ರಾಜ್ಯ

ಲೋಕಸಭಾ ಚುನಾವಣೆ ಸೀಟು ಹಂಚಿಕೆ ಆಗಿಲ್ಲ

ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಇದೆ.ಹೀಗಾಗಿವಲೋಕಸಭಾ ಚುನಾವಣೆ ಮೈತ್ರಿಯಾಗಿಯೇ ಎದುರಿಸುತ್ತೇವೆ ಎಂದು ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ತಿಳಿಸಿದರು.

ಅವರು ಶನಿವಾರ ಜೆಪಿ.ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಎಷ್ಟು ಸೀಟು ಹಂಚಿಕೆ ಮಾಡಿಕೊಳ್ಳಬೇಕು‌. ಎನ್ನೊದರ ಬಗ್ಗೆ ಮಾತುಕತೆ ಮಾಡಿ ತೀರ್ಮಾನಿಸುತ್ತೇವೆ ಎಂದರು.

ಇದುವರೆಗೂ ಸೀಟು ಹಂಚಿಕೆ ಬಗ್ಗೆ ಮಾತುಕತೆ ಆಗಿಲ್ಲ. ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ನಮ್ಮ ಪಕ್ಷದಿಂದ ಕಣಕ್ಕಿಳಿಸುವುದಿಲ್ಲ ಎಂದ ಅವರು ಕೆಲವು ದಿನಗಳ ಹಿಂದೆ ನಾನು ದೆಹಲಿಗೆ ಹೊಗುವ ಮುನ್ನ
ಎರಡು ದಿನ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರ ಜೊತೆ ಸಭೆ ಮಾಡಿದ್ದೆ. ಸಭೆಯಲ್ಲಿ ಕಾರ್ಯಕರ್ತರ ಸಲಹೆಗಳನ್ನು ಕೇಳಿದ್ದೆನೆ ಎಂದರು.

ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಚಿವ ಸ್ಥಾನ ಯಾವ ರೀತ ಹಂಚಿಕೊಂಡಿದ್ದೇವೆ. ಅದೇ ರೀತಿ ನಿಗಮ‌ ಮಂಡಳಿ ಸ್ಥಾನಗಳನ್ನು ಭರ್ತಿ ಮಾಡ್ತಿವಿ ಎಂದರು.

ಸರ್ಕಾರ ಅಸ್ತಿತ್ವಕ್ಕೆ ಬಂದು ಏಳು ತಿಂಗಳಾಯ್ತು. ನಿಗಮ ಮಂಡಳಿಗಳ ಬಗ್ಗೆ ಇನ್ನೂ ಅಂತಿಮವಾಗಿಲ್ಲ೩:೧ ಭಾಗದ ಸ್ಥಾನ ನಾವು ತುಂಬುತ್ತೇವೆ.
ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿ ಆನಂತರ
ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಬೇಕಿದೆ ಎಂದರು.

ಜ. ೩ ರಂದು ಮುಖಂಡರು,ಪದಾಧಿಕಾರಿಗಳ ಸಭೆ ಕರೆದಿದ್ದೇವೆ.
ಬಳಿಕ ನಿಗಮ ಮಂಡಳಿ ಅಧ್ಯಕ್ಷರ ಭರ್ತಿ ಮಾಡುತ್ತೇವೆ ಎಂದು
ಮಾಜಿ ಪ್ರಧಾನಿ ಹೆಚ್ಡಿಡಿ ಹೇಳಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕ ಗೊಂದಲ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಸುಪ್ರೀಂಕೋರ್ಟ್ ಗೈಡ್ ಲೈನ್ಸ್ ಇದೆ.
ಈ ವಿಷಯದಲ್ಲಿ ಅನವಶ್ಯಕ ಚರ್ಚೆ ಬೇಡ. ಬೇರೆ ರೀತಿಯ ಹೇಳಿಕೆಗಳು ಬೇಡ. ಕೂತು ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕಿದೆ ಎಂದು ಎಚ್.ಡಿ.ದೇವೇಗೌಡರು ಹೇಳಿದರು.

ರೈತರ ಸಾಲಮನ್ನಾ ವಿಚಾರದ ಬಗ್ಗೆ ಅನುಮಾನ ಬೇಡ.
ಆದರೆ ಶೆಡ್ಯೂಲ್ ಬ್ಯಾಂಕುಗಳು ಸಹಕರಿಸುತ್ತಿಲ್ಲ ಎಂದು ದೂರಿದ ಅವರು ಸಿಎಸ್ ಈ ಬಗ್ಗೆ ನಿರಂತರ ಚರ್ಚೆ ಮುಂದುವರಿಸಿದ್ದಾರೆ.
ಸಹಕಾರಿ ಬ್ಯಾಂಕ್ ಸಾಲ ಮನ್ನಾ ಆಗಲಿದೆ ಎಂದರು.

ಕುಮಾರಸ್ವಾಮಿ ಸಾಲ ಮನ್ನಾ ಬಗ್ಗೆ ಪ್ರಯತ್ನ ನಡೆಸಿದ್ದಾರೆ.
ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಷ್ಟ್ರೀಕೃತ ಬ್ಯಾಂಕು ಸಾಲಮನ್ನಾ ಬಗ್ಗೆಯೂ ಸಂಶಯಬೇಡ ಎಂದರು.

ನಿಗಮ ಮಂಡಳಿ ಬಗ್ಗೆ ಅಸಮಾಧಾನ ವಿಚಾರದಲ್ಲಿ ಊಹಾಪೋಹದ ಹೇಳಿಕೆಗಳು ಬೇಡ. ಊಹಾಪೋಹದ ಬಗ್ಗೆ ಕ್ಲಾರಿಪಿಕೇಶನ್ ಕೊಡುವುದಕ್ಕೆ ಹೇಳ್ತಿದ್ದೇನೆ. ಬೇರೆ ನಿಗಮ ಮಂಡಳಿಗಳ ಆಯ್ಕೆ ಬಗ್ಗೆ ಯಾವುದೇ ಸಮಸ್ಯೆಯಿಲ್ಲ, ಏಕಕಾಲದಲ್ಲೇ ಎಲ್ಲಾ ನಿಗಮ ಮಂಡಳಿಗೆ ನೇಮಕ ಮಾಡಲಾಗಿದೆ ಎಂದರು.

Please follow and like us:

Leave a Reply

Your email address will not be published. Required fields are marked *