ರಾಜ್ಯ

ಆಪರೇಶನ್ ಗೆ ಆಪರೇಶನ್ ಮಾಡುವ ಎಚ್ಚರಿಕೆ

ಮಂಡ್ಯ : ಆಪರೇಶನ್ ಕಮಲದಿಂದಾಗಿ ಕಂಗಾಲಾಗಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಮುಗಿ ಬಿದ್ದಿದ್ದು, ಜೆಡಿಎಸ್ ಮುಖಂಡ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಗುಡುಗಿದ್ದಾರೆ.

ಆಪರೇಶನ್ ಗೆ ಆಪರೇಶನ್ ಮಾಡಬೇಕಾಗುತ್ತದೆ ಎಂದು ಸಿ.ಎಸ್. ಪುಟ್ಟರಾಜು ಎಚ್ಚರಿಕೆ ನೀಡಿದ್ದು, ಬಿಜೆಪಿ ಆಪರೇಶನ್ ಕಮಲಕ್ಕೆ ಕೈ ಹಾಕಿದರೆ ನಾವು ಕೂಡ ಕೈ ಕಟ್ಟಿ ಕೂಡಲು ಸಾಧ್ಯವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಬಿಜೆಪಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಪಣತೊಟ್ಟಿದ್ದೇವೆ ಎಂದು ಹೇಳಿದರು.

ಬಹುತೇಕ ಕಾಂಗ್ರೆಸ್ ನಾಯಕರು ತಕ್ಕ ಪಾಠ ಕಲಿಸಲು ಸಿದ್ದರಾಗಿದ್ದಾರೆ. ಅದಕ್ಕೆ ಪ್ರತಿಯಾಗಿ ನಾವು ಅವರಿಗೆ ತಕ್ಕ ಪಾಠ ಕಲಿಸ್ತಿವಿ. ಮೂರು ನಾಲ್ಕು ಬಿಜೆಪಿ ಶಾಸಕರು ನಮ್ಮೊಂದಿಗೆ ಸಂಪರ್ಕಕ್ಕೆ ಇದ್ದಾರೆ. ನಾವು ಕೂಡ ಅವರನ್ನು ಕರೆದುಕೊಂಡು ಬರುತ್ತೀವಿ ಎಂದು ಬಿಜೆಪಿಯ ನಾಯಕರಿಗೆ ಎಚ್ಚರಿಕೆ ನೀಡಿದರು.

ಅಲ್ಲದೆ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದೂರವಾಣಿ ಕರೆ ಮಾಡಿ ತಕ್ಷಣವೇ ಬೆಂಗಳೂರಿಗೆ ಆಗಮಿಸುವಂತೆ ಸೂಚಿಸಿದ್ದರಿಂದ ಅವರು ಮಂಡ್ಯ ಪ್ರವಾಸ ಮೊಟಕುಗೊಳಿಸಿ, ರಾಜಧಾನಿಯತ್ರ ಪ್ರಯಾಣ ಬೆಳೆಸಿದ್ದಾರೆ. ಅವರು ಕೂಡ ಬಿಜೆಪಿ ಶಾಸಕರ ಸಂಪರ್ಕಕ್ಕೆ ಯತ್ನಿಸಿದ್ದು, ಅದರಲ್ಲಿ ಯಶಸ್ಸು ಆಗ್ತಾರೆ ಇಲ್ಲವೇ ಎಂಬುದು ಕಾದು ನೋಡಬೇಕಿದೆ.

ಒಟ್ಟಾರೆ ಬಿಜೆಪಿಯ ಕಾರ್ಯತಂತ್ರಕ್ಕೆ ಜೆಡಿಎಸ್ ಪ್ರತಿತಂತ್ರ ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಯಾರು ಯಾರಿಗೆ ಆಪರೇಶನ್ ಮಾಡುತ್ತಾರೆ ಎಂಬುದು ಇದೀಗ ಯಕ್ಷಪ್ರಶ್ನೆಯಾಗಿದೆ.

Please follow and like us:

Leave a Reply

Your email address will not be published. Required fields are marked *