ಅಂತಾರಾಷ್ಟ್ರೀಯ

ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಸೇರಿ ಖತರ್ ನ್ಯಾಕ್ ಗ್ಯಾಂಗ್ ಅಂದರ್

ಹಾಸನ : ಅಮಾಯಕ ಯುವಕರನ್ನು ಫೇಸ್ ಬುಕ್ ಮೂಲಕ ಗಾಳ ಹಾಕಿ ಆನಂತರ ಅವರನ್ನು ದೋಚಿ ಕೈ ಕೋಡುತ್ತಿದ್ದ ಸುರಸುಂದರಾಗಿ ಯುವತಿ ಸೇರಿ ಐವರನ್ನು ಬಂಧಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆ ಅರಸಿಕೆರೆಯ ಪ್ರಸಿದ್ದ ಜೇನುಕಲ್ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗುವಾಗ ಡ್ರಾಪ್ ಕೇಳಿದ್ದ ಯುವತಿ ತನ್ನ ಗ್ಯಾಂಗ್ ಜೊತೆಗೆ ಸೇರಿ ಅವನ ಬಳಿಯಿದ್ದ ನಗದು ಹಣ, ಎಟಿಎಂ ಕಾರ್ಡ್, ವಾಚು ಹಾಗೂ ಮೋಬೈಲ್ ದೋಚಿ ಪರಾರಿಯಾಗಿದ್ದರು.

ಆನಂತರ ಫೇಸ್ ಬುಕ್ ಮೂಲಕ ಅನೇಕರ ಪರಿಚಯ ಮಾಡಿಕೊಂಡು ಪ್ರೇಮ, ಪ್ರಯಣ, ಪರಸಂಗ ಅಂತ ಯಾಮಾರಿಸಿ ಬಳಿಕ ಬಲೆಗೆ ಕೆಡವುತ್ತಿದ್ದ ಯುವತಿ ಅರ್ಪಿತಾ ಜಿ. ಕೋಂ ಪವನ, ಆಕೆಗೆ ಸಾಥ್ ನೀಡುತ್ತಿದ್ದ ಪವನ ಯಾದವ ಜಿ.ಎಸ್. ಬಿನ್ ಜಿ.ಟಿ ಸದಾಶಿವಯ್ಯ, ಕಿರಣ ಬಿ.ಆರ್. ಬಿನ್ ರಂಗಸ್ವಾಮಿ, ದೊರೆ ಬಿನ್ ಜಯಶಂಕರ ಹಾಗೂ ಹೇಮೇಶ್ ಹೆಚ್.ಕೆ. @ ಲೆಪ್ಟ್ ಬಿನ್ ಕಾಂತರಾಜು ಎಂದು ಗುರುತಿಸಲಾಗಿದೆ.

ಇವರಿಂದ 20 ಸಾವಿರ ನಗದು, ಒಂದು ವಾಚು, ಒಂದು ಬೆಳ್ಳಿ ಚೈನ್, ಒಂದು ಬೈಕ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಾರ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಇವರು ಅರಸಿಕೆರೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ನವೀನ್ ಎಂಬುವರಿಗೆ ಪರಿಚಯ ಮಾಡಿಕೊಂಡು ಪುರದಮ್ಮ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬರುವಾಗ ಗ್ಯಾಂಗ್ ಜೊತೆಗೆ ಸೇರಿ ಆತನ ಬಳಿಯಿದ್ದ ಎಳು ಸಾವಿರ ನಗದು, ಮನೆಯಿಂದ ಒಂದು ಲಕ್ಷ ನಗದು ತರಿಸಿ, 20 ಗ್ರಾಂ ತೂಕದ ಬೆಳ್ಳಿಯ ಚೈನ್ ನ್ನು ಕಿತ್ತುಕೊಂಡಿದ್ದರು.

ಅಲ್ಲದೆ,. ನೋಣವಿನಕೆರೆ ಪೊಲೀಸ್ ಠಾಣೆಯ ವ್ಯಾಪ್ತಿಯ ಕಂಚಿರಾಯಸ್ವಾಮಿ ಅವರಿಂದ ಡ್ರಾಪ್ ಕೇಳಿ ಮೂರು ಸಾವಿರ ನಗದು, ಮೊಬೈಲ್ ಕಸಿದುಕೊಂಡು ಇಪ್ಪತ್ತು ಸಾವಿರ ಖಾತೆಗೆ ಹಾಕುವಂತೆ ಬೆದರಿಕೆ ಹಾಕಿದ್ದರು.

ಚನ್ನರಾಯಪಟ್ಟಣದ ಶರತ್ ಎಂಬುವರಿಗೆ ಫೇಸ್ ಬುಕ್ ಮೂಲಕ ಮೋಹದ ಬಲೆಗೆ ಹಾಕಿ ಆತನನ್ನು ಚನ್ನರಾಯಪಟ್ಠಣದಿಂದ ಅರಸಿಕೆರೆಗೆ ಕರೆದುಕೊಂಡು ಹೋಗಿ ಎರಡು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. ಅಲ್ಲದೆ, ಕೈಯಲ್ಲಿದ್ದ ಎರಡು ಸಾವಿರ ಕಿತ್ತುಕೊಂಡು ಕಳುಹಿಸಿದ್ದರು.

ಇದರೊಂದಿಗೆ ತಿಪಟೂರಿನ ಚಂದ್ರಶೇಖರ್ ಅವರಿಗೆ ಪರಿಚಯ ಮಾಡಿಕೊಂಡು ತೋಟದ ಮನೆಗೆ ಕರೆಯಿಸಿ, ಮೂರು ಲಕ್ಷದ ಚೆಕ್ ಪಡೆದುಕೊಂಡಿದ್ದರು, ಆತನಿಗೆ ಹನಿಟ್ರ್ಯಾಪ್ ಅರಿವಾಗಿದ್ದು, ಹೀಗೆ ಹಲವು ಕಡೆ ಈ ಖರ್ತನ್ಯಾಕ್ ಗ್ಯಾಂಗ್ ಅರ್ಪಿತಾಳನ್ನು ಮುಂದಿಟ್ಟುಕೊಂಡು ಹಣ ಪೀಕಿ ಪೀಕಿ ಆನಂತರ ಅವರಿಗೆ ಕೈ ಕೊಡುತ್ತಿದ್ದರು.

ಇದೀಗ ಅರ್ಪಿತಾ, ಕಿರಣ, ಪವನ, ದೊರೆ ಹಾಗೂ ಹೇಮೇಶ್ ಸುಲಿಗೆ ಮಾಡಿ ಬೆದರಿಸಿ ಹಣ ಫೀಕಿದ ಪ್ರಕರಣದಲ್ಲಿ ಪೊಲೀಸ್ ಅತಿಥಿಯಾಗಿದ್ದಾರೆ.

ಈ ಪ್ರಕರಣ ಪತ್ತೆ ಹಚ್ಚಲು ಎರಡು ಪ್ರತ್ಯೇಕ ತಂಡಗಳು ಕಾರ್ಯನಿರ್ವಹಿಸಿದ್ದು, ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಸಿದ್ದರಾಮೇಶ್ವರ ಎಸ್. ಪಿಎಸ್ ಐಗಳಾದ ವಿನೋದ ರಾಜ್ ಎಸ್.ಪಿ, ಶಬ್ಬೀರ ಹುಸೇನ ಹಾಗೂ ಸಿಬ್ಬಂದಿ ಭೇದಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *