡು ದಿನ ದೇವಾಲಯದ ದರ್ಶನದಲ್ಲಿ ಇರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನದ ದರ್ಶನ ಮುಗಿದ ಬಳಿಕ ಮುಂಬೈ ಪ್ರಯಾಣ ಬೆಳೆಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಇದೇ ವೇಳೆ ಕಾಂಗ್ರೆಸ್ ಪಕ್ಷದ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಬಿಜೆಪಿಗೆ ಹೋದರೆ ಏನಾಗುತ್ತದೆ. ಹೋಗದಿದ್ದರೆ ಏನಾಗುತ್ತದೆ ಎಂಬ ಗೊಂದಲದಲ್ಲಿದ್ದಾರೆ ಎಂದು ತಿಳಿದುಬಂದಿದ್ದಾರೆ.

ಮುಂಬೈನತ್ತ ಪ್ರಯಾಣ ಬೆಳೆಸುವ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟ ಚಿತ್ರಣ ನೀಡದಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ.

ಇವರು ಈಗಾಗಲೇ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರ ಗುಂಪಿನಲ್ಲಿ ಕಾಣಿಸಿಕೊಂಡಿದ್ದು, ಕಾಂಗ್ರೆಸ್ ಪಕ್ಷದೊಂದಿಗೆ ಸರಕಾರದ ಆರಂಭದಿಂದಲೂ ಬಿಜೆಪಿಯತ್ತ ಮುಖ ಮಾಡಿದ್ದರು. ಆನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಚಿವ ಡಿ.ಕೆ. ಶಿವಕುಮಾರ ಜೊತೆಗೆ ಗುರುತಿಸಿಕೊಂಡಿದ್ದು.

ಆದರೆ ಇದೀಗ ಬೆಳಗಾವಿಯ ಸಾಹುಕಾರ್ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಕೊನೆಯವರೆಗೆ ಅವರು ಇವರೊಂದಿಗೆ ಇರುತ್ತಾರೆಯೇ ಇಲ್ಲವೇ ಎಂಬುದು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *